Advertisement

ಹೆಗಲೇರುವ ಬಗೆ ಬಗೆ ಬ್ಯಾಗುಗಳು

06:50 AM Sep 01, 2017 | |

ಮಹಿಳೆ ಫ್ಯಾಶ‌ನ್‌ ಪ್ರಿಯೆಯಾದ ಕಾರಣ ತಾನು ಧರಿಸುವ ದಿರಿಸು ಮತ್ತು ಬಳಸುವ ಎಲ್ಲಾ ಆಕ್ಸೆಸ್ಸರಿಗಳೂ ಕೂಡ ಫ್ಯಾಷನಬಲ್‌ ಮತ್ತು ಟ್ರೆಂಡಿಯಾಗಿರಲು ಬಯಸುತ್ತಾಳೆ. ಅಂತಹ ಆಕ್ಸೆಸ್ಸರಿಗಳಲ್ಲಿ ನಮ್ಮೆಲ್ಲ ಬೇಕಾದ ಮತ್ತು ಮುಖ್ಯವಾದ ವಸ್ತುಗಳನ್ನು ಇಟ್ಟುಕೊಳ್ಳುವ ಬ್ಯಾಗುಗಳೂ ಹೊರತಾಗಿಲ್ಲ. ಈ ಬ್ಯಾಗುಗಳು ಕೇವಲ ಸಾಮಗ್ರಿಗಳನ್ನು ಒಯ್ಯಲು ಅಷ್ಟೇ ಅಲ್ಲದೆ ಸ್ಟೈಲ್‌ ಸ್ಟೇಟೆಟುಗಳನ್ನು ಸೃಷ್ಟಿಸುವಂತಹ ಆಕ್ಸೆಸ್ಸರಿಯಾಗಿದೆ. ಇಂದು ಮಹಿಳೆಯರು ಡಿಫ‌ರೆಂಟ್‌ ಆಗಿರುವ ಬ್ಯಾಗುಗಳ ಕಲೆಕÏನನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸುತ್ತಾರೆ. ಅಂಥವರಿಗಾಗಿ ಇಲ್ಲಿ ಕೆಲವು ಟ್ರೆಂಡಿ ಬ್ಯಾಗುಗಳ ಬಗೆಗಳ ಸಲಹೆಗಳನ್ನು ಕೊಡಲಾಗಿದೆ. ಬ್ಯಾಗುಗಳಲ್ಲಿ ಹಲವಾರು ಬಗೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ : 

Advertisement

1. ಲೆದರ್‌ ಬ್ಯಾಗುಗಳು: ಇವು ಎವರ್‌ ಗ್ರೀನ್‌ ಬ್ಯಾಗುಗಳು. ನಿರಂತರ ಬದಲಾವಣೆ ಗೊಳಪಡುತ್ತಿರುವ ಫ್ಯಾಷನ್‌ ಜಗತ್ತಿನಲ್ಲಿ ತನ್ನ ಇರುವಿಕೆಯ ಭದ್ರತೆಯನ್ನು ಯುಗ ಯುಗಗಳಿಂದ ಕಾಪಾಡಿಕೊಳ್ಳುತ್ತಾ ಬಂದಿರುವ ಈ ಲೆದರ್‌ ಬ್ಯಾಗುಗಳು ಲೆದರ್‌ (ಚರ್ಮ) ಬಟ್ಟೆಯಿಂದ ತಯಾರಿಸಲ್ಪಟ್ಟಿರುತ್ತವೆ. ಧರಿಸಿದಾಗ ಸ್ಟ್ಯಾಂಡರ್ಡ್‌ ಲುಕ್ಕನ್ನು ನೀಡುತ್ತವೆ. ಸಾಮಾನ್ಯವಾಗಿ ಡೀಸೆಂಟ್‌ ಶೇಡುಗಳಲ್ಲಿಯೇ ದೊರೆಯುವುದರಿಂದ ಕ್ಲಾಸೀ ಲುಕ್ಕನ್ನು ನೀಡುತ್ತವೆ. ಹೆಚ್ಚು ಕಾಲ ಬಾಳಿಕೆ ಬರುವಂಥವುಗಳಾಗಿದ್ದು ನಿತ್ಯಬಳಕೆಗೆ ಸೂಕ್ತವಾದು ದಾಗಿದೆ. ಇವುಗಳ ಆಯ್ಕೆ ಮಾಡುವಾಗ ತೆಳು ಬ್ರೌನ್‌ ಬಣ್ಣ ಅಥವ ಕಪ್ಪು ಲೆದರ್‌ ಬ್ಯಾಗುಗಳಗೆ ಆದ್ಯತೆ ನೀಡುವುದು ಉತ್ತಮ.

2. ಕ್ಲಚ್ಚುಗಳು : ಇವುಗಳು ಪರ್ಸುಗಳಿಗೆ ಹೋಲುತ್ತವೆ. ಬೇರೆ ಬೇರೆ ಬಟ್ಟೆಗಳಿಂದ ತಯಾರಿಸಲ್ಪಟ್ಟ ಕ್ಲಚ್ಚುಗಳು ದೊರೆಯುತ್ತವೆ. ಕ್ಲಚ್ಚುಗಳು ಮುಂಚೂಣಿಯಲ್ಲಿರುವ ಟ್ರೆಂಡ್‌ ಎನಿಸಿಕೊಳ್ಳುತ್ತವೆ. ಯಾವುದೇ ಸೆಲೆಬ್ರಿಟಿಗಳನ್ನು ಗಮನಿಸುವಾಗ ಅವರ ಬಳಿ ಡಿಸೈನರ್‌ ನೋಡಬಹುದಾಗಿದೆ. ಹಲವು ಬಗೆಯ ವಸ್ತುಗಳಿಂದ ತಯಾರಿಸಲ್ಪಟ್ಟ  ಕ್ಲಚ್ಚುಗಳು ದೊರೆಯುತ್ತವೆ. ಲೆದರ್‌ ಕ್ಲಚ್ಚುಗಳು, ಜೂಟ್‌ ಕ್ಲಚ್ಚುಗಳು, ಫ‌ರ್‌ ಕ್ಲಾತ್‌ ಕ್ಲಚ್ಚುಗಳು, ಬೀಡೆಡ್‌ ಕ್ಲಚ್ಚುಗಳು, ಹೆವಿ ವಕ್ಡ್ì  ಕ್ಲಚ್ಚುಗಳು, ಲೇಚ್‌ ಕ್ಲಚ್ಚುಗಳು, ಗ್ಲಿಟ್ಟರ್‌ ತೆಕ್ಚರ್‌ ಕ್ಲಚ್ಚುಗಳು ಹೀಗೆ ಹತ್ತು ಹಲವಾರು ಬಗೆಯ ಕ್ಲಚ್ಚುಗಳಲ್ಲಿ ಹಲವಾರು ಕಲರ್‌ ಆಪ್ಷನ್ನಿನೊಂದಿಗೆ ದೊರೆಯುತ್ತವೆ. ಸಂದರ್ಭಕ್ಕೆ ತಕ್ಕಂತಹ ಮತ್ತು ಧರಿಸಿದ ದಿರಿಸಿಗೆ ಸೂಕ್ತವೆನಿಸುವ ಕ್ಲಚ್ಚುಗಳನ್ನು ಬಳಸುವುದು ಟ್ರೆಂಡಿ ಫ್ಯಾಷನ್‌ ಎನಿಸುತ್ತವೆ.

3. ಕ್ರಾಸ್‌ ಬಾಡಿ ಬ್ಯಾಗುಗಳು ಅಥವ ಸೈಡ್‌ ಬ್ಯಾಗುಗಳು : ಇವುಗಳೂ ಕೂಡ ಸದ್ಯದ ಟ್ರೆಂಡಿ ಬ್ಯಾಗುಗಳಾಗಿವೆ. ಇವು ಬಹಳ ವರ್ಷಗಳ ಹಿಂದಿನ ಬಗೆಯಾಗಿದ್ದು ಸ್ವಲ್ಪ ಸಮಯ ಮರೆಯಾಗಿ ನಂತರ ಹಲವು ಮಾರ್ಪಾಡುಗಳೊಂದಿಗೆ ಮತ್ತೆ ಫ್ಯಾಷನ್‌ ರೇಸಿನಲ್ಲಿ ಮಂಚೂಣಿಯಲ್ಲಿರುವ ಬಗೆಯಾಗಿದೆ. ಹೆಸರೇ ಹೇಳುವಂತೆ ಕ್ರಾಸ್‌ ಆಗಿ ಧರಿಸುವ ಬ್ಯಾಗುಗಳಾಗಿದ್ದು ಧರಿಸಲು ಬಹಳ ಆರಾಮದಾಯಕವಾಗಿರುತ್ತವೆ. ಇವುಗಳ ಬಳಕೆಗೆ ವಯೋಮಾನದ ಮಿತಿಯಿರುವುದಿಲ್ಲ. ಇವುಗಳೂ ಕೂಡ ಹಲವು ಮಾದರಿಗಳಲ್ಲಿ ದೊರೆಯುತ್ತಿದ್ದು ಆಯ್ಕೆಗೆ ವಿಫ‌ುಲವಾದ ಅವಕಾಶಗಳಿವೆ. ಈ ಬಗೆಯ ಬ್ಯಾಗುಗಳ ಸೈಜಿನ ಬಗೆಗೆ ಗಮನಹರಿಸಬೇಕಾಗುತ್ತದೆ. ಅತಿ ದೊಡ್ಡವೂ ಅಲ್ಲದ ಅತಿಯಾದ ಚಿಕ್ಕದಾದ ಬಗೆಯನ್ನೂ ಆಯ್ಕೆಮಾಡದಿರುವುದು ಸೂಕ್ತವಾದುದು.
 
4. ಸ್ಟ್ರಾ ಬಾಸ್ಕೆಟ್‌ ಬ್ಯಾಗುಗಳು: ಹೆಸರೇ ಸೂಚಿಸುವಂತೆ ಇವುಗಳು ಬಾಸ್ಕೆಟ್‌ ಆಕಾರದ ಬ್ಯಾಗುಗಳು. ಇವುಗಳು ಪ್ಲಾಸ್ಟಿಕ್‌ನಂತಹ ವಸ್ತುವಿನಿಂದ ತಯಾರಿಸಲ್ಪಡುವುದಾಗಿದ್ದು, ಹೆಣೆದಿರುವ ಮಾದರಿಯನ್ನು ಹೊಂದಿರುತ್ತವೆ. ಇವುಗಳ ಡಿಸೈನುಗಳೇ ಇವುಗಳ ವಿಶೇಷತೆಯಾಗಿರುತ್ತದೆ. ಇವುಗಳು ಎಥಿ°ಕ್‌ ದಿರಿಸುಗಳಿಗೆ ಬಹಳ ಚೆನ್ನಾಗಿ ಹೊಂದುತ್ತವೆ. ಬೇಕಾದ ಸೈಜುಗಳಲ್ಲಿ ಬೇಕಾದ ಶೈಲಿಗಳಲ್ಲಿ ಬೇಕಾದ ಬಣ್ಣಗಳಲ್ಲಿ ದೊರೆಯುತ್ತವೆ. ಹೆಚ್ಚಾಗಿ ಇವುಗಳನ್ನು ಸಮ್ಮರ್‌ ಬ್ಯಾಗುಗಳೆಂದೂ ಪರಿಗಣಿಸಲಾಗುತ್ತದೆ.

5. ಶೋಲ್ಡರ್‌ ಬ್ಯಾಗುಗಳು :  ಇವುಗಳು ಕ್ಯಾಷುವಲ್‌ ವೇರ್‌ ಬ್ಯಾಗುಗಳು. ಪ್ರತಿಯೊಬ್ಬ ಮಹಿಳೆಯ ಬಳಿಯೂ ಸಾಮಾನ್ಯವಾಗಿ ಇರುವಂತಹ ಬ್ಯಾಗುಗಳಿವು. ಇಂದು ಇವುಗಳಲ್ಲಿಯೂ ಅನೇಕ ಮಾದರಿಗಳು ಮತ್ತು ವಿಧವಿಧದ ಮೆಟೀರಿಯಲ್ಲುಗಳಿಂದ ತಯಾರಾದಂಥ‌ವುಗಳು  ದೊರೆಯುತ್ತವೆ. ಸ್ವಲ್ಪ ಹಳೆಯದಾದ ಟ್ರೆಂಡ್‌ ಎನಿಸಿದರೂ ಬಾಳಿಕೆ ಬರುವಂಥ‌ವುಗಳಾಗಿವೆ.

Advertisement

6. ಕಲರ್‌ ಬ್ಯಾಗುಗಳು: ಈ ಕಲರ್‌ ಬ್ಯಾಗುಗಳು ಕ್ರಾಸ್‌ ಬಾಡಿ, ಶೋಲ್ಡರ್‌ ಬ್ಯಾಗುಗಳೂ ಎರಡೂ ಮಾದರಿಗಳಲ್ಲಿ ದೊರೆಯುತ್ತವೆ. ಹೆಚ್ಚಾಗಿ ಶೈನಿ ಲುಕ್ಕಿರುವ ಮೆಟೀರಿಯಲ್ಲುಗಳಿಂದ ತಯಾರಿಸಲ್ಪಡುವ ಇವುಗಳು ಮ್ಯಾಚಿಂಗ್‌ ದಿರಿಸುಗಳೊಂದಿಗೆ ಧರಿಸಲು ಸೂಕ್ತ. ಬಹಳ ಗಾಢ ಬಣ್ಣಗಳಲ್ಲಿ ದೊರೆಯುತ್ತವೆ ಮತ್ತು ಸದ್ಯದ ಟ್ರೆಂಡಿ ಬ್ಯಾಗುಗಳಲ್ಲಿ ಒಂದಾಗಿದೆ. 

7. ಪ್ರಿಂಟೆಡ್‌ ಬ್ಯಾಗುಗಳು (ಶೋಲ್ಡರ್‌ ಬ್ಯಾಗುಗಳು):  ಮೀಡಿಯಮ್‌ ಸೈಜಿಗಿಂತ ದೊಡ್ಡ ಗಾತ್ರದಲ್ಲಿ ಬರುವ ಇವುಗಳು ಸಾಮಾನ್ಯವಾಗಿ ಶೋಲ್ಡರ್‌ ಬ್ಯಾಗುಗಳ ವರ್ಗಕ್ಕೆ ಸೇರುತ್ತವೆ. ಪ್ರಿಂಟ್‌ಗಳು ಇವುಗಳ ವಿಶೇಷತೆಯಾಗಿದೆ. ತರತರದ ಪ್ರಿಂಟೆಡ್‌ ಚಿತ್ರಗಳನ್ನು ಒಳಗೊಂಡ ಬ್ಯಾಗುಗಳು ದೊರೆಯುತ್ತವೆ. ಬಾರ್ಬಿ ಪ್ರಿಂಟ್ಸ್‌, ಕಾಟೂìನ್‌ ಪ್ರಿಂಟ್ಸ…, ಫ್ಲೋರ್ಲ್ ಪ್ರಿಂಟ್ಸ…, ಟ್ರೈಬಲ್‌  ಪ್ರಿಂಟ್ಸ್‌ ಇತ್ಯಾದಿ ಪ್ರಿಂಟುಗಳುಳ್ಳ ಬ್ಯಾಗುಗಳು ಇಂದಿನ ಯುವಜನತೆಯನ್ನು ತನ್ನತ್ತ ಆಕರ್ಷಿಸುತ್ತಿವೆ. ಕ್ಯಾಷುವಲ್‌ ವೇರ್‌ಗಳಿಗೆ ಬಹಳ ಆರಾಮದಾಯಕವಾಗಿರುತ್ತದೆ. ವಯಸ್ಸಿನ ಮಿತಿ ಇರುವುದಿಲ್ಲ ಮತ್ತು ಇವುಗಳ ನಿರ್ವಹಣೆ ಸುಲಭದಾಯಕವಾಗಿರುತ್ತದೆ. 

8. ಬ್ಯಾಕ್‌ ಬ್ಯಾಗುಗಳು: ಮೇಲಿನ ಎಲ್ಲಾ ಬಗೆಗಳೊಂದಿಗೆ ಬ್ಯಾಕ್‌ ಬ್ಯಾಗುಗಳು ಕೂಡ ಫ್ಯಾಷನ್‌ ರೇಸಿನಲ್ಲಿ ಮುಂಚೂಣಿಯಲ್ಲಿರುವ ಬ್ಯಾಗುಗಳಾಗಿವೆ. ಇವುಗಳಲ್ಲಿ ಬಗೆ ಬಗೆಯ ಮಾದರಿಗಳು ಮಾರುಕಟ್ಟೆಗೆ ದಿನಂದಿಂದ ಬರುತ್ತಿವೆ. ಪ್ರಿಂಟೆಡ್‌, ಪ್ಲೆ„ನ್‌, ವಿವಿಧ ಬಗೆಯ ಮೆಟೀರಿಯಲ್ಲುಗಳಿಂದ ತಯಾರಿಸಲಾದ ಬ್ಯಾಕ್‌ ಬ್ಯಾಗುಗಳು ದೊರೆಯುತ್ತವೆ. 

9. ಜೂಟ್‌ ಬ್ಯಾಗುಗಳು : ಇವುಗಳೂ ಕೂಡ ಎವರ್‌ ಗ್ರೀನ್‌ ಬ್ಯಾಗುಗಳಾಗಿವೆ. ಜೂಟ್‌ ಬಟ್ಟೆಯಿಂದ ತಯಾರಾದ ಇವುಗಳು ನೋಡಲು ಬಹಳ ಸರಳವಾಗಿಯೂ, ಕ್ಲಾಸೀ ಆಗಿಯೂ ಕಾಣುತ್ತವೆ. ಇವುಗಳಲ್ಲಿ ಸೀ ಶೆಲ್ಸುಗಳನ್ನು, ಪರ್ಲುಗಳಿಂದ, ಕೆಲವು ವುಡನ್‌ ಬೀಡುಗಳಿಂದಲೂ  ಅಲಂಕರಿಸಿದ ಬ್ಯಾಗುಗಳೂ ದೊರೆಯುತ್ತವೆ. ಜ್ಯೂಟ್‌ ಕ್ರಾಸ್‌ ಬಾಡಿ ಬ್ಯಾಗುಗಳು ಧರಿಸಲು ಬಹಳ ಸುಂದರವಾಗಿರುತ್ತದೆ.

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next