Advertisement
ಮುರುಘಾ ಮಠದ ಅನುಭವಮಂಟಪದಲ್ಲಿ ಬುಧವಾರ ಶರಣ ಸಂಸ್ಕೃತಿಉತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಆದರೆ, ಕೋಲಾರ ರೈತರು ಬಹುಬೆಳೆಪದ್ಧತಿ ಅನುಸರಿಸುತ್ತಿದ್ದಾರೆ. ಇಲ್ಲಿ ಒಂದುಬೆಳೆ ವಿಫಲವಾದರೂ ಮತ್ತೂಂದುಬೆಳೆ ಕೈ ಹಿಡಿಯುತ್ತದೆ. ಭತ್ತ ಬೆಳೆದುಶ್ರೀಮಂತರಾದವರನ್ನು ನಾನು ನೋಡಿಲ್ಲ.ಆದ್ದರಿಂದ ರೈತರು ಇಸ್ರೇಲ್ ಮಾದರಿಎನ್ನುವುದಕ್ಕಿಂತ ನಮ್ಮ ಕೋಲಾರಮಾದರಿಯಲ್ಲೇ ಬಹುಬೆಳೆ ಪದ್ಧತಿಅನುಸರಿಸಿ ಎಂದು ತಿಳಿಸಿದರು.
ಕೇಂದ್ರ ರಸಗೊಬ್ಬರ ಖಾತೆ ರಾಜ್ಯಸಚಿವ ಭಗವಂತ ಖೂಬಾ ಮಾತನಾಡಿ,ರಸಗೊಬ್ಬರ ಮತ್ತು ಕೀಟನಾಶಕಗಳಹೆಚ್ಚು ಬಳಕೆಯಿಂದ ಭೂಮಿ ತನ್ನಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ನಮ್ಮದೇಹದಂತೆ ಭೂಮಿಯ ಆರೋಗ್ಯವನ್ನು ಕಾಪಾಡಬೇಕು.
ಇಲ್ಲವಾದರೆ ಅದರಆರೋಗ್ಯ ಕೆಟ್ಟು ನಾವು ಸೇವಿಸುವಆಹಾರ ವಿಷವಾಗುತ್ತದೆ. ಆದ್ದರಿಂದರಸಗೊಬ್ಬರ, ಕೀಟನಾಶಕಗಳನ್ನುಸರಿಯಾದ ಪ್ರಮಾಣದಲ್ಲಿ ಬಳಸುವುದನ್ನುಕಲಿಯಬೇಕು ಎಂದರು.ಈ ಹಿಂದಿನ ಎಲ್ಲ ಸರ್ಕಾರಗಳುರೈತರನ್ನು ಸಾಲಮನ್ನಾದ ಹೆಸರಲ್ಲಿ ಅವರನ್ನುಅವಮಾನಗೊಳಿಸಿವೆ. ಕಳೆದ ಹತ್ತುವರ್ಷಗಳಲ್ಲಿ 20ರಿಂದ 30 ಸಾವಿರ ಕೋಟಿರೂ. ರೈತರ ಸಾಲಮನ್ನಾ ಆಗಿದೆ. ಆದರೆ,ಪ್ರಧಾನಿ ನರೇಂದ್ರ ಮೋದಿ ಸರ್ಕಾರಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಖಾತೆಗೆ ನೇರವಾಗಿ ಪ್ರತಿ ವರ್ಷ 6 ಸಾವಿರರೂ. ನೀಡುತ್ತಿದೆ.
ಇದರಿಂದ 12 ಕೋಟಿರೈತ ಕುಟುಂಬಗಳಿಗೆ ಅನುಕೂಲವಾಗಲಿದೆ.ಇಲ್ಲೀವರೆಗೆ 1.25 ಲಕ್ಷ ಕೋಟಿ ರೂ.ರೈತರಿಗೆ ಸಂದಾಯವಾಗಿದೆ ಎಂದರು.ಫಸಲ್ ವಿಮೆ ಕುರಿತು ಮಾತನಾಡಿದಅವರು, ಇಲಾಖೆ ಹಾಗೂ ರೈತರಸಹಕಾರವಿದ್ದರೆ ಬೆಳೆವಿಮೆಯನ್ನುಸರಿಯಾಗಿ ಪಡೆದುಕೊಳ್ಳಬಹುದುಎಂಬುದಕ್ಕೆ ಬೀದರ್ ಉತ್ತಮಉದಾಹರಣೆ. 2016-17ರಿಂದ ಈವರೆಗೆಇಡೀ ದೇಶದಲ್ಲೇ 500 ಕೋಟಿ ರೂ.ಗೂಹೆಚ್ಚು ವಿಮೆ ತೆಗೆದುಕೊಂಡಿದ್ದಾರೆ. ಈಮೂಲಕ ನಂ.1 ಸ್ಥಾನಗಳಿಸಿದೆ. ಈ ಸಾಧನೆಪ್ರತಿ ಜಿಲ್ಲೆಗೂ ಸಾಧ್ಯವಿದೆ ಎಂದರು
.ಹುಲಿಕೆರೆ ಆದರ್ಶ ಕೃಷಿಕ ವಿಶ್ವೇಶ್ವರ ಸಜ್ಜನಅವರನ್ನು ಸನ್ಮಾನಿಸಲಾಯಿತು. ಭಗೀರಥಪೀಠದ ಶ್ರೀ ಪುರಷೋತ್ತಮಾನಂದಪುರಿಸ್ವಾಮೀಜಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ,ಕೃಷಿ ವಿವಿ ಕೃಷಿ ಆರ್ಥಿಕ ತಜ್ಞ ಪ್ರೊ| ಟಿ.ಎಂ.ವೆಂಕಟರೆಡ್ಡಿ, ಬಾಬು ಜಗಜೀವನರಾಮ್‌ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಅಧ್ಯಕ್ಷ ಪ್ರೊ|ಎನ್.ಲಿಂಗಣ್ಣ, ಉತ್ಸವದಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ,ಕಾರ್ಯಧ್ಯಕ್ಷ ಕೆ.ಎಸ್. ನವೀನ್‌ಉಪಸ್ಥಿತರಿದ್ದರು.