Advertisement
ಇದು ಯಾರಾದರೂ ಸರಿ. ಜೀವನದ ಕುರಿತು ಎಷ್ಟೇ ಬೋಧನೆ ಮಾಡುವವರೂ ಮೊದಲು ನೋಡುವುದೇ ಆ ಬಾಧಿತ ಅಂಶವನ್ನು ಎಂಬುದಂತು ನಿಜ. ಇದೇ ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತಿರುತ್ತದೆ. ಓರ್ವ ಜೀವನದಲ್ಲಿ ಒಂದು ಮೆಟ್ಟಿಲು ಕುಸಿತ ಅನುಭವಿಸಿದರೆ, ಅವನತ್ತ ಬೆರಳು ಮಾಡಿ ಹೀಯಾಳಿಸುವ ಕ್ರಮ ಇದೆ. ಶಿಲ್ಪಿಯಿಂದ ಸರಿಯಾಗಿ ಪೆಟ್ಟು ತಿಂದ ಶಿಲೆ ಮಾತ್ರ ನಾಳೆ ಸುಂದರ ಮೂರ್ತಿಯಾಗಿ ಎದ್ದು ನಿಲ್ಲುತ್ತದೆ. ಒಂದು ವೇಳೆ ಆ ಶಿಲೆ ಶಿಲ್ಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ, ನಾಲ್ಕು ಜನ ತುಳಿದು ಹೋಗುವ ಕಲ್ಲಾಗುತ್ತಿತ್ತು.
ನಾವು ಇತಿಹಾಸದುದ್ದಕ್ಕೂ ಶ್ರೇಷ್ಠ ಚಿಂತಕರನ್ನು ಹತ್ತಿರದಿಂದ ನೋಡಿದಾಗ, ವೈಫಲ್ಯವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಇಚ್ಛೆ ಬೇಕಾಗಿದೆ. ಅದು ಸಾಮಾನ್ಯವಾದ ಚಿಂತನೆಯಲ್ಲ. ವೈಫಲ್ಯ ಮತ್ತು ಸೋಲು ಜೀವನದ ಅತಿ ಶ್ರೇಷ್ಠ ಶಿಕ್ಷಕರು. ಆದರೆ ದುಃಖಕರವಾಗಿರುವ ಕಾರಣ ಜನರು ಅದರ ಹತ್ತಿರ ಹೋಗಲು ಬಯಸುವುದಿಲ್ಲ. ಸೋತಾಗ ಕುಗ್ಗದೇ ಯಾರೂ ಮುಂದಡಿಯಿಡುತ್ತಾರೆಯೋ ಅವರು ತಮ್ಮ ಸುಂದರ ಬದುಕಿನ ಶಿಲ್ಪಿಯಾಗುತ್ತಾರೆ. ಸಾಧನೆಯ ಶಿಖರವನ್ನು ಎರುವಲ್ಲಿ ಯಶಸ್ವಿಯಾಗುತ್ತಾರೆ. ವಿನಾಯಿತಿಗಳೇ ಸೋಲು
ಬದುಕಿನಲ್ಲಿ ಸೋತಾಗ ನಮ್ಮನ್ನು ವಿನಾ ಪ್ರಶ್ನಿಸಲೆಂದೇ ಪದೇ ಪದೇ ಮಾತನಾಡಿಸುವವರು ಇರುತ್ತಾರೆ. ಆದರೆ ನಾವು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಯಾರು ಇಂತಹ ಸವಾಲುಗಳನ್ನು ಸ್ವೀಕರಿಸುತ್ತಾರೋ ಅವರು ನಾಳೆ ಸಮಾಜದ ಪ್ರತಿನಿಧಿಯಾಗುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ. ಸವಾಲುಗಳ ಸ್ವೀಕಾರ ಅಥವಾ ಸಾಧನೆಯ ಹಾದಿಯ ಜತೆ ನಾವು ಕಾಂಪ್ರಮೈಸ್ ಆಗಬಾರದು. ಇಂತಹ ಸಂದರ್ಭದಲ್ಲಿ ನಾವು ವಿನಾಯಿತಿ ಬಯಸಿದ್ದೇ ಆದರೆ, ಅದು ವಿಫಲತೆಯ ಮೊದಲ ಹೆಜ್ಜೆ ಎಂದೇ ಭಾವಿಸಬಹುದಾಗಿದೆ. ಎಡಿಸನ್ ಟಂಗ್‌ಸ್ಟನ್ ಬಲ್ಬನ್ನು ಆವಿಷ್ಕರಿಸುವ ಹಂತದಲ್ಲಿ ಹಲವು ಬಾರಿ ವಿಫಲನಾಗಿದ್ದ. ಆದರೆ ಕೊನೆಗೆ ಸಫಲನಾಗುತ್ತಾನೆ. ಈ ಕುರಿತು ಎಡಿಸನ್ ಹೇಳುವ ಮಾತು ಪ್ರತಿಯೊಬ್ಬನನ್ನು ಬಡಿದೆಬ್ಬಿಸುವಂತಿದೆ. ಒಂದು ಬಲ್ಬನ್ನು ಕಂಡುಹಿಡಿಯಲು ನಾನು ಅನುಭವಿಸಿದ ವಿಫಲತೆ ನನ್ನ ಪಾಲಿಗೆ ಸೋಲಾಗಿ ಕಾಣಲಿಲ್ಲ. ಬದಲಾಗಿ ಅಷ್ಟು ಅವಕಾಶಗಳು ನನಗೆ ಲಭಿಸಿತು ಎಂದು ವಿಶ್ಲೇಷಿಸುತ್ತಾರೆ. ಅವರ ಮೊದಲ ಆವಿಷ್ಕಾರ ಇಂದು ಹಲವು ಮನೆ- ಮನಗಳನ್ನು ಬೆಳಗಿತು, ಇನ್ನೂ ಬೆಳಗುತ್ತಿದೆ.
Related Articles
Advertisement