ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಪಕ್ಷ ಅ ಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿ ಧಿಯಡಿ ಮತ್ತೆ ವಿಶೇಷ ಸ್ಥಾನಮಾನ ಕಲ್ಪಿಸುವ ಹೇಳಿಕೆ ದೇಶದ್ರೋಹದ ಹೇಳಿಕೆ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ. ಪಾಟೀಲ ಆರೋಪಿಸಿದರು.
ವನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹೇಳಿಕೆ ನೀಡುತ್ತಿರುವ ದಿಗ್ವಿವಿಜಯ ಸಿಂಗ್ ಅವರಿಗೆ ನಾಚಿಗೆ ಆಗಬೇಕು. ಈ ಹೇಳಿಕೆ ಕಾಂಗ್ರೆಸ್ ಪಕ್ಷದ್ದು ಅಥವಾ ಅವರ ವೈಯಕ್ತಿಕ ಹೇಳಿಕೆಯೋ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ಹೇಳಿಕೆ ಅವರ ವೈಯಕ್ತಿಕ ಆಗಿದ್ದರೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಕೂಡ 370ನೇ ವಿ ಧಿಯ ರದ್ಧತಿ ಬಹು ದೊಡ್ಡ ಪ್ರಮಾದ ಎಂದು ಟ್ವೀಟ್ ಮಾಡಿದ್ದರು. ಈಗ ಕಾಶ್ಮೀರ ಶಾಂತವಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಇದು ಬೇಡವಾಗಿದೆ ಎಂದು ದೂರಿದರು.
ಬಿಜೆಪಿ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಅಮರು ಮಾತನಾಡಿ, ದೇಶ್ಯಾದಂತ ಕಾಂಗ್ರೆಸ್ ಪಕ್ಷ ತೈಲ ಬೆಲೆ ಎರಿಕೆ ಖಂಡಿಸಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುತ್ತಿದ್ದೇವೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ತಿಳಿಯುತ್ತಿಲ್ಲ. ಇದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ ಎಂಬುದಕ್ಕೆ ಸಾಕ್ಷಿ ಎಂದರೇ ತಪ್ಪಾಗಲಿಕ್ಕಿಲ್ಲ. ತೈಲ ದರಗಳ ಒಟ್ಟು ಕರಗಳಲ್ಲಿ ರಾಜ್ಯ ಸರ್ಕಾರಗಳ ಕರ ಭಾರವೇ ಜಾಸ್ತಿ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲವೇ? ಅಥವಾ ಜಾಣ ಕಿವುಡ ಜಾಣ ಕುರುಡತನವೇ? ಎಲ್ಲ ಕರಗಳ ಹಣವನ್ನು ಕೇಂದ್ರವೇ ನುಂಗುತ್ತಿದೆ ಏನೋ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಮೋದಿ ಸರ್ಕಾರವಾಗಲಿ, ಕೇಂದ್ರವಾಗಲಿ ತೈಲ ಮೇಲಿನ ಕರಗಳನ್ನು ಕಾಂಗ್ರೆಸ್ಸಿಗರು 2ಜಿ, 3ಜಿ, ಕೋಲ್‌ಗೇಟ್ ಇತ್ಯಾದಿ ಹಗರಣಗಳಲ್ಲಿ ನುಂಗಿ ನೀರು ಕುಡಿದಂತೆ ಕುಡಿಯದೇ ತೈಲೋತ್ಪನ್ನಗಳಿಂದ ಬರುತ್ತಿರುವ ಹಣವನ್ನು ದೇಶಕ್ಕಾಗಿ ಸದ್ವಿನಿಯೋಗದ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಸಮಸ್ತ ದೇಶದ ಜನತೆಗೆ ಉಚಿತ ಲಸಿಕೆ ನೀಡುದಾಗಿ ಘೋಷಿಸಿದೆ. ಇದಕ್ಕಾಗಿ 3500 ಕೋಟಿ ಹಣ ವ್ಯಯಿಸಿದೆ. ಮೋದಿ ಅವರು ಅ ಧಿಕಾರಕ್ಕೆ ಬಂದ ಮೇಲೆ ದೇಶದದಲ್ಲಿ ವಿದ್ಯುತ್ ಕಾಣದ 18000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದರು.
ಪ್ರತಿ ರೈತರ ಖಾತೆಗೆ 6000 ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ. ದೇಶದ 80 ಕೋಟಿ ಜನತೆಗೆ ಕೋವಿಡ್ ಸಂಕಷ್ಟದಲ್ಲಿ ದೀಪಾವಳಿವರೆಗೆ ಉಚಿತ ರೇಶನ್ ನೀಡಲು ಒಂದು ಲಕ್ಷ ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಮೋದಿ ಅವರು ಆಡಳಿತಾವಧಿ ಯಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಮೂಲ ಸೌಕರ್ಯಗಳ ಅಭಿವೃದ್ಧಿ, ರಸ್ತೆ, ನೀರು, ಚರಂಡಿ ವ್ಯವಸ್ಥೆ, ಗಂಗಾ ಶುದ್ಧೀಕರಣ ಅಭಿವೃದ್ಧಿ, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್, ಅಧುನಿಕ ರಕ್ಷಣಾ ಸಾಮಗ್ರಿ ರಫೆಲ್ ನಂತಹ ಯುದ್ಧ ವಿಮಾನ ಒದಗಿಸಲಾಗಿದೆ ಎಂದರು.
ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ ಮಾತನಾಡಿ, ಮೋದಿ ಅವರು ಪ್ರಧಾನಿ ಆದ ಮೇಲೆ ದೇಶಕ್ಕೆ ಭದ್ರತೆ ಸಿಕ್ಕದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟಿದ್ದಾರೆ ಎಂದು ಹೇಳಿದರು.