Advertisement
“ಬಜ್ಜಿ, ಬೋಂಡಾ ತಿನ್ನಲ್ವಾ? ಏನು ಡಯೆಟ್ಟಾ?’, “ಇನ್ಮೆàಲೆ ನೀನು ರಾತ್ರಿ ಎರಡೇ ಚಪಾತಿ ತಿನ್ನು’, ” ತುಂಬಾ ದಪ್ಪ ಕಾಣಿಸ್ತಿದೀಯ ಸ್ವಲ್ಪ ದೇಹ ಕರಗಿಸು’, “ನಿಮ್ಮ ಮಗನಿಗೆ ಸ್ವಲ್ಪ ಹಾಲು, ಹಣ್ಣು ಚೆನ್ನಾಗಿ ಕೊಡಿ ಎಷ್ಟೊಂದು ವೀಕಾಗಿ ಬಿಟ್ಟಿದಾನೆ’ ಎಂಬ ಮಾತುಗಳನ್ನು ನೀವೆಲ್ಲಾ ಆಗಾಗ್ಗೆ ಆಪ್ತ ವಲಯದಲ್ಲಿ ಕೇಳಿರಬಹುದು. ಸ್ನೇಹಿತರಂತೂ ಡುಮ್ಮಣ್ಣ ನಿಂದ ಹಿಡಿದು ದಡಿಯನವರೆಗೆ, ಶಿಳ್ಳೆಕ್ಯಾತನಿಂದ ಹಿಡಿದು ನರಪೇತಲು ನಾರಾಯಣನವರೆಗೆ ಎಲ್ಲರನ್ನೂ ಹಂಗಿಸಿ, ಚುಡಾಯಿಸಿ ಅಣಕವಾಡುತ್ತಾರೆ.
Related Articles
ಡಯೆಟೀಶಿಯನ್ ಆಗಬಯಸುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿ ಸೈನ್ಸ್‌ನಲ್ಲಿ ಪಿ.ಸಿ.ಬಿ ವಿಷಯಗಳನ್ನು ಆಯ್ದುಕೊಳ್ಳಿ. ಡಿಗ್ರಿಯಲ್ಲಿಯೂ ಇವೇ ವಿಷಯಗಳಿರಲಿ. ಸ್ನಾತಕೋತ್ತರ ಪದವಿ ತರಗತಿಯಲ್ಲಿ ನ್ಯೂಟ್ರಿಶಿಯನ್ ಮತ್ತು ಡಯೆಟಿಕ್ಸ್ ವಿಷಯಗಳನ್ನು ಅಭ್ಯಸಿಸಿದರೆ ಡಯಟೀಶಿಯನ್ ಆಗಲು ಅರ್ಹತೆ ದೊರಕಿದಂತೆ. ಈಚೆಗೆ, ಪದವಿ ತರಗತಿಗಳಲ್ಲೂ ನ್ಯೂಟ್ರೀಶಿಯನ್, ಡಯೆಟಿಕ್ಸ್ ವಿಷಯಗಳ ಅಧ್ಯಯನದ ಅವಕಾಶ ಮಾಡಿಕೊಡಲಾಗಿದೆ. ಪದವಿಯಲ್ಲಿ ಮೈಕ್ರೋಬಯಾಲಜಿ, ಕೆಮಿಸ್ಟ್ರಿ, ಆಹಾರ ಸಂಬಂಧಿತ ವಿಷಯಗಳನ್ನು ಓದಿದವರೂ ಸ್ನಾತಕೋತ್ತರ ಪದವಿಯಲ್ಲಿ ಡಯೆಟಿಕ್ಸ್ ವಿಷಯದಲ್ಲಿ ಪದವಿ ಪಡೆದು ಡಯಟೀಶಿಯನ್ ಆಗಬಹುದು.
Advertisement
ಕೌಶಲ್ಯಗಳೂ ಇರಲಿ– ಮಾನವನ ಜೈವಿಕ ಸಂತುಲನೆ ಬಗ್ಗೆ ಪರಿಪೂರ್ಣ ಜ್ಞಾನ
– ಆಹಾರ ಸಂಬಂಧಿತ ವಿವಿಧ ವಯೋಮಾನದವರಿಗೆ ಎಷ್ಟೆಷ್ಟು ಕ್ಯಾಲೊರಿ, ನ್ಯೂಟ್ರಿನ್, ಪೌಷ್ಠಿಕಾಂಶ ಪದಾರ್ಥಗಳ ಕುರಿತು ಅರಿವು.
– ದೇಹಗುಣಕ್ಕನುಸಾರವಾಗಿ ಆಹಾರ ಪದ್ಧತಿ ಸೂಚಿಸುವ ತಿಳಿವಳಿಕೆ.
– ಆಸ್ಪತ್ರೆಗಳು, ಹೋಟೆಲ್‌ಗಳಿಗಾಗಿ ಡಯೆಟ… ಪ್ಲಾನ್ ರೂಪಿಸುವುದು
– ಹೊಸ ಆಹಾರ ಪದ್ಧತಿ ಯೋಜನೆ ರೂಪಿಸುವ ಜ್ಞಾನ
– ಡಯೆಟಿಕ್, ನ್ಯೂಟ್ರಿಕ್ ವಿವಿಧ ತಾಂತ್ರಿಕ ಸಲಕರಣೆಗಳ ಬಳಕೆ ತಿಳಿದಿರಬೇಕು ಅವಕಾಶಗಳು ಎಲ್ಲೆಲ್ಲಿ?
– ಕೃಷಿ, ಔಷಧ, ಸಾರ್ವಜನಿಕ ಆರೋಗ್ಯ ಸಂಶೋಧನಾ ಕೇಂದ್ರ
– ವಿಜ್ಞಾನ ವಿಶ್ವವಿದ್ಯಾನಿಲಯ
– ಆಸ್ಪತ್ರೆಗಳು
– ಸಶಸ್ತ್ರ ಪಡೆ
– ರೇಲ್ವೆ ಇಲಾಖೆ
– ಮಲ್ಟಿಸ್ಟಾರ್ ಹೋಟೆಲ್
– ಆಹಾರ ಉತ್ಪಾದನಾ ಕಂಪನಿಗಳು
– ಫುಡ್ ಇಂಡಸ್ಟ್ರಿಯಲ್ ಹೌಸ್
– ಹೆಲ್ತ್ ಅಂಡ್ ಫಿಟ್ನೆಸ್ ಕ್ಲಬ್
– ಹೆಲ್ತ್ ಕೇರ್ ಸೆಂಟರ್ ತೆರೆಯಬಹುದು ಗಳಿಕೆ ಹೇಗೆ?
ಡಯೆಟಿಷಿಯನ್‌ಗಳು ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿ¨ªಾರೆ. ಸಾಮಾನ್ಯವಾಗಿ ವೈದ್ಯವೃತ್ತಿಯಲ್ಲಿರುವವರೇ ಡಯೆಟ್ ಸಲಹೆಗಳನ್ನು ನೀಡುವುದುಂಟು. ಅದರೂ ಪ್ರತ್ಯೇಕ ತರಬೇತಿಯನ್ನು ಪಡೆದು ಪ್ರಾವೀಣ್ಯತೆ ಹೊಂದಿರುವ ವೈದ್ಯರು ವರ್ಷಕ್ಕೆ 3 ಲಕ್ಷ ರೂ. ಯಿಂದ 10 ಲಕ್ಷದವರೆಗೆ ಗಳಿಕೆ ಮಾಡುತ್ತಾರೆ. ಅವರ ಪ್ರಾವೀಣ್ಯತೆ, ಅವಕಾಶಗಳಿಗೆ ಅನುಗುಣವಾಗಿ ಗಳಿಕೆ ನಿರ್ಧರಿತವಾಗಿರುತ್ತದೆ. ಕಾಲೇಜುಗಳು
– ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
– ದೆಹಲಿ ವಿಶ್ವವಿದ್ಯಾನಿಲಯ, ದೆಹಲಿ
– ಮುಂಬೈ ವಿಶ್ವವಿದ್ಯಾನಿಲಯ, ಫೋರ್ಟ್ ಕ್ಯಾಂಪಸ್
– ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಹರಿಯಾಣ
– ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಹೈಜೀನ್, ಪಶ್ಚಿಮ ಬಂಗಾಳ, ಪಬ್ಲಿಕ್ ಹೆಲ್ತ್ ಸೋಫಿಯಾ ಕಾಲೇಜು, ಮುಂಬೈ
– ಎಸ್‌ಎನ್‌ಡಿಟಿ ವಿಮೆನ್ಸ್ ಯೂನಿವರ್ಸಿಟಿ, ಮಹಾರಾಷ್ಟ್ರ * ಎನ್. ಅನಂತನಾಗ್