Advertisement

ಹತಾಶಗೊಂಡ ದೀದಿ ಪ್ರತಿಪಕ್ಷಗಳ ನಾಯಕರ ಬೆಂಬಲ ಕೋರಿದ್ದಾರೆ :  ಮೋದಿ

06:18 PM Apr 01, 2021 | Team Udayavani |

ಜಯ ನಗರ : ಪಶ್ಚಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಯಾದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹತಾಶರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಪಶ್ಚಿಮ ಬಂಗಾಳದ ಜಯನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ದೀದಿಯವರಲ್ಲಿ ಹತಾಶೆ ಹೆಚ್ಚಿದೆ. ಹಾಗಾಗಿ ಅವರು ಇತರೆ ಪ್ರತಿ ಪಕ್ಷಗಳ ನಾಯಕರಿಗೆ ಪತ್ರ ಬರೆದು ಒಂದಾಗಬೇಕು ಎಂದು ಕೇಳಿಕೊಂಡಿದ್ದಾರೆ. ದೀದಿ ಅವರು ಹೊರಗಿನವರು ಎಂದು ಪರಿಗಣಿಸುವ ಮತ್ತು ಸಭೆಗೆ ಸಮಯ ನೀಡದವರ ಬೆಂಬಲವನ್ನು ಕೋರಿದ್ದಾರೆ, ಎಂದು ವ್ಯಂಗ್ಯ ಮಾಡಿದ್ದಾರೆ.

ಓದಿ : ಸಚಿವ ಈಶ್ವರಪ್ಪ ಸಿಎಂ ವಿರುದ್ಧ ನೀಡಿರುವ ದೂರಿನ‌ ಬಗ್ಗೆ ನನಗೇನೂ ತಿಳಿಯದು – ಕಾರಜೋಳ

ಬಾಂಗ್ಲಾದೇಶದ ಜೆಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ದೂರಿನ ಬಗ್ಗೆ ಪ್ರಸ್ತಾಪಿಸಿದ ಮೋದಿ, ಕೆಲವು ದಿನಗಳ ಹಿಂದೆ, ನಾನು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದೆ, ಅಲ್ಲಿ ನಾನು ಜೆಶೋರೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನಾನು ದೇಶಕ್ಕೆ ಆಶೀರ್ವಾದ ಕೋರಿದ್ದೆ. ಅದಕ್ಕೆ ದೀದಿ ಆಕ್ಷೇಪ ವ್ಯಕ್ತಪಡಿಸಿದರು. ಒರಕಂಡಿಯಲ್ಲಿ, ಹರಿಚಂದ್ ಠಾಕೂರ್ ಮತ್ತು ಗುರುಚಂದ್ ಠಾಕೂರ್ ಅವರ ಪವಿತ್ರ ಭೂಮಿಗೆ ಭೇಟಿ ನೀಡಿದೆ. ಅವರು ನನ್ನ ವಿರುದ್ಧ ತಿರುಗಿ ಬಿದ್ದರು. ದೇವಸ್ಥಾನಕ್ಕೆ ಭೇಟಿ ನೀಡುವುದು ತಪ್ಪೇ ? ಎಂದು ಕೇಳಿದ್ದಾರೆ.

ಇನ್ನು,  ಮಮತಾ ಅವರಿಗೆ ಜೈ ಶ್ರೀರಾಮ್ ಘೋಷಣೆ ಕೂಗುವುದರ ಬಗ್ಗೆ ಭಿನ್ನಮತವಿದೆ. ದುರ್ಗಾ ಮೂರ್ತಿಗಳನ್ನು ವಿಸರ್ಜನೆ ಮಾಡುವುದರ ಬಗ್ಗೆಯೂ ಅವರಲ್ಲಿ ಆಕ್ಷೇಪವಿತ್ತು. ಈಗ ತಿಲಕ ಹಾಗೂ ಕೇಸರಿ ಬಟ್ಟೆಗಳ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಬಿಜೆಪಿಯ ಸಿದ್ಧಾಂತದ ಬಗ್ಗೆ ಅವರಲ್ಲಿ ಹಗೆತನವಿದೆ ಎಂದಿದ್ದಾರೆ.

Advertisement

ಪಶ್ಚಿಮ ಬಂಗಾಳದ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಮೋದಿ, ರಾಜ್ಯದಲ್ಲಿ 200ಕ್ಕಿಂತ ಹೆಚ್ಚು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ.

ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ಮೋದಿ, ಮಾತುವಾ ಸಮುದಾಯದ ಸಂಸ್ಥಾಪಕ ಹರಿಚಂದ್ ಠಾಕೂರ್  ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದರು. ಬಾಂಗ್ಲಾದೇಶದ ಮಾತುವಾ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದ ಒಂದು ಸಮುದಾಯವಾಗಿದ್ದು, ಪಶ್ಚಿಮ ಬಂಗಾಳದ ಕನಿಷ್ಠ ಆರು ಸಂಸದೀಯ ಸ್ಥಾನಗಳಲ್ಲಿ ಆ ಸಮುದಾಯ ಇದೆ ಎಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷ, ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳ ಮೇಲೆ ಪ್ರಭಾವ ಬಿರುವ ದೃಷ್ಟಿಯಿಂದ ಬಾಂಗ್ಲಾದೇಶಕ್ಕೆ ಪ್ರಧಾನಿ ಭೇಟಿ ನೀಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.

ಓದಿ : ಬೆಳಗಾವಿ ,ಮಸ್ಕಿ , ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಖಚಿತ -ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next