Advertisement

ಡೀಸೆಲ್‌ ಅಲ್ಲ ವಿದ್ಯುತ್‌ ಇಂಜಿನ್‌

08:50 AM Mar 05, 2018 | Harsha Rao |

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಡೀಸೆಲ್‌ ಲೊಕೊಮೋಟಿವ್‌ ಯೂನಿಟ್‌ ವಿಶಿಷ್ಟ ಸಾಧನೆಯನ್ನು ಮಾಡಿದ್ದು, ಡೀಸೆಲ್‌ ಬಳಸುತ್ತಿದ್ದ ರೈಲ್ವೇ ಇಂಜಿನ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಿದೆ. ಇದನ್ನು ದೇಶೀಯ ತಂತ್ರಜ್ಞಾನ ಬಳಸಿ ಮಾಡಲಾಗಿರುವುದು ಐತಿಹಾಸಿಕ ಸಾಧನೆಯಾಗಿದೆ.ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್‌ ಇಂಜಿನ್‌ಗಳನ್ನು ಎಲೆಕ್ಟ್ರಿಕ್‌ ಇಂಜಿನ್‌ಗಳನ್ನಾಗಿ ಪರಿವರ್ತಿಸಲು ವಾರಾಣಸಿ ಘಟಕದ ಇಂಜಿನಿಯರುಗಳಿಗೆ ಸಾಧ್ಯವಾಗಿದೆ.

Advertisement

ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ್ದೇವೆ.ಕಳೆದ ಡಿಸೆಂಬರ್‌ 22ರಂದು ಈ ಪ್ರಾಜೆಕ್ಟ್ ಹಮ್ಮಿಕೊಂಡಿದ್ದೆವು. ಫೆ.28ಕ್ಕೆ ಯಶಸ್ವಿಯಾಗಿದ್ದೆವು ಎಂದು ವಾರಾಣಸಿ ಘಟಕದ ವಕ್ತಾರ ನಿತಿನ್‌ ಮೆಹೊÅàತ್ರಾ ಹೇಳಿದ್ದಾರೆ. ಇದರ ಭದ್ರತಾ ತಪಾಸಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ಮಾಡಲಿದ್ದೇವೆ ಎಂದಿದ್ದಾರೆ.

ಜೀವಿತಾವಧಿಯ ಮಧ್ಯಾಂತರದಲ್ಲಿರುವ ಲೊಕೊಮೋಟಿವ್‌ಗಳನ್ನಷ್ಟೇ ಪರಿವರ್ತನೆಗಾಗಿ ಬಳಸಿಕೊಳ್ಳಲಾಗುತ್ತದೆ. ಇವುಗಳ ಚಾಸಿಸ್‌, ಬೋಗಿಗಳು ಮತ್ತು ಮೋಟಾರುಗಳನ್ನು ಹಾಗೆಯೇ ಮುಂದುವರಿಸಲಾಗುತ್ತದೆ. ಈ ಪ್ರಕ್ರಿಯೆಗೆ ಸ್ವತಂತ್ರವಾಗಿ ವಿನ್ಯಾಸವನ್ನೇ ಮಾಡಬೇಕಿತ್ತು. ಮಾದರಿ ವಿನ್ಯಾಸವೂ ಇರಲಿಲ್ಲ.

ಸಾಮಾನ್ಯವಾಗಿ ಇಲೆಕ್ಟ್ರಿಕ್‌ ಲೊಕೊಮೋಟಿವ್‌ಗಳನ್ನು ಹೊಸದಾಗಿ ಖರೀದಿಸಿ, ಡೀಸೆಲ್‌ ಲೊಕೊಮೋಟಿವ್‌ಗಳನ್ನು ಕೈಬಿಡಲಾಗುತ್ತಿತ್ತು. ಈ ಪರಿವರ್ತನೆ ಪ್ರಕ್ರಿಯೆ ಯಶಸ್ವಿಯಾಗಿದ್ದರಿಂದ, ಮುಂದಿನ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ ಲೊಕೊ ಮೋಟಿವ್‌ಗಳನ್ನು ಇಲೆಕ್ಟ್ರಿಕ್‌ ಆಗಿ ಪರಿವರ್ತಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next