Advertisement

ಹಿರಿಯ ನಟ ದಿಲೀಪ್‌ ಕುಮಾರ್‌ ಆಸ್ಪತ್ರೆಯಿಂದ ಬಿಡುಗಡೆ

05:14 PM Aug 09, 2017 | udayavani editorial |

ಹೊಸದಿಲ್ಲಿ : ಅನಾರೋಗ್ಯದಿಂದ ಮುಂಬಯಿ ನಗರ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಅಸ್ಪತ್ರೆಗೆ ದಾಖಲಾಗಿದ್ದ ಹಿಂದಿ ಚಿತ್ರರಂಗದ ಹಿರಿಯ ನಟ, 94ರ ಹರೆಯದ ದಿಲೀಪ್‌ ಕುಮಾರ್‌ ಅವರನ್ನು ಇಂದು ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

Advertisement

ದೇಹದಲ್ಲಿನ ನೀರಿನ ಕೊರತೆ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ  ದಿಲೀಪ್‌ ಕುಮಾರ್‌ ಆಗಸ್ಟ್‌ 2ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ  ಕಿಡ್ನಿ ತೊಂದರೆಗೆ ಗುರಿಯಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಯ ಫ‌ಲವಾಗಿ ಅವರ ದೇಹಾರೋಗ್ಯ ಕ್ರಮೇಣ ಸುಧಾರಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next