ದೋಟಿಹಾಳ: ಕೇಸೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಿಂದುಗಡೆ ಇರುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು ಬಿಳುವ ಹಂತಕ್ಕೆ ಬಂದ್ದಿದು ಶಾಲಾ ಮಕ್ಕಳಿಗೆ ಮತ್ತು ಸುತ್ತಮುತ್ತಲು ವಾಸಿಸುವ ಜನರಿಗೆ ಆತಂಕ ಮನೆ ಮಾಡಿದೆ.
ಕೇಸೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಿಂದುಗಡೆಲ್ಲಿ ಸುಮಾರ 30ವರ್ಷಗಳ ಹಿಂದೆ ನಿರ್ಮಿಸಲಾಗಿದೆ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲ ವ್ಯವಸ್ಥೆಗೊಂಡಿದ್ದು ಕಳೇದ 7-8 ವರ್ಷಗಳಿಂದ ನೀರಿ ಟ್ಯಾಂಕ್ ಸೋರುತ್ತದೆ ಇದರಿಂದ ಟ್ಯಾಂಕಿನ ಕಂಬಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿದೆ. ಈ ಟ್ಯಾಂಕ್ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಖಾಸಗಿ ಶಾಲೆ ಇದೆ. ಈ ಎರಡು ಶಾಲೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದು ಒಂದು ವೇಳೆ ಟ್ಯಾಂಕ್ ಕುಸಿದು ಬಿದ್ದರೆ ದೊಡ್ಡ ಅನಾಹುತ ಆಗುವ ಸಾಧ್ಯತೆಗಳಿವೆ. ಈ ಟ್ಯಾಂಕ್ ಬೀಳುವ ಮೊದಲು ಇದಕ್ಕೆ ಸಂಬಂಧಪಟ್ಟ ಪಟ್ಟ ಅಧಿಕಾರಿಗಳು ಸ್ಥಳಾಂತರಿಸಬೇಕು.
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಿಂದುಗಡೆ ಇರುವ ನೀರು ಟ್ಯಾಂಕ್ ಶಿಥಿಲಗೊಂಡಿದ್ದು ಬೀಳುವ ಹಂತಕ್ಕೆ ಬಂದ್ದಿದು ಶಾಲಾ ಮಕ್ಕಳಿಗೆ,ಸುತ್ತಮುತ್ತಲು ವಾಸಿಸುವ ಜನರಿಗೆ ಆತಂಕ ಮೂಡಿರುವುದು ನಿಜ. ಇದರ ಬಗ್ಗೆ ಹಲವು ಭಾರಿ ಸಾಮಾನ್ಯ ಸಭೆಯಲ್ಲಿ ಇದನ್ನು ಸ್ಥಳಾಂತರಿಸಲು ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಶಾಸಕರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕ್ಕೆ ಇದುವರಗೂ ಮುಂದಾಗಿಲ್ಲ ಎಂದು ಗ್ರಾಪಂ ಸದಸ್ಯರು ಹೇಳಿದರು.
ಕೊಪ್ಪಳದಲ್ಲಿ ನಿರ್ಮಾಣದ ಹಂತದಲ್ಲಿ ಇದೆ. ನೀರಿನ ಟ್ಯಾಂಕ್ ಕುಸಿದು ಬಿದ್ದಾಗ ಜಿಲ್ಲಾ ಆಡಳಿತ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಶಿಥಿಲಗೊಂಡ ನೀರಿನ ಟ್ಯಾಂಕ್ ಗಳು ಕೂಡಲೇ ಕೆಡವಬೇಕು ಎಂದು ಹೇಳಿದ್ದರು. ಆದರೆ ಇದುವರಗೂ ಈ ಟ್ಯಾಂಕ್ ಬಗ್ಗೆ ಗಮನ ಹರಿಬೇಕಿದ ಆಧಿಕಾರಿಗಳು ಜಾಣ ಕುರುಡವನ್ನು ಪ್ರದರ್ಶಿಸುತ್ತಿದಾರೆ. ಇನ್ನಾದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ತಿಳಿಸಿದಾರೆ.
ಕೇಸೂರ ಗ್ರಾಮದ ನೀರು ಟ್ಯಾಂಕ್ ಶಿಥಿಲಗೊಂಡಿದ್ದು ಇದನ್ನು ಸ್ಥಳಾಂತರಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದಾರೆ. ಇದರ ಬಗ್ಗೆ ಶಾಸಕರು ತರಲಾಗಿದೆ. ಹಲವು ಭಾರಿ ಸಾಮಾನ್ಯ ಸಭೆಗಳಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆ. ಸದ್ಯ ಗ್ರಾಮಕ್ಕೆ ಈ ಟ್ಯಾಂಕ್ ನಿಂದ ನೀರು ಸರಬರಾಜು ಮಾಡಲಾಗುತ್ತದೆ. ಇದನ್ನು ಕೆಡವಿದರೆ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಹೀಗಾಗಿ ಸದ್ಯ ಜೆಜೆಎಂನವರ ಕುಡಿಯುವ ಹೊಸ ನೀರಿ ಟ್ಯಾಂಕ್ ಸಿದ್ದಗೊಂಡಿದ್ದು. ಹೊಸ ಟ್ಯಾಂಕ್ ನಮ್ಮ ಕೈ ಸೇರಿದ ಕೂಡಲೇ ಈ ಶಿಥಿಲಗೊಂಡ ಟ್ಯಾಂಕ್ ನ್ನು ಕೆಡವುತ್ತೇವೆ ಎಂದು ಪಿಡಿಒ ಅಮೀನಸಾಬ್ ಅಲಂದಾರ ಅವರು ತಿಳಿಸಿದರು.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ