Advertisement

ಡಿಜಿಟಲ್‌-ಕ್ಯಾಶ್‌ಲೆಸ್‌ ಸಿಸ್ಟಂ : ಅಂ. ಮಟ್ಟದ ವಿಚಾರಗೋಷ್ಠಿ

04:10 PM Mar 13, 2017 | Harsha Rao |

ಕಾಸರಗೋಡು: ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ  ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ವಾಣಿಜ್ಯಶಾಸ್ತ್ರ ವಿಭಾಗ ಹಾಗೂ  ವಿವೇಕಾನಂದ ಕಾಲೇಜು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿಜಿಟಲ್‌,  ಕ್ಯಾಶ್‌ಲೆಸ್‌ ಸಿಸ್ಟಮ್‌ ಎಂಬ ವಿಷಯದಲ್ಲಿ  ಅಂತಾರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯನ್ನು ಯು.ಎ.ಇ ಎಕ್ಸೇಂಜ್‌ ನಿರ್ದೇಶಕ ಸುಧೀರ್‌ ಕುಮಾರ್‌ ಶೆಟ್ಟಿ ಎಣ್ಮಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು.

Advertisement

ಸುಧೀರ್‌ ಕುಮಾರ್‌ ಶೆಟ್ಟಿ ಎಣ್ಮಕಜೆ ಅವರು  ಬಳಿಕ ಮಾತನಾಡಿ ಸರಕಾರ ಜಾರಿಗೊಳಿಸಿದ ನೋಟು ಹಿಂದೆಗೆತದಿಂದ ತಾತ್ಕಾಲಿಕ ಆರ್ಥಿಕ ಅಡಚಣೆ ಸೃಷ್ಟಿಯಾಗಿತ್ತಾದರೂ, ಭವಿಷ್ಯದಲ್ಲಿ ಶೀಘ್ರ ಆರ್ಥಿಕ ಬೆಳವಣಿಗೆ ಕಾಣಲು ಹಾಗೂ ಸರಕು, ಸೇವೆಗಳು ವ್ಯವಸ್ಥಿತವಾಗಿ ಲಭ್ಯವಾಗಲು ಸಾಧ್ಯವಿದೆ ಎಂದರು. ಭ್ರಷ್ಟಾಚಾರ ರಹಿತ ದೇಶ‌ ಸƒಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ನೋಟು ಹಿಂದೆಗೆತ ಸರಕಾರದ ದಿಟ್ಟ ಹೆಜ್ಜೆ ಎಂದರು. ಜಾಗತಿಕ ಮಟ್ಟದಲ್ಲಿ ಭಾರತವು ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ರಾಷ್ಟ್ರ. ನಗದು ರಹಿತ ವ್ಯವಹಾರದ ಮೂಲಕ ದೀರ್ಘಾವಧಿಯಲ್ಲಿ ಉತ್ಪಾದನೆ ಕ್ಷಮತೆ ಗಣನೀಯ ಮಟ್ಟದಲ್ಲಿ ಹೆಚ್ಚಲಿದೆ. ದೇಶದಲ್ಲಿ ರಾಷ್ಟ್ರೀಯ ಆದಾಯ ಹೆಚ್ಚಳದಿಂದ, ಮೂಲಭೂತ ಸೌಕರ್ಯಗಳು ಪೂರ್ಣಗೊಂಡು ಸಮಾನತೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆಗಳ ಮೂಲಕ ದೇಶವು ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಎಸ್‌.ಎನ್‌. ಹೊಳ್ಳ ಪ್ರಾಸ್ತಾವಿಕವಾಗಿ  ಮಾತನಾಡಿ, ಅತ್ಯಂತ ಪ್ರಸ್ತುತವಾದ ವಿಷಯದ ಬಗ್ಗೆ ಮಾಡುತ್ತಿರುವ  ವಿಚಾರ ಸಂಕಿರಣ ಫಲಪ್ರದವಾಗಲಿದೆ. ಯುವಜನತೆ ಕ್ಯಾಶ್‌ಲೆಸ್‌  ಸೊಸೈಟಿಯ ಬಗ್ಗೆ ಶಿಕ್ಷಣ ಪಡೆದು ಸಮಾಜದ ಎಲ್ಲೆಡೆಯಲ್ಲೂ ಅದರ ಪ್ರಯೋಜನ ಲಭಿಸುವಂತೆ  ಕಾರ್ಯ ಪ್ರವೃತ್ತರಾಗಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ್‌ ಚೆಟ್ಟಿಯಾರ್‌ ವಹಿಸಿದ್ದರು. ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸರಕಾರ ಅನೇಕ ಕಾರ್ಯಕ್ರಮಗಳನ್ನು  ರೂಪಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿ ಭ್ರಷ್ಟರಿಗೆ ಉಳಿಗಾಲವಿಲ್ಲ. ಸಾಮಾಜಿಕ ದುಷ್ಕೃತ್ಯಗಳಿಗೆ ಕಡಿವಾಣ ಬೀಳುವುದರ ಜೊತೆಗೆ ಪಾರದರ್ಶಕ ಆಡಳಿತ ವ್ಯವಸ್ಥೆ ಸುದೃಢವಾಗುತ್ತಾ ಭಾರತ ಅತ್ಯಂತ ಪ್ರಬಲ ರಾಷ್ಟ್ರವಾಗುತ್ತದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಪುತ್ತೂರು ವಿವೇಕಾನಂದ ಕಾಲೇಜಿನ ಶೈಕ್ಷಣಿಕ  ನಿರ್ದೇಶಕ ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು.

Advertisement

ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಅಶೋಕ್‌ ಮೊಟ್ಟಕುಂಜ ಸ್ವಾಗತಿಸಿ, ವಂದಿಸಿದರು.   ವಾಣಿಜ್ಯಶಾಸ್ತ್ರ ವಿಭಾಗದ ಗೀತಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next