Advertisement

ಕೃಷಿ ಸೆಸ್‌ನಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಲ್ಲ : ನಿರ್ಮಲಾ ಸೀತಾರಾಮನ್‌

09:00 PM Feb 01, 2021 | |

ನವದೆಹಲಿ: ಈಗಾಗಲೇ ಏರಿಕೆಯ ಹಂತದಲ್ಲಿರುವ ಪೆಟ್ರೋಲ್‌ ಡೀಸೆಲ್‌ ದರಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ದೈನಂದಿನ ಏರಿಕೆ ಜತೆಗೆ ಬಜೆಟ್‌ನಲ್ಲಿ ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ (ಎಐಡಿಸಿ) ಅನ್ನು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಲಾಗಿದೆ. ಅದರ ಅನ್ವಯ ಪ್ರತಿ ಲೀಟರ್‌ ಪೆಟ್ರೋಲ್‌ಗೆ 2.50 ರೂ, ಪ್ರತಿ ಲೀಟರ್‌ ಡೀಸೆಲ್‌ಗೆ 4 ರೂ. ಸೆಸ್‌ ಜಾರಿಯಾಗುತ್ತದೆ. ಅದಕ್ಕೆ ಪೂರಕವಾಗಿ ಬ್ರಾಂಡ್‌ ರಹಿತ ಪೆಟ್ರೋಲ್‌, ಡೀಸೆಲ್‌ಗೆ ಕನಿಷ್ಠ ಅಬಕಾರಿ ಸುಂಕ ಕ್ರಮವಾಗಿ ಪ್ರತಿ ಲೀಟರ್‌ಗೆ 1.4 ರೂ., 1.8 ರೂ. ಆಗಲಿದೆ.

Advertisement

ತೈಲೋತ್ಪನ್ನಗಳ ಮೇಲೆ ವಿಧಿಸಲಾಗುವ ಪ್ರಾಥಮಿಕ ಅಬಕಾರಿ ಸುಂಕ (ಬಿಇಡಿ), ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ಪ್ರಮಾಣ ತಗ್ಗಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ಹೊರೆಯಾಗದಂತೆ ಇರಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್‌. ಬ್ರಾಂಡ್‌ ರಹಿತ ಪೆಟ್ರೋಲ್‌, ಡೀಸೆಲ್‌ ಮೇಲೆ ಎಸ್‌ಎಇಡಿ ಕ್ರಮವಾಗಿ 11 ರೂ., 8 ರೂ. ಆಗಲಿದೆ.
ಗ್ರಾಹಕರಿಗೆ ಹೊರೆ ಹೊರಿಸುವ ಪ್ರಯತ್ನ ಸರ್ಕಾರದ್ದಲ್ಲ. ಕೃಷಿ ಕ್ಷೇತ್ರದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಬಲಪಡಿಸಿ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವುದು ಸರ್ಕಾರದ ಗುರಿಯಾಗಿದೆ. ಜತೆಗೆ ರೈತರಿಗೂ ಹೆಚ್ಚಿನ ರೀತಿಯಲ್ಲಿ ಬೆಂಬಲ ನೀಡುವ ನಿಟ್ಟಿನಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥನೆ. ತೈಲೋತ್ಪನ್ನಗಳು ಮಾತ್ರವಲ್ಲ ಇತರ ಉತ್ಪನ್ನಗಳ ಮೇಲೆ ಕೂಡ ಇದೇ ಸೆಸ್‌ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next