Advertisement
ಇದೇ 16ರಂದು 101 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಯಾಗಲಿವೆ. ಪ್ರತಿ ಕ್ಯಾಂಟೀನ್‌ನಲ್ಲಿ ನಿತ್ಯ 500 ಮಂದಿಗೆ ತಿಂಡಿ ಮತ್ತು ಊಟವನ್ನು ವಿತರಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ಎಷ್ಟು ಮಂದಿಗೆ ತಿಂಡಿ ಹಾಗೂ ಊಟ ಲಭ್ಯವಿದೆ ಎಂಬ ಮಾಹಿತಿ ನೀಡುವ ಉದ್ದೇಶದಿಂದ ಕ್ಯಾಂಟೀನ್ ಹೊರಭಾಗದಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಸಲಾಗುತ್ತಿದೆ.
Related Articles
Advertisement
ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಡುಗೆ ಮನೆಗಳು ಹಾಗೂ ಕ್ಯಾಂಟೀನ್‌ಗಳಿಗೆ ಆಹಾರ ಅಧಿಕಾರಿಗಳು ತೆರಳಿ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಹಾರದ ಗುಣಮಟ್ಟ ಅಳೆಯಲು ಈಗಾಗಲೇ ಆಹಾರ ಇಲಾಖೆಗೆ ಪತ್ರ ಬರೆಯಲಾಗಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷೆ ನಡೆಸಲಿದ್ದಾರೆ ಎಂದರು.
ನಗರದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕಾಗಿ 181 ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಯಾವುದೇ ವಿವಾದಿತ ಸ್ಥಳಗಳಲ್ಲಿ ಕ್ಯಾಂಟೀನ್ ನಿರ್ಮಿಸುತ್ತಿಲ್ಲ. ಪಾಲಿಕೆಯ ವ್ಯಾಪ್ತಿಯಲ್ಲಿ 1,187 ಉದ್ಯಾನಗಳು ಹಾಗೂ 287 ಆಟದ ಮೈದಾನಗಳಿವೆ. ಆ ಪೈಕಿ 227 ಖಾಲಿ ಜಾಗದಲ್ಲಿ ಯಾವುದೇ ಉದ್ದೇಶಕ್ಕೂ ಬಳಕೆಯಾಗದೆ ಖಾಲಿ ಉಳಿದಿವೆ. ಇಂತಹ ಕಡೆಗಳಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿ ವತಿಯಿಂದ 125 ಇಂದಿರಾ ಕ್ಯಾಂಟೀನ್ ಹಾಗೂ 14 ಅಡುಗೆ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಸದ್ಯ 6 ಅಡುಗೆ ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಪ್ರತಿ ಅಡುಗೆ ಮನೆಯಿಂದ 5 ರಿಂದ 6 ಸಾವಿರ ಮಂದಿಗೆ ಊಟ, ಉಪಹಾರವನ್ನು ಪೂರೈಕೆ ಮಾಡಲಾಗುವುದು ಎಂದು ಮಂಜುನಾಥ್ ತಿಳಿಸಿದರು.
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಬಿಬಿಎಂಪಿ 198 ವಾರ್ಡ್‌ಗಳಲ್ಲಿಯೂ ಕ್ಯಾಂಟೀನ್ ಆರಂಭಿಸಬೇಕೆಂಬ ಉದ್ದೇಶವಿತ್ತು. ಆದರೆ, ಕಾರಣಾಂತರಗಳಿಂದ ಎಲ್ಲ ಕಡೆಗಳಲ್ಲಿ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಗಸ್ಟ್ 16ರಂದು 101 ಕಡೆಗಳಲ್ಲಿ ಕ್ಯಾಂಟೀನ್‌ಗಳು ಲೋಕಾರ್ಪಣೆ ಮಾಡಲಾಗುವುದು.
ಸರ್ಕಾರ 125 ಕ್ಯಾಂಟೀನ್ ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು. ಆದರೆ, ಹಲವು ಭಾಗಗಳಲ್ಲಿ ಕ್ಯಾಂಟೀನ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದೂ ಸಹ ಸಾಧ್ಯವಾಗಲಿಲ್ಲ. ಈಗಾಗಲೇ 87 ಕಡೆಗಳಲ್ಲಿ ಕ್ಯಾಂಟೀನ್ ಪೂರ್ಣಗೊಂಡಿದ್ದು, ಉಳಿದ ಮೂರು ದಿನಗಳಲ್ಲಿ 14 ಕ್ಯಾಂಟೀನ್ ಪೂರ್ಣಗೊಳಿಸಲಾಗುವುದು ಎಂದರು.
ಕ್ಯಾಂಟೀನ್‌ಗಳನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಆರಂಭದಲ್ಲಿ ವಿರೋಧ ಪಕ್ಷದವರು ಸೇರಿದಂತೆ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಯೋಜನೆ ಇದಾಗಿದ್ದು, ಇಂತಹ ಜನಸ್ನೇಹಿ ಯೋಜನೆಗೆ ಯಾರೂ ಅಡ್ಡಿಮಾಡಬಾರದು ಎಂದು ಮನವಿ ಮಾಡಿದರು.
ಸೋಮವಾರ ಆ್ಯಪ್‌ಗೆ ಚಾಲನೆಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಇಂದಿರಾ ಕ್ಯಾಂಟೀನ್ ಆ್ಯಪ್ ಸೋಮವಾರ ಬಿಡುಗಡೆಯಾಗಲಿದ್ದು, ಆ್ಯಪ್‌ನಲ್ಲಿ ಆಯಾ ದಿನ ತಿಂಡಿ ಹಾಗೂ ಊಟದ ಮೆನು, ಸಮೀಪದ ಐದು ಕ್ಯಾಂಟೀನ್‌ಗಳ ಮಾಹಿತಿ ದೊರೆಯಲಿದೆ. ಇದರೊಂದಿಗೆ ಸಾರ್ವಜನಿಕರು ಕ್ಯಾಂಟೀನ್ ಕುರಿತ ದೂರುಗಳನ್ನು ಆ್ಯಪ್ ಮೂಲಕವೇ ಸಲ್ಲಿಕೆ ಮಾಡಬಹುದಾಗಿದೆ. ಸಕಾಲಕ್ಕೆ ಆಹಾರ ಪೂರೈಸಬೇಕು
ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಸಕಾಲಕ್ಕೆ ಆಹಾರವನ್ನು ಪೂರೈಕೆ ಮಾಡಲಿದ್ದಾರೆ. ಪ್ರತಿ ಅಡುಗೆ ಮನೆಯಲ್ಲಿ 20-25 ಮಂದಿ ಹಾಗೂ ಕ್ಯಾಂಟೀನ್‌ಗಳಲ್ಲಿ 7 ಮಂದಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಪ್ರಯೋಗಿಕ ಕಾರ್ಯಕಗಳು ನಡೆದಿದ್ದು, ಅಡುಗೆ ಮನೆಯಿಂದ ಕ್ಯಾಂಟೀನ್ ಬಳಿಗೆ ಆಹಾರ ಕೊಂಡೊಯ್ಯಲು ಸಮಯವಾಗುತ್ತದೆ ಎಂಬುದನ್ನು ತಿಳಿಯಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಗಳು
– ಹಳೆ ವಿಮಾನ ನಿಲ್ದಾಣ ರಸ್ತೆ
– ಸರ್ವಜ್ಞನಗರ
– ಹೆಬ್ಟಾಳ
-ದಾಸರಹಳ್ಳಿ
– ಸಿ.ವಿ.ರಾಮನ್ ನಗರ
– ರಾಜರಾಜೇಶ್ವರಿ ನಗರ ಕ್ಯಾಂಟಿನ್ ತಿಂಡಿ-ಊಟ ದೊರೆಯುವ ಸಮಯ
– ಬೆಳಗ್ಗೆ 7.30 ರಿಂದ 10.30
– ಮಧ್ಯಾಹ್ನ 12.30 ರಿಂದ 2.30
– ರಾತ್ರಿ 7.30 ರಿಂದ 9.30