Advertisement
ಮನೆ ಕಟ್ಟುವುದು ಎಷ್ಟು ಕಷ್ಟವೋ ಅದಕ್ಕಿಂತ ಕಟ್ಟಿದ ಮನೆಯನ್ನು ಚೆನ್ನಾಗಿ ಇಟ್ಟು ಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಇತ್ತೀಚೆಗೆ ಮನೆಯಲ್ಲಿ ಉಳಿದ ಸಾಮಗ್ರಿಗಳಿಂದ ವಿವಿಧ ರೀತಿಯ ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಸಾಮಾನ್ಯ. ಇದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದಲ್ಲದೆ ಮನೆ ವಿಭಿನ್ನವಾಗಿ ಕಾಣಲು ಸಹಾಯ ಮಾಡುತ್ತದೆ.
ಹೆಂಗಸರಿಗೆ ಅಡುಗೆ ಮನೆ ಶುಚಿಯಾಗಿರುವ ಜತೆಗೆ ಚಂದವಾಗಿರಬೇಕು ಎಂಬ ಹಂಬಲವಿರುತ್ತದೆ. ಅದಕ್ಕೆ ಪೂರಕವೆಂಬ ಹಾಗೇ ಈ ತೆಂಗಿನ ಚಿಪ್ಪುಗಳನ್ನು ಬಳಸಿಕೊಂಡು ಅದನ್ನು ಚೆನ್ನಾಗಿ ಶುಚಿಗೊಳಿಸಿ ಅದರ ಎರಡೂ ಬದಿಗಳಲ್ಲಿ ಹೋಲ್ ಮಾಡಿಕೊಂಡು ಅದಕ್ಕೆ ಚಿಕ್ಕ ಕಲರ್ ಬಳ್ಳಿ ಕಟ್ಟಿಕೊಂಡರೆ ಬೌಲ್ ಆಗಿ ಉಪಯೋಗಿಸಿಕೊಳ್ಳಬಹುದು. ಇತ್ತೀಚೆಗೆ ಇದರಿಂದ ಮಾಡಿದ ಸೌಟ್, ಸ್ಪೂನ್, ಬೌಲ್‌ಗಳು ಲಭ್ಯವಿದ್ದು ಇದನ್ನು ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಅದನ್ನು ಕೊಂಡುಕೊಳ್ಳಬಹುದು. ಇದರಿಂದ ಆಗುವ ಮುಖ್ಯ ಉಪಯೋಗವೆಂದರೆ ಪ್ಲಾಸ್ಟಿಕ್ ಪ್ಲೇಟ್, ಚಮಚ ಇನ್ನಿತರ ಮನೆ ಬಳಕೆಯ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Related Articles
Advertisement
ಇದು ಅತೀ ಸುಲಭದ ಕೆಲಸವೆನಲ್ಲ ಇದೊಂದು ಕಲೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಇದು ಒಂದು ಉದ್ಯಮವಾಗಿ ಬೆಳೆಯುತ್ತಿದ್ದು ನೀವು ಆರ್ಡ್‌ರ್ ಮಾಡಿದ ರೀತಿಯ ವಸ್ತುಗಳನ್ನು ಕೆಲವೇ ದಿನಗಳಲ್ಲಿ ನಿಮಗೆ ತಂದುಕೊಡಲಾಗುತ್ತದೆ. ಶೋ ಪೀಸ್‌ಗಳು, ಮಗ್ಗಗಳು, ಚಮಚ, ಪಾಟ್ ರೀತಿಯಲ್ಲಿ ಚಿಕ್ಕ ಗಿಡಗಳನ್ನು ನೆಡಲು, ಟೀ ಕಪ್ ಮತ್ತು ಸೋಸರ್ ಇನ್ನಿತರ ವಸ್ತುಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅದಲ್ಲದೆ ಇದನ್ನು ನೀವು ಮನೆಗಳಲ್ಲಿಯೂ ಮಾಡಬಹುದಾಗಿದ್ದು ನಿಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳಬಹುದಾಗಿದೆ.
ದಿನನಿತ್ಯ ನೀವು ಬಳಸಿದ ತೆಂಗಿನ ಕಾಯಿ ಚಿಪ್ಪುಗಳನ್ನು ಮಾರಾಟ ಮಾಡಬಹುದು ಅಥವಾ ಮನೆಯಲ್ಲಿ ಅದನ್ನು ಸ್ವತ್ಛ ಮಾಡಿ ಪೈಟಿಂಗ್ ಮಾಡಿ ಅದಕ್ಕೆ ಹೊಸ ರೀತಿಯ ಟಚ್ ಕೊಡಬಹುದು.
ಮನೆಯಲ್ಲಿ ಮದುವೆ ಸಮಾರಂಭಗಳಿಗೆ ಕಲಶಕ್ಕೆ ತೆಂಗಿನಕಾಯಿ ಇಡುವುದು ಸಾಮಾನ್ಯ. ಆದರೆ ಇದಕ್ಕೆ ಕೈ ಕಸೂತಿ ಮಾಡಿ ಬಳಸುವುದರಿಂದ ನ್ನು ಹೆಚ್ಚಿನ ಅಂದ ನೀಡುತ್ತವೆ. ಇದು ಮಾರುಕಟ್ಟೆಗಳಲ್ಲಿಯೂ ದೊರೆಯುತ್ತಿದ್ದು ನಿಮ್ಮ ಸೀರೆ ಮ್ಯಾಚಿಂಗ್ ಮಾಡಿ ಕಾಯಿಯನ್ನು ಕೊಳ್ಳಬಹುದಾಗಿದೆ.
ಪಾರ್ಟಿಪ್ರಿಯರಿಗೆ ಹೇಗೆ ಸಹಾಯ?ಕೆಲವು ಪಾರ್ಟಿ ಪ್ರಿಯರಿಗೆ ಇದು ಹೇಳಿ ಮಾಡಿಸಿದಾಗಿದ್ದು ತೆಂಗಿನ ಚಿಪ್ಪಿನ ಅಲಂಕಾರಗಳಿಂದ ಕಡಿಮೆ ಬಜೆಟ್‌ನಲ್ಲಿ ಪಾರ್ಟಿ ಮಾಡಬಹುದಾಗಿದೆ. ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿದ್ದರೂ ಅತಿ ಸುಲಭವಾಗಿ ಎಲ್ಲವನ್ನೂ ಅಂದವಾಗಿ ಜೋಡಿಸಬಹುದಾಗಿದೆ. ಮನೆಯಲ್ಲಿ ಚಿಕ್ಕ ಕಲರ್ ಲೈಟ್‌ಗಳನ್ನು ತಂದು ವಿವಿಧ ಬಗೆಯ ತೆಂಗಿನ ಚಿಪ್ಪುಗಳನ್ನು ಸ್ವತ್ಛಗೊಳಿಸಿ ಅದಕ್ಕೆ ದಾರ ಕಟ್ಟಿ ಬೇಕಾದಲ್ಲಿ ಅದಕ್ಕೆ ಚಿಕ್ಕ ಚಿಕ್ಕ ರಂದ್ರಗಳನ್ನು ಕೊರೆದಿಟ್ಟುಕೊಳ್ಳಿ ಇದರಿಂದ ಕತ್ತಲೆಯಲ್ಲಿ ಲೈಟ್ ತುಂಬಾ ಸುಂದರವಾಗಿ ಕಾಣುತ್ತದೆ. ಹೀಗೆ ಅನೇಕ ರೀತಿಯಲ್ಲಿ ಇದು ಉಪಯೋಗವಾಗುತ್ತಿದ್ದು, ಮನೆಗೆ ವಿಭಿನ್ನ ಲುಕ್ ನೀಡಲು ಬಯಸುವವರು ಇದನ್ನು ಬಳಸಬಹುದು. ಮನೆ ಬಳಕೆಗೆ ಹೇಗೆ ಸಹಾಯ?
ಮಾರುಕಟ್ಟೆಗಳಲ್ಲಿ ಇದರಿಂದ ಮಾಡಿದ ಡಬ್ಬಗಳು ದೊರೆಯುತ್ತವೆ. ಅದಲ್ಲದೆ ಟೀ ಕುಡಿಯಲು ಸಹಾಯವಾಗುವ ಕಪ್‌ಗ್ಳು, ಮನೆಯ ಹೊರಾಂಗಣದಲ್ಲಿ ಬಳಸಲು ಚಿಕ್ಕ ಚಿಕ್ಕ ಪೂಟ್‌ಗಳು ಲಭ್ಯವಿದ್ದು ಅದನ್ನು ಕರಿದಿಸಿಕೊಂಡು ತರಬಹುದು. ಇದು ನಿಮ್ಮ ಬೇರೆ ಪಾತ್ರೆಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅದಲ್ಲದೆ ಅಲಂಕಾರಕ್ಕಾಗಿ ಬಳಸುವವರು ಟೇಬಲ್‌ಗಳ ಮೇಲೆ ಇಡಲು ಇದರ ಪೈಟಿಂಗ್ ಚಿಪ್ಪುಗಳನ್ನು ಆಯ್ದು ತರಬಹುದು. ಅದಲ್ಲದೆ ಇದಕ್ಕೆ ಅಲಂಕಾರ ಮಾಡಲು ಸಮುದ್ರದ ದಡಗಳಲ್ಲಿ ಸಿಗುವ ವಿವಿಧ ರೀತಿಯ ಚಿಪ್ಪುಗಳನ್ನು ಬಳಸಿಕೊಂಡು ವಿಭಿನ್ನ ಲುಕ್ ನೀಡಬಹುದು. – ಪ್ರೀತಿ ಭಟ್ ಗುಣವಂತೆ