ಉಪ್ಪುಂದ: ಉತ್ತಮ ಶಿಕ್ಷಕರು ವೃತ್ತಿಪರತೆ ಮತ್ತು ವ್ಯಕ್ತಿ ವಿಶಿಷ್ಟತೆಯನ್ನು ಹೊಂದಿದಲ್ಲಿ ಯುವ ಸಮಾಜವನ್ನು ರೂಪಿಸುವಲ್ಲಿ ಸಾರ್ಥಕಭಾವ ಕಾಣುತ್ತಾರೆ. ತೆರೆಮರೆಯಲ್ಲಿ ಶ್ರದ್ಧೆ ಮತ್ತು ಶಿಸ್ತಿನಿಂದ ಕಾಯಕಗೆ,ಯುವ ಶಿಕ್ಷಕರು ಜೀವನದಲ್ಲಿ ಸಾಧನೆಯ ಉನ್ನತ ಮಟ್ಟಕ್ಕೆ ತಲುಪುತ್ತಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಬಾಗಿಲು ಲಲಿತಾ ಹೇಳಿದರು.
ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 25ನೇ ಮಹಿಳಾ ಸ್ನೇಹ ಸಮ್ಮಿಲನ-2019ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತಿಪತಿಯರೊಂದಾಗಿ ಪರಸ್ಪರ ಗೌರವಿಸುತ್ತಾ, ಸಹಕರಿಸುತ್ತಾ, ತಾವೂ ಬೆಳೆದು ಕಿರಿಯರನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವ ಆದರ್ಶ ವ್ಯಕ್ತಿಗಳ ನಡೆನುಡಿ ಮಾರ್ಗದರ್ಶನವಾಗಬೇಕು ಎಂದರು.
ಮಹಿಳಾ ವಿವಿಧೋದ್ದೇ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಯು. ವರಮಹಾಲಕ್ಷ್ಮೀ ಹೊಳ್ಳ, ವಸ್ತ್ರವಿನ್ಯಾಸ ತರಬೇತಿ ಶಿಕ್ಷಕಿ ಕಾವೇರಿ, ಸುಮಿತ್ರಾ ಮೊದಲಾದವರು ಉಪಸ್ಥಿತರಿದ್ದರು.
ಲಲಿತಾ ಅವರನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾದವರಿಗೆ ಬಹುಮಾನ ವಿತರಿಸಿದರು.
ವೀಣಾ ಶ್ಯಾನುಭೋಗ್ ಮತ್ತು ರಮಾ ಆಚಾರ್ಯ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಹಣಾಧಿ ಕಾರಿ ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿದರು. ಸುನೀತಾ ಶೇಟ್ ಅತಿಥಿಗಳ ಪರಿಚಯ ಮಾಡಿದರು. ಸಾವಿತ್ರಿ ಉಪಾಧ್ಯ ನಿರ್ವಹಿಸಿದರು. ಪ್ರಶಾಂತ ಮಯ್ಯ ವಂದಿಸಿದರು.