Advertisement
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ| ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಗರದ ಸಾಹಿತಿ ಡಾ| ವ್ಯಾಸರಾವ್ ನಿಂಜೂರು ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಅಣುಶಕ್ತಿ ನಗರ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ಗೀತಾ ಮಂಜುನಾಥ್ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಸಂಯೋಜನೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಅವರು ಮಾಡಲಿದ್ದಾರೆ. ಹಿರಿಯ ಶಿಕ್ಷಕಿ ಮೇರಿ ಪಿಂಟೊ ಅವರು ಪಾಲ್ಗೊಳ್ಳಲಿದ್ದಾರೆ.
ಮೂಲತಃ ಕುಂದಾಪುರದ ಕಂಡೂÉರಿನವರಾದ ದಿನಕರ ನಂದಿ ಚಂದನ್ ಅವರು ಎಳವೆಯಲ್ಲಿಯೇ ಮುಂಬಯಿ ಮಹಾನಗರವನ್ನು ಸೇರಿ ರಾತ್ರಿ ಶಾಲೆಯಲ್ಲಿ ಕಲಿತವರು. ಯಂಗ್‌ಮೆನ್ಸ್ ನೈಟ್ ಹೈಸ್ಕೂಲು ಹಾಗೂ ಕನ್ನಡ ಭವನದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಪಡೆದು ಖಾಸಗಿ ಕಂಪೆನಿಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರ್ಶ ಶಿಕ್ಷಕಿ ಮೇರಿ ಪಿಂಟೊ ದಿನಕರ ನಂದಿ ಚಂದನ್ ಅವರ ಎಂಎ ಶೋಧ ಕೃತಿಯಾಗಿದೆ. ಕಳೆದ ಐದು ದಶಕದಿಂದ ಮುಂಬಯಿಯಲ್ಲಿ ನೆಲೆಸಿದ ಇವರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿವುಳ್ಳವರು. ಸದ್ಯ ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಅಧ್ಯಯನದಲ್ಲಿ ನಿರತರಾಗಿದ್ದಾರೆ.