Advertisement

ಶ್ರದ್ಧೆ, ಸ್ವತ್ಛತೆಯಿಂದ ವ್ಯವಹರಿಸಿ: ಕೇಮಾರು ಶ್ರೀ

03:45 AM Jan 17, 2017 | Team Udayavani |

ಕುಂದಾಪುರ: ಬಡವರ ಸೇವೆ ಭಗವಂತನ ಆರಾಧನೆಗೆ ಸಮಾನ. ವ್ಯಾಪಾರ ಉತ್ತಮವಿರಬೇಕಾದರೆ ಶ್ರದ್ಧೆ ಮತ್ತು ಸ್ವತ್ಛತೆಯಿಂದ ವ್ಯವಹರಿಸಬೇಕು.  ನಿರ್ವಂಚನೆ, ನ್ಯಾಯಮಾರ್ಗದ ವ್ಯವಹಾರ ನಡೆಯುವಲ್ಲಿಗೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದಿಪನೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.

Advertisement

ಕೋಟೇಶ್ವರ ಅಂಕದಕಟ್ಟೆಯ ಸಹನಾ ಎಸ್ಟೇಟ್‌ನಲ್ಲಿ ಸೋಮವಾರ ತ್ರಿಶೂಲ್‌ ಫರ್ನಿಚರ್‌ ಮತ್ತು ಬಿಲ್ಡಿಂಗ್‌ ಮೆಟೀರಿಯಲ್ಸ್‌ ಮಳಿಗೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಮತ್ತು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಂಸ್ಥೆಗೆ ಶುಭ ಹಾರೈಸಿದರು.

ಕೋಟೇಶ್ವರ ಅಂಶುಮಾಲ ಡೆವಲಪರ್ನ ಮಾರ್ಕೋಡು ಸುಧೀರ್‌ ಕುಮಾರ್‌ ಶೆಟ್ಟಿ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ, ನೋಟರಿ, ವಕೀಲ ಉದಯ ಕುಮಾರ್‌ ಶೆಟ್ಟಿ ಕೊತ್ತಾಡಿ ಮೊದಲಾದವರು ಉಪಸ್ಥಿತರಿದ್ದರು.ಸಂತೋಷ ಕುಮಾರ್‌ ಶೆಟ್ಟಿ ಕೊತ್ತಾಡಿ ಸ್ವಾಗತಿಸಿ, ಪತ್ರಕರ್ತ ವಸಂತ ಗಿಳಿಯಾರು ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಶೆಟ್ಟಿ ಕೊತ್ತಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next