ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ಮೇಲ್ಪಂಕ್ತಿಗೆ ಕೊಂಡೊಯ್ಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅದಕ್ಕಾಗಿ, ಈ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿರುವ “ಡಿಜಿಟಲ್ ಇಂಡಿಯಾ ಕಾರ್ಪೊರೇಷನ್’ಗೆ (ಡಿಐಸಿ) ಮತ್ತಷ್ಟು ಶಕ್ತಿ ತುಂಬಲು ತೀರ್ಮಾನಿಸಲಾಗಿದೆ. ಅದರಂತೆ, ಡಿಐಸಿಯ ಸಿಬ್ಬಂದಿಯನ್ನು ದುಪ್ಪಟ್ಟುಗೊಳಿಸಿ, ಹೊಸ ಜವಾಬ್ದಾರಿಗಳನ್ನು, ಗುರಿಗಳನ್ನು ನೀಡಲು ನಿರ್ಧರಿಸಲಾಗಿದೆ.
ಈ ಕುರಿತಂತೆ, ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಪ್ರಸ್ತಾವನೆ ರವಾನೆಯಾಗಿದ್ದು, ಅದರಲ್ಲಿ “ಡಿಐಸಿಯಲ್ಲಿ ಈಗ 468 ಸಿಬ್ಬಂದಿಯಿದ್ದಾರೆ. ಸದ್ಯಕ್ಕಿರುವ ಯೋಜನೆಗಳಿಂದ ವಾರ್ಷಿಕ 250 ಕೋಟಿ ರೂ. ವ್ಯವಹಾರ ನಡೆಯುತ್ತದೆ.ಇವುಗಳ ಜೊತೆಗೆ, ಹೊಸ ಕಾರ್ಯಕ್ರಮಗಳು, ಹೊಸ ಗುರಿಗಳನ್ನು ನೀಡಲು ನಿರ್ಧರಿಸಲಾಗಿದೆ. ಅವುಗಳ ಅನುಷ್ಠಾನಕ್ಕಾಗಿ ಸಿಬ್ಬಂದಿಯನ್ನು 1,000ಕ್ಕೇರಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ಬಿಜೆಪಿ ಕಾರ್ಯಕರ್ತೆ ಮನೆಯಲ್ಲಿ ಕಾರ್ಮಿಕ ಇಲಾಖೆ ಸುರಕ್ಷಾ ಕಿಟ್ ಪತ್ತೆ!
ಹೊಸ ಕಾರ್ಯಕ್ರಮಗಳಿಂದ ಡಿಐಸಿಯ ವಾರ್ಷಿಕ ವ್ಯವಹಾರ 500 ಕೋಟಿ ರೂ. ಏರುತ್ತದೆ” ಎಂದು ತಿಳಿಸಲಾಗಿದೆ.