Advertisement

ಇಂದು ಸ್ವಾತಂತ್ರ್ಯೋತ್ಸವ; ಕೋವಿಡ್ ವಾರಿಯರ್ಸ್‌ಗೆ ಗೌರವ ಸೂಚಿಸುವ ವಿಭಿನ್ನ ತೈಲವರ್ಣ

09:01 PM Aug 14, 2020 | mahesh |

ಉಡುಪಿ: ಇಂದು ಸ್ವಾತಂತ್ರೋತ್ಸವ. ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ದೇಶದೆಲ್ಲೇಡೆ ಕೋವಿಡ್‌ -19 ಜಾಗೃತಿ ಮತ್ತು ಪರಿಹಾರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸೂಚಿಸುವ ತೈಲ ಚಿತ್ರಣವೊಂದು ಕಪ್ಪೆಟ್ಟು ಪರಿಸರದ ಕಲಾಕಾರರ ಕುಂಚದಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಸ್ವಾತಂತ್ರೊéàತ್ಸವದಂದು ಕೊರೊನಾ ವಾರಿಯರ್ಗಳಿಗೆ ಈ ಮೂಲಕ ಗೌರವ ಸಲ್ಲಿಸುವ ಕೆಲಸ ನಡೆಯುತ್ತಿದೆ.

Advertisement

ನ್ಯೂ ಫ್ರೆಂಡ್ಸ್‌ ಕಪ್ಪೆಟ್ಟು ತಂಡದ ಸದಸ್ಯರಾದ ಸುಧಾಕರ, ಹರೀಶ್‌, ಬಾಲಕೃಷ್ಣ, ಕೀರ್ತಿ, ದಯಾನಂದ್‌, ಸುನೀಲ್‌ ಅವರು ಸ್ವಂತ ಖರ್ಚಿನಿಂದ ಎಡೆಬಿಡದ ಮಳೆಯ ನಡುವೆ ಈ ಸುಂದರ ಅರ್ಥಪೂರ್ಣ ಚಿತ್ರಣವನ್ನು ಕಪ್ಪೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಗೋಡೆಯಲ್ಲಿ ಪೈಂಟ್‌ ಮಾಡಿದ್ದಾರೆ.

ಸಂಸ್ಥೆಯ ಸ್ಥಾಪಕ ಸದಸ್ಯ ದಿ| ಪಾಂಡು ಕಪ್ಪೆಟ್ಟು ಇವರ ಸ್ಮರಣಾರ್ಥ ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂತಹ ದೇಶ ಭಕ್ತಿ ಬಿಂಬಿಸುವ ಚಿತ್ರಣ ಸಂಸ್ಥೆಯ ಸದಸ್ಯರ ಕೊಡುಗೆಯಾಗಿ ಮೂಡಿ ಬರುತ್ತಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಜಿಲ್ಲಾಡಳಿತ ವತಿಯಿಂದ ಆಚರಣೆ
ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಆಚರಣೆ ಸಮಿತಿ ವತಿಯಿಂದ ಆ.15 ರಂದು ಬೆಳಗ್ಗೆ 9ಕ್ಕೆ ನಗರದ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್‌ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ. ಈ ಸಂದರ್ಭ ಕೊರೊನಾ ವಾರಿಯರ್ರಿಗೆ ಸಮ್ಮಾನ ನಡೆಯಲಿದೆ.

ನೇರಪ್ರಸಾರ
ಕೋವಿಡ್‌ -19 ನಿಯಮಾವಳಿಯಂತೆ ಹೆಚ್ಚು ಜನಸೇರಲು ಅವಕಾಶ ಇಲ್ಲದ ಕಾರಣ ಸರಳವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಮನೆಯಲ್ಲಿಯೇ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ನೇರ ಪ್ರಸಾರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು Webcast URL: //udupi.nic.in/webcast Facebook Live cast # Tag;- #dcudupi, # Aug15 udupi, #dcudupilive ಲಿಂಕ್‌ಗಳ ಮೂಲಕ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದಾಗಿದೆ.

Advertisement

ಹಲವು ವರ್ಷಗಳಿಂದ ರಚನೆ
ಕಳೆದ ಹಲವು ವರ್ಷಗಳಿಂದ ಬೇರೆ ಬೇರೆ ವಿಷಯಗಳಾದ ಕಾರ್ಗಿಲ್‌ ವಿಜಯ ದಿವಸ್‌, ಪರಿಸರ ರಕ್ಷಣೆ ಬಗ್ಗೆ ವಿಶೇಷ ಕಲಾ ಚಿತ್ರ ರಚನೆ, ಡೈಸರ್‌, ಮಹಾತ್ಮಾ ಗಾಂಧಿ, ನರೇಂದ್ರ ಮೋದಿ, ಸ್ವಾಗತ ಕೋರುವ ಕಾಮನ್‌ ಬೋರ್ಡ್‌, ಭಾರತ ಮಾತೆಯನ್ನು ಭತ್ತದ ನೇಜಿಯಿಂದ ರಚನೆ ಮಾಡಿ ಶಾಲಾ ಮಕ್ಕಳಿಗೆ ಕೃಷಿ ಬಗ್ಗೆ ತಿಳಿವಳಿಕೆ ನೀಡಿ ಪರಿಸರ ನಾಗರಿಕ ಮೆಚ್ಚುಗೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next