Advertisement
ಧಾರ್ಮಿಕ, ಶೈಕ್ಷಣಿಕವಾಗಿ ಹೆಸರಾಗಿರುವತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವತಿಯಿಂದಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿಒಂದಾದ”ಡಿಜಿಟಲ್ ಲೈಬ್ರರಿ’ ಯೋಜನೆಗೆ ” “social aspects’ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಕೇಂದ್ರಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳಸಚಿವಾಲಯದಿಂದ ಸ್ಮಾರ್ಟ್ ಸಿಟಿ ಯೋಜನೆಪ್ರಾರಂಭವಾಗಿ 6ನೇ ವರ್ಷ ತುಂಬಿದ ಹಿನ್ನೆಲೆ ಜೂ.25ರಂದುದೆಹಲಿಯಲ್ಲಿನಡೆದ ವಾರ್ಷಿಕೋತ್ಸವಸಮಾರಂಭದಲ್ಲಿ ವಿವಿಧ ವಿಭಾಗಗಳಿಗೆ ಪ್ರಶಸ್ತಿಘೋಷಿಸಿದ್ದು, ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿಅನುಷ್ಠಾನಗೊಂಡಿರುವ ಉತ್ತಮ ಯೋಜನೆಗಳಪೈಕಿ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಾವಿರಾರು ಜನರಿಗೆ ಅನುಕೂಲವಾಗುತ್ತಿರುವ ಡಿಜಿಟಲ್ ಲೈಬ್ರರಿಯೋಜನೆಗೆ ಪ್ರಶಸ್ತಿ ದೊರಕಿದೆ.
Related Articles
Advertisement
ಶೈಕ್ಷಣಿಕ ನಗರ ಎಂದೇ ಪ್ರಸಿದ್ದಿಪಡೆದಿರುವ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿಯೋಜನೆಯಿಂದ ಪ್ರಾರಂಭಿಸಿರುವ ಈ ಡಿಜಿಟಲ್‌ಲೈಬ್ರರಿ ಈಗ ಹಳೆಯ ಕೇಂದ್ರ ಗ್ರಂಥಾಲಯದಲ್ಲಿ ನಡೆಯುತ್ತಿದೆ. ಅಲ್ಲಿ 20 ಕಂಪ್ಯೂಟರ್ ಸೌಲಭ್ಯಇದ್ದು, ಹೆಚ್ಚು ವಿದ್ಯಾರ್ಥಿಗಳು ಅನುಕೂಲ ಪಡೆಯುತ್ತಿದ್ದಾರೆ. ಇಲ್ಲಿ ಇಂಟರ್‌ನೆಟ್ ಸೌಲಭ್ಯವಿದ್ದುವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಹೆಚ್ಚು ಜ್ಞಾನ ಸಂಪಾದಿಸಲುಅನುಕೂಲವಾಗುತ್ತಿದೆ ಎನ್ನುತ್ತಾರೆ ತುಮಕೂರುಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಬಿ.ಟಿ.ರಂಗಸ್ವಾಮಿ.
ಚಿ.ನಿ.ಪುರುಷೋತ್ತಮ್