Advertisement

ಪುತ್ತೂರು: 20 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಗ್ರಂಥಾಲಯ

09:22 AM Apr 25, 2022 | Team Udayavani |

ಪುತ್ತೂರು: ತಾಲೂಕಿನ ಒಟ್ಟು 22 ಗ್ರಾ.ಪಂ.ಗಳ ಪೈಕಿ 20 ಗ್ರಾ.ಪಂ. ಗಳ ಗ್ರಂಥಾಲಯಗಳು ಡಿಜಿಟಲ್‌ ಗ್ರಂಥಾಲಯಗಳಾಗಿ ಪರಿವರ್ತನೆಗೊಂಡು ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ.

Advertisement

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಗ್ರಾ.ಪಂ. ಗ್ರಂಥಾ ಲಯಗಳನ್ನು ಡಿಜಿಟಲ್‌ ಗ್ರಂಥಾಲಯವನ್ನಾಗಿ ಮೇಲ್ದರ್ಜೆಗೊಳಿಸಲು ಸೂಚಿಸಿದ್ದು ಅದರಂತೆ ಪರಿವರ್ತನೆ ನಡೆದಿದೆ.

ಡಿಜಿಟಲೀಕರಣದ ಗುರಿ

ನಗರದಲ್ಲಿರುವ ಜನರಿಗೆ ಸಿಗುವ ಸೇವೆಯನ್ನು ಗ್ರಾಮಾಂತರ ಜನರಿಗೂ ವಿಸ್ತರಿಸಿ, ಶೈಕ್ಷಣಿಕ ಮಾಹಿತಿ, ಸೌಲಭ್ಯಗಳನ್ನು ಒದಗಿಸುವುದಕ್ಕೆ ಪೂರಕವಾಗಿ ಈ ಹೆಜ್ಜೆ ಇಡಲಾಗಿದೆ. ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ವೃದ್ಧಿಸುವಲ್ಲಿ ಡಿಜಿಟಲ್‌ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ಇದಕ್ಕಾಗಿ 15ನೇ ಹಣಕಾಸು ಯೋಜನೆ, ಗ್ರಾ.ಪಂ. ಸ್ವಂತ ನಿಧಿ ಮತ್ತು ಗ್ರಂಥಾಲಯ ಕರದಿಂದ ಹಣ ಬಳಸಿಕೊಳ್ಳುವಂತೆ ಇಲಾಖೆಯು ಎಲ್ಲ ಗ್ರಾ.ಪಂ.ಗಳಿಗೆ ನಿರ್ದೇಶನ ನೀಡಿತ್ತು. ತಾಲೂಕಿನಲ್ಲಿ 3 ಲಕ್ಷ ರೂ.ಯಿಂದ 12 ಲಕ್ಷ ರೂ. ತನಕ ವೆಚ್ಚದಲ್ಲಿ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಲಾಗಿದೆ. ಒಳಮೊಗ್ರು, ಪಾಣಾಜೆ ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಗ್ರಂಥಾಲಯ ಆಗಲು ಬಾಕಿ ಇದ್ದು ಕಬಕ, ಕೆದಂಬಾಡಿ, ಕೋಡಿಂಬಾಡಿ, ಕೊಳ್ತಿಗೆ, ಆರ್ಯಾಪು, ಉಪ್ಪಿನಂಗಡಿ, ಬಜತ್ತೂರು, ಬಡಗನ್ನೂರು, ಬನ್ನೂರು, ಬಲ್ನಾಡು, ಬೆಟ್ಟಂಪಾಡಿ, ನರಿಮೊಗರು, ನೆಟ್ಟಣಿಗೆ ಮುಟ್ನೂರು, 34ನೇ ನೆಕ್ಕಿಲಾಡಿ, ಮುಂಡೂರು, ಅರಿಯಡ್ಕ, ಹಿರೇ ಬಂಡಾಡಿ, ಕೆಯ್ಯೂರು, ಕೊಡಿಪ್ಪಾಡಿ, ನಿಡ್ಪಳ್ಳಿ ಗ್ರಾ.ಪಂ. ಗಳಲ್ಲಿ ಡಿಜಿಟಲ್‌ ಗ್ರಂಥಾಲಯಗಳಿವೆ.

ಏನೇನು ಸೌಲಭ್ಯ?

Advertisement

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲತಾಣ ಮತ್ತು ಇ-ಸಾರ್ವ ಜನಿಕ ಗ್ರಂಥಾಲಯ ಆ್ಯಪ್‌ ಮೂಲಕ ಇ-ಪುಸ್ತಕಗಳು, ಶೈಕ್ಷಣಿಕ ವೀಡಿ ಯೋಗಳು ಲಭ್ಯವಿರುವುದರಿಂದ ಗ್ರಾ.ಪಂ. ಗ್ರಂಥಾಲಯಗಳನ್ನು ಡಿಜಿಟಲ್‌ ಗ್ರಂಥಾಲಯಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಪುಸ್ತಕಗಳ ಸಂಗ್ರಹ ಮಾತ್ರವೇ ಇದ್ದ ಗ್ರಾಮೀಣ ಗ್ರಂಥಾಲಯಗಳಲ್ಲಿ ಇಂಟರ್‌ ನೆಟ್‌ ಸಂಪರ್ಕ ಸಹಿತ ಕಂಪ್ಯೂಟರ್‌ ಗಳು, ಪ್ರಿಂಟರ್‌ ಮೊದಲಾದ ಸೌಲಭ್ಯ ಒದಗಿಸಿದ್ದು ಕಟ್ಟಡಗಳೂ ಹೊಸ ಸ್ವರೂಪ ಪಡೆದುಕೊಂಡು ಗಮನ ಸೆಳೆದಿವೆ.

ಇಂಟರ್‌ನೆಟ್‌ ಸೌಲಭ್ಯ

ತಾಲೂಕಿನ 20 ಗ್ರಾ.ಪಂ. ಗ್ರಂಥಾಲಯಗಳು ಡಿಜಿಟಲ್‌ ಗ್ರಂಥಾಲಯಗಳಾಗಿ ಪರಿವರ್ತನೆಗೊಂಡಿವೆ. ಇಂಟರ್‌ನೆಟ್‌ ಸೌಲಭ್ಯ ಒದಗಿಸಲಾಗಿದ್ದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಇ ಪುಸ್ತಕ ಓದಲು, ಅಗತ್ಯ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಇದೆ. ಅತ್ಯುತ್ತಮ ದರ್ಜೆಯ ಕಟ್ಟಡ ಒದಗಿಸುವ ಕಾರ್ಯ ನಡೆದಿದೆ. ನವೀನ್‌ ಕುಮಾರ್‌ ಭಂಡಾರಿ, ಇಒ, ತಾ.ಪಂ. ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next