Advertisement
ದೇಶದ ಭದ್ರತಾಪಡೆಗಳು ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿವೆ. ಅದನ್ನು ನಿರೂಪಿಸುವ ಅಗತ್ಯವಿಲ್ಲ ಎಂದಿದ್ದಾರೆ. ಹೇಳಿಕೆ ಬಗ್ಗೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.ಇದೇ ವೇಳೆ ತಮ್ಮನ್ನು ಜಾಲತಾಣಗಳಲ್ಲಿ ಪಪ್ಪು ಎಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನನ್ನ ವ್ಯಕ್ತಿತ್ವ ಹಾಳು ಮಾಡಲು ಬಿಜೆಪಿ ಹಣ ಸುರಿಯುತ್ತಿದೆ. ಆದರೆ, ದೇಶದಲ್ಲಿ ಗೆಲ್ಲುವುದು ಹಣವಲ್ಲ, ಸತ್ಯ ಎಂಬುದನ್ನು ಶೀಘ್ರವೇ ಕಾಂಗ್ರೆಸ್ ಬಿಜೆಪಿಗೆ ತಿಳಿಸಲಿದೆ ಎಂದರು.
ಇನ್ನೊಂದೆಡೆ, ಸಿಂಗ್ ಹೇಳಿಕೆ ಖಂಡಿಸಿ ದೇಶದ ಹಲವು ಭಾಗಗಳಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ಕಾಂಗ್ರೆಸ್ ಡಿಎನ್‌ಎ ಪಾಕಿಸ್ತಾನದ ಪರವಿದೆ. ಅವರು ಒಂದು ಬಾರಿ ಸರ್ಜಿಕಲ್ ದಾಳಿಗೆ ಸಾಕ್ಷಿ ಕೇಳುತ್ತಾರೆ. ಮತ್ತೊಂದು ಬಾರಿ ರಾಮಸೇತು, ಕೆಲವೊಮ್ಮೆ ರಾಮನ ಅಸ್ತಿತ್ವಕ್ಕೆ ಸಾಕ್ಷಿ ಕೇಳುತ್ತಾರೆ’ ಎಂದರು.