Advertisement

ಡಿಜಿಟಲ್‌ ಮಾರ್ಕೆಟಿಂಗ್‌ : ಉದ್ಯೋಗ ಕ್ಷೇತ್ರದ ಭರವಸೆ

07:10 PM Mar 16, 2021 | Team Udayavani |

ಅಸೋಚಾಮ್-ಪಿಡಬ್ಲ್ಯುಸಿ ಜಂಟಿಯಾಗಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ 2022ರ ವೇಳೆಗೆ 859 ದಶಲಕ್ಷಕ್ಕೇರುವ ನಿರೀಕ್ಷೆ ಇದೆ. ಕಡಿಮೆ ಬೆಲೆಯ ಮೊಬೈಲ್‌ ಫೋನ್‌ ಗಳು ಹಾಗೂ ಸುಲಭವಾಗಿ ಇಂಟರ್‌ನೆಟ್‌ ಸೌಲಭ್ಯ ದೊರೆಯುತ್ತಿರುವುದ ರಿಂದ ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ.

Advertisement

ಹೆಚ್ಚುತ್ತಿರುವ ಡಿಜಿಟಲ್‌ ತಂತ್ರಜ್ಞಾನದ ಪ್ರಭಾವದಿಂದಾಗಿ ಮುಂದಿನ 3 ವರ್ಷಗಳಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಸುಮಾರು 3 ಲಕ್ಷ ಉದ್ಯೋಗದ ಅವಕಾಶಗಳು ಹುಟ್ಟಿಕೊಳ್ಳಲಿವೆ ಎಂಬ ಮಾತುಗಳಿವೆ. ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು, ಸಂಬಂಧಿತ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿವೆ. ಸದ್ಯಕ್ಕೆ ಬೇಡಿಕೆಯಲ್ಲಿರುವ ಡಿಜಿಟಲ್‌ ಮಾರ್ಕೆಟಿಂಗ್‌ ವೃತ್ತಿಯ ವಿವರ ಇಂತಿದೆ.

ಸರ್ಚ್‌/ಸಾಮಾಜಿಕ/ಡಿಜಿಟಲ್‌ ಮಾರ್ಕೆಟಿಂಗ್‌ ವಿಶ್ಲೇಷಕರು :

ಮಾರ್ಕೆಟಿಂಗ್‌ ಪ್ರಚಾರ ನಡೆಸುವುದು ಹಾಗೂ ಅದರ ಮೇಲೆ ನಿಗಾ ಇಡುವುದು, ಇ-ಮೇಲ್‌ ಮಾರ್ಕೆಟಿಂಗ್‌ ಹಾಗೂ ಅಂಗಸಂಸ್ಥೆ ಮಾರುಕಟ್ಟೆ ಪ್ರಚಾರಗಳನ್ನು ನಡೆಸುವುದು ಡಿಜಿಟಲ್‌ ಮಾರ್ಕೆಟಿಂಗ್‌ ವಿಶ್ಲೇಷಕರ ಜವಾಬ್ದಾರಿಯಾಗಿರುತ್ತದೆ.

ಬ್ರಾಂಡ್‌ ಮಾರ್ಕೆಟಿಂಗ್‌ : ಗ್ರಾಹಕರ ತಿಳವಳಿಕೆ ಹಾಗೂ ದತ್ತಾಂಶದ ಆಧಾರದ ಮೇಲೆ ಬ್ರಾಂಡ್‌ನ‌ ಉದ್ದೇಶಗಳನ್ನು ಪೂರೈಸಲು ಬ್ರಾಂಡ್‌ ಮಾರ್ಕೆಟರ್‌ ಇರುತ್ತಾರೆ. ಜಾಲತಾಣ, ಇ-ಮೇಲ್‌ಗ‌ಳು, ಸಾಮಾಜಿಕ ಮಾದ್ಯಮ ಹಾಗೂ ಬ್ಲಾಗ್‌ಗಳನ್ನು ಬಳಸಿಕೊಂಡು ಅವರು ಕೆಲಸ ಮಾಡಬೇಕಾಗುತ್ತದೆ.

Advertisement

ವಿಷಯ ತಂತ್ರಜ್ಞರು : ಬಳಕೆದಾರರ ಅಗತ್ಯಗಳು ಹಾಗೂ ಉದ್ಯಮದ ಗುರಿಗಳ ಆಧಾರದಲ್ಲಿ ವಿಷಯ ತಂತ್ರಜ್ಞರು ಸಂಬಂಧಪಟ್ಟ ವಿಷಯದ ಯೋಜನೆ ರೂಪಿಸಿ, ಅಭಿವೃದ್ಧಿಪಡಿಸಿ, ಒದಗಿಸಬೇಕಾಗುತ್ತದೆ.

ಕಾರ್ಯನಿರ್ವಹಣಾ ಮಾರ್ಕೆಟರ್‌ : ಪ್ರಚಾರ ಆಂದೋಲನ ಗಳನ್ನು ನಡೆಸುವುದು, ದತ್ತಾಂಶವನ್ನು ವಿಶ್ಲೇಷಿಸುವುದು, ಕಾರ್ಯನಿರ್ವಹಣಾ ಮಾರ್ಕೆಟರ್‌ನ ಜವಾಬ್ದಾರಿಯಾಗಿರುತ್ತದೆ.

ಸಾಮಾಜಿಕ ಮಾಧ್ಯಮ ನಿರ್ವಾಹಕರು : ಬ್ರಾಂಡ್‌, ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಗ್ರಾಹಕರೊಂದಿಗೆ ಸಂವಹನ ನಡೆಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಸಹಾಯ ಮಾಡುವುದೇ ಸಾಮಾಜಿಕ ಮಾಧ್ಯಮ ನಿರ್ವಾಹಕರ ಕೆಲಸ.

Advertisement

Udayavani is now on Telegram. Click here to join our channel and stay updated with the latest news.

Next