Advertisement
ಆದರೇ, ವಿಲ್ ಮಾಡಿಸಲು ಹರಸಾಹಸ ಪಡಬೇಕೆಂದಿಲ್ಲ, ವಕೀಲರಿಗೆ ಹಣ ಪಾವತಿಸಬೇಕಿಲ್ಲ, ಪ್ರಪಂಚವೇ ಡಿಜಿಟಲ್ ನತ್ತ ಮುಖ ಮಾಡುತ್ತಿದೆ. ಅಂತಹ ಸಂದರ್ಭದಲ್ಲಿ ಈಗ ಡಿಜಿಟಲ್ ನಲ್ಲಿ ವಿಲ್ ಕೂಡ ಮಾಡಬಹುದಾಗಿದೆ. ಆನ್ ಲೈನ್ ಮೂಲಕ ಕೆಲವೇ ಕೆಲವು ನಿಮ್ಮ ಬೆರಳ ತುಡಿಯ ಕ್ಲಿಕ್ಸ್ ಗಳಿಂದ ನೀವು ಯಾರಿಗೆ ವಿಲ್ ಬರೆಯಬೇಕೆಂದಿದ್ದೀರೋ ಅವರಿಗೆ ವಿಲ್ ಬರೆದು ಮುಗಿಸಬಹುದು. ಅದು ಕೂಡ ಕೇಲವ ಅರ್ಧ ಗಂಟೆಯಲ್ಲಿ ಎಂದರೇ, ನೀವು ಆಶ್ಚರ್ಯ ಪಡಬೇಕೆಂದಿಲ್ಲ.
Related Articles
Advertisement
*ವೆಬ್ ಸೈಟ್‌ನಲ್ಲಿ, ಲಾಗಿನ್ ಐಡಿಯನ್ನು ನೋಂದಾಯಿಸಿ ಮತ್ತು ಕ್ರಿಯೇಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸಿಕೊಂಡು ಆನ್ ಲೈನ್‌ನಲ್ಲಿ (3,000 ರಿಂದ 5,000 ರೂ.) ಶುಲ್ಕವನ್ನು ಪಾವತಿಸಬಹುದು.
*ಈ ಕೆಳಗಿನ ವರ್ಗಗಳಿಂದ ಆರಿಸಿಕೊಳ್ಳಿ : ಲಿಂಗ, ಧರ್ಮ, ನಿವಾಸ ಸ್ಥಿತಿ, ಉದ್ಯೋಗ ಮತ್ತು ರಾಷ್ಟ್ರೀಯತೆ (ಭಾರತೀಯ / ಎನ್ ಆರ್ ಐ) ಇವೆಲ್ಲವೂ ಪರಿಗಣಿಸಬೇಕಾದ ಅಂಶಗಳಾಗಿವೆ.
*ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ಮತ್ತು ನಿಮ್ಮ ಎಲ್ಲಾ ಸ್ವತ್ತುಗಳ ಮಾಹಿತಿ ಭರ್ತಿ ಮಾಡಿ.
*ನಿಮ್ಮ ಉತ್ತರಾಧಿಕಾರಿಗಳಿಗೆ ನೀವು ಅಧಿಕಾರ ನೀಡಲು ಬಯಸುವ ಸ್ವತ್ತುಗಳ ವಿವರಗಳನ್ನು ಭರ್ತಿ ಮಾಡಿ.
*ಸಬ್ ಮಿಟ್ ಬಟನ್ ಕ್ಲಿಕ್ ಮಾಡುವ ಮೂಲಕ ಇ-ವಿಲ್ ಅಥವಾ ಡಿಜಿಟಲ್ ವಿಲ್ ನನ್ನು ಸಲ್ಲಿಸಿ ಅಥವಾ ಇ-ವಿಲ್ ಜನರೇಟ್ ಮಾಡಿ.
*ಅರ್ಹ ವಕೀಲರಿಂದ ವಿಲ್ ನ ಕರಡು ಮಾಡಲು ಅರ್ಹ ಡಿಜಿಟಲ್ ವಿಲ್ ಸೇವಾ ಪೂರೈಕೆದಾರರು ನೀಡುತ್ತಾರೆ.
*ನಕಲು ಕರಡು ನಿಮಗೆ ಕಳುಹಿಸಲಾಗುವುದು.
*ಅದನ್ನು ಪರೀಕ್ಷಿಸಿ. ಲೋಪದೋಷಗಳನ್ನು ತಿದ್ದುಪಡಿ ಮಾಡಿ.
*ವಿಲ್ನ ಅಂತಿಮ ಕರಡನ್ನು ನಿಮಗೆ ಇ ಮೇಲ್ ಮೂಲಕ ಕಳುಹಿಸಲಾಗುತ್ತದೆ. ವಿಲ್ ನ ಕಾಯಂಪ್ರತಿಗಳ ಸಹಿಗೆ ಅಗತ್ಯವಾದ ಮಾರ್ಗಸೂಚಿಗಳ ಕುರಿತ ಮಾಹಿತಿಯೊಂದಿಗೆ ನಿಮ್ಮ ಮನೆಗೆ ಕಳಹಿಸಲಾಗುತ್ತದೆ.
*ನಿಮ್ಮ ವಿಲ್ನ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡಿ
ಇ-ವಿಲ್ ನ ಪ್ರಯೋಜನಗಳು ಏನೇನು..?
*ಇ- ವಿಲ್ ರಚಿಸುವ ಪ್ರಕ್ರಿಯೆಯು ಸರಳ, ಅವಲಂಬನೆಯ ಅಗತ್ಯವಿಲ್ಲ ಮತ್ತು ಹೊಂದಿಕೊಳ್ಳಬಲ್ಲದು.
*ಇದು ಸಮಯವನ್ನು ಕಾಪಾಡುತ್ತದೆ, ಭದ್ರತೆ ಹೆಚ್ಚಿರುತ್ತದೆ ಮತ್ತು ಡೇಟಾವನ್ನು ಖಾಸಗಿಯಾಗಿರಿಸುತ್ತದೆ.
*ವೃತ್ತಿಪರ ವಕೀಲರು ಇ-ವಿಲ್ ಸಿದ್ಧಪಡಿಸುತ್ತಾರೆ.
*ನಿಮ್ಮ ಎಲ್ಲಾ ಆಸ್ತಿ ಮಾಹಿತಿಯನ್ನು ಸಂಘಟಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
*ಸಂಪತ್ತಿನ ಹಂಚಿಕೆಯನ್ನು ಭದ್ರಪಡಿಸುವ ಸರಳ ವಿಧಾನ.
*ಸೇವೆ ಸಮಂಜಸವಾದ ವೆಚ್ಚದಲ್ಲಿ ಲಭ್ಯವಿದೆ.
*ಇ-ವೆಬ್‌ಸೈಟ್ ವಿಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಇದನ್ನೂ ಓದಿ : ಸಾಲ ತಂದಾದರೂ ನೀರಾವರಿ ಯೋಜನೆಗಳ ಕಾಮಗಾರಿ ಮುಗಿಸುತ್ತೇವೆ: ಸಿಎಂ ಯಡಿಯೂರಪ್ಪ