Advertisement

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

03:50 PM Oct 05, 2024 | Team Udayavani |

ದಿನಕರ್‌ ತೂಗುದೀಪ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ರಾಯಲ್. ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಮೊದಲ ಹಾಡು ಸರಿಗಮ ಕನ್ನಡ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿತ್ತು.

Advertisement

ವಿ.ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದ ನಾನೇ ಕೃಷ್ಣ… ನಾನೇ ಶಾಮ್‌… ಗೀತೆಗೆ ಸಂಜಿತ್‌ ಹೆಗ್ಡೆ ಹಾಗೂ ಎಂ. ಎಂ. ಮನವಿ ಧ್ವನಿಯಾಗಿದ್ದಾರೆ. ಚರಣ್‌ ರಾಜ್‌ ಎಂ. ಆರ್‌. ಸಂಗೀತ ನಿರ್ದೇಶನ ಮಾಡಿದ್ದು, ನಾಯಕ ವಿರಾಟ್‌ ಲಲನೆಯರ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಗೆ ರೆಡಿಯಾಗಿದೆ. ಅದು “ಟಾಂಗ್‌ ಸಾಂಗ್‌’. ಈ ಹಾಡು ಇಂದು ಬಿಡುಗಡೆಯಾಗಲಿದೆ.

“ಕಿಸ್‌’ ಸಿನಿಮಾ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಪರಿಚಿತರಾದ ವಿರಾಟ್‌ ನಾಯಕನಾಗಿ ನಟಿಸುತ್ತಿದ್ದು, ಸಂಜನಾ ಆನಂದ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ, ಛಾಯಾ ಸಿಂಗ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಪ್ರಮೋದ್‌ ಶೆಟ್ಟಿ, ಲವ್‌ ಮಾಕ್ಟೇಲ್‌ ಖ್ಯಾತಿಯ ಅಭಿಲಾಷ್‌ ತಾರಾಬಳಗದಲ್ಲಿದ್ದಾರೆ. ರಾಯಲ್‌ ಚಿತ್ರಕ್ಕೆ ಸಂಕೇತ್‌ ಮೈಸ್‌ ಅವರ ಛಾಯಾಗ್ರಹಣವಿದೆ. “ಕಿಸ್‌’ ಸಿನಿಮಾದಲ್ಲಿ ವಿರಾಟ್‌ ಲವರ್‌ ಬಾಯ್‌ ಆಗಿ ಮಿಂಚಿದ್ದರು. “ರಾಯಲ್’ ಚಿತ್ರದಲ್ಲಿ ಪಕ್ಕಾ ಮಾಸ್‌, ಎನರ್ಜಿಟಿಕ್‌ ಹೀರೊ ಆಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ಚಿತ್ರ ನವೆಂಬರ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next