Advertisement

ಮೂತ್ರನಾಳದ ಸೋಂಕು: ಆಸ್ಪತ್ರೆ ಸೇರಿದ್ದ ದಿಲೀಪ್‌ ಕುಮಾರ್‌ ಚೇತರಿಕೆ

12:24 PM Aug 03, 2017 | udayavani editorial |

ಮುಂಬಯಿ : ಭಾರತೀಯ ಚಿತ್ರರಂಗದ ದಂತ ಕಥೆ ಎನಿಸಿರುವ ಹಿರಿಯ ನಟ ದಿಲೀಪ್‌ ಕುಮಾರ್‌ ಅವರು ನಿನ್ನೆ ಬುಧವಾರ ದೇಹದಲ್ಲಿನ ನೀರಿನ ಕೊರತೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರೀಗ ಚೇತರಿಸಿಕೊಂಡಿದ್ದಾರೆ.

Advertisement

94ರ ಹರೆಯದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರನ್ನು ನಿನ್ನೆ ನಗರ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿರ್ಜಲೀಕರಣ ಮಾತ್ರವಲ್ಲದೆ ಅವರಿಗೆ ಮೂತ್ರನಾಳದ ಸೋಂಕು ಕೂಡ ಬಾಧಿಸುತ್ತಿತ್ತು. 

“ದಿಲೀಪ್‌ ಕುಮಾರ್‌ ಇಂದು ಚೇತರಿಸಿಕೊಂಡಿದ್ದಾರೆ. ಆದರೆ ಇಂದು ಕೂಡ ಅವರು ಆಸ್ಪತ್ರೆಯಲ್ಲಿ ವೈದ್ಯರ ವಿಚಕ್ಷಣೆಯಲ್ಲಿ ಇರಬೇಕಾಗುವುದು; ವೈದ್ಯರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ’ ಎಂದು ದಿಲೀಪ್‌ ಪತ್ನಿ, ಮಾಜಿ ನಟಿ ಸಾಯಿರಾ ಬಾನು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next