ಕಲಬುರಗಿ: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿಯಾಗಿ ಡಾ| ದಿಲೀಶ್ ಸಾಸಿ ಶುಕ್ರವಾರ ಅಧಿ ಕಾರ ಸ್ವೀಕರಿಸಿದರು. ಸಿಇಒ ಪ್ರಭಾರ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು.
ಮೂಲತಃ ಕೇರಳದವರಾಗಿರುವ ಡಾ| ದಿಲೀಶ್ ಸಾಸಿ 2017ನೇ ಬ್ಯಾಚ್‌ನ ಐಎಎಸ್ ಅ ಧಿಕಾರಿ ಆಗಿದ್ದಾರೆ. ಎಂಬಿಬಿಎಸ್ ಇವರು ಹಾವೇರಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ರಾಯಚೂರು ಜಿಲ್ಲೆಯ ಲಿಂಗಸೂರು ಉಪ ವಿಭಾಗದ ಸಹಾಯಕ ಅಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಡಾ| ದಿಲೀಶ ಸಾಸಿ ಅವರು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರನ್ನು ಭೇಟಿಯಾಗಿ ಹೂಗುತ್ಛ ನೀಡಿ ಪರಿಚಯಿಸಿಕೊಂಡರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಶರಣಗೌಡ ಪಾಟೀಲ್, ಮುಖಂಡರಾದಹಣಮಂತರಾಯ, ಶರಣಬಸಪ್ಪ ಹಾಗರಗಾ ಇದ್ದರು.
ನೌಕರರಿಂದ ಸನ್ಮಾನ: ಜಿಪಂ ಸಿಇಒ ಡಾ| ದಿಲೀಶ್ ಸಾಸಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಸರ್ಕಾರಿ ನೌಕರರು ಸದಾ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ರಾಜು ಲೇಂಗಟಿ ಹೇಳಿದರು. ಅಲ್ಲದೇ, ಈ ಬಾರಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ವಿಭಾಗೀಯ ಕೇಂದ್ರವಾದ ಕಲಬುರಗಿ ನಗರದಲ್ಲಿ ನಡೆಸಲು ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ನೂತನ ಜಿಪಂ ಸಿಇಒ ಅವರಿಗೆ ಲೇಂಗಟಿ ವಿನಂತಿಸಿದರು.
ಇದನ್ನೂ ಓದಿ:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವಿರೇ ? ಭಾರತದಲ್ಲಿ ಲಭ್ಯವಿರುವ ಪ್ರಮುಖ 5 ಆಯ್ಕೆಗಳು ಇಲ್ಲಿವೆ
ಸಂಘದ ಗೌರವಾಧ್ಯಕ್ಷ ಅಬ್ದುಲ್ ಅಜೀಂ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೊಳಸಾರ, ನೌಕರರಾದ ಸಿದ್ದಲಿಂಗಯ್ಯ ಮಠಪತಿ, ಅಣ್ಣಾರಾವ, ಗುರಲಿಂಗಪ್ಪ ಪಾಟೀಲ್, ರಾಜಕುಮಾರ ಸಾಲಿಮಠ, ಶರಣು ಅರಳಿಮರ, ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸೈಯದ್ ಹಾಜಿಪೀರ್, ಹಣಮಂತ ಮರಡಿ ಹಾಗೂ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.