Advertisement

ರಾಘವೇಂದ್ರ ಸ್ವಾಮಿ ಮಠದಲ್ಲಿ ಗಣ್ಯರ ಸನ್ಮಾನ

03:55 PM Aug 17, 2022 | Team Udayavani |

ಕಲಬುರಗಿ: ನಗರದ ಜಗತ್‌ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

Advertisement

ಡಾ| ಹಣಮಂತಾಚಾರ್ಯ ಸರಡಗಿ ನೇತೃತ್ವದಲ್ಲಿ ಉದ್ಯಮಿ ಡಾ| ಕೃಷ್ಣಾಜಿ ಕುಲಕರ್ಣಿ, ಸಕ್ಕರೆರೋಗ ತಜ್ಞ ಡಾ| ಮಂಜುನಾಥ ಅಣಕಲ್‌, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಭಾರ್ಗವಿ ಎಸ್‌. ಕುಲಕರ್ಣಿ, ನರಹರಿ ಪಾಟೀಲ, ವೆಂಕಟೇಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಅನಿಲ ಬಡದಲ, ಸಂಚಾಲಕ ಪವನ ಫಿರೋಜಾಬಾದ್‌, ಉಪಾಧ್ಯಕ್ಷರಾದ ಗೋಟೂರ ಹಣಮಂತರಾವ್‌, ಕಾರ್ಯದರ್ಶಿ ಶಂಕರರಾವ ಕುಲಕರ್ಣಿ, ಶಶಿಕಾಂತ ಸಾಗನೂರ, ನೀಲಲೋಹಿತ, ವಿಜಯಕುಮಾರ ಮುದ್ಲಿಯರ್‌, ಮಹೇಶ ಮುದ್ಲಿಯರ್‌, ಪ್ರಮೋದ ದೇಸಾಯಿ, ಉಮಾಕಾಂತರಾವ, ಭೀಮಸೇನರಾವ್‌, ವಿಜಯಕುಮಾರ ಸಾಗನೂರ, ಪ್ರಕಾಶ ಕುಲಕರ್ಣಿ, ಜಯತೀರ್ಥ ದೇಶಪಾಂಡೆ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next