Advertisement

ಸೇತುಬಂಧ ಶುರು?

12:06 PM Oct 02, 2017 | |

ನವದೆಹಲಿ: ಸೀತೆಯನ್ನು ಅಪಹರಿಸಿದ್ದ ರಾವಣನನ್ನು ವಧಿಸಲು ಶ್ರೀರಾಮ ವಾನರ ನೆರವಿನಿಂದ ಲಂಕೆಗೆ
ಸೇತುವೆಯನ್ನು ನಿರ್ಮಿಸಿದ್ದು ರಾಮಾಯಣ ದಲ್ಲಿ ಉಲ್ಲೇಖ. ಆದರೆ ಆ ಸೇತುವೆ ನಿಜವಾದಧ್ದೋ ಕಾಲ್ಪನಿಕವೋ ಎಂಬ ಬಗ್ಗೆ ಪರ ವಿರೋಧ ಅಭಿಪ್ರಾಯ  ವಿದೆ. ಈ ನಡುವೆ ಎನ್‌ಡಿಎ ಸರ್ಕಾರ ರಾಮಸೇತು ಇತ್ತೋ ಇಲ್ಲವೋ ಎನ್ನುವುದನ್ನು ತಿಳಿಯಲು ಶೀಘ್ರ ಅಧ್ಯಯನಕ್ಕೆ ಸಿದ್ಧತೆ ನಡೆಸಿದೆ. 

Advertisement

2008ರಲ್ಲಿ ಯುಪಿಎ ಸರ್ಕಾರ ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ಶ್ರೀರಾಮ ಮತ್ತು ಇತರ ಪಾತ್ರಗಳು ಇದ್ದವು ಎಂದು ಸಾಬೀತು ಪಡಿಸಲು ವೈಜ್ಞಾನಿಕ ಅಥವಾ ಇನ್ನು ಯಾವುದೇ ಆಧಾರಗಳು ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಈ ಅಂಶ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎನ್‌ಡಿಎ ನೇತೃತ್ವದ ಸರ್ಕಾರ ರಾಮ ಸೇತು ಇದೆಯೋ ಇಲ್ಲವೋ ಎಂಬುದನ್ನು ಕಂಡುಕೊಳ್ಳಲು ಡಿಸೆಂಬರ್‌ನಲ್ಲಿ ಅಧ್ಯಯನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಶ್ರೀಲಂಕಾ ಸರ್ಕಾರದ ಜತೆ ತಾಂಜೇನಿಯಾದಲ್ಲಿ ಅ.2ರಿಂದ 5ರ ವರೆಗೆ ಆಯೋಜಿಸಲಾಗಿರುವ ಐತಿಹಾಸಿಕ ಸ್ಮಾರಕ ಮತ್ತು ಸ್ಥಳಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಂಡಳಿ (ಐಸಿಓಎಂಓಎಸ್‌)ಸಭೆಯ ಪಾರ್ಶ್ವದಲ್ಲಿ ಮಾತುಕತೆ ನಡೆಸಲಾಗುತ್ತದೆ.

ಭಾರತದ ವ್ಯಾಪ್ತಿಯಲ್ಲಿ ರಾಮೇಶ್ವರ ಸಮೀಪ ಇರುವ ಪಾಂಬನ್‌ ದ್ವೀಪದಿಂದ ಶ್ರೀಲಂಕಾದ ಉತ್ತರ ಕರಾವಳಿ ವ್ಯಾಪ್ತಿಯಲ್ಲಿರುವ ಮನ್ನಾರ್‌ ದ್ವೀಪದ ವರೆಗೆ ರಾಮ ಸೇತುವೆ ಅಥವಾ ಆ್ಯಡಮ್ಸ್‌ ಬ್ರಿಡ್ಜ್ ಇದೆ. ದ್ವೀಪ ರಾಷ್ಟ್ರದ ವ್ಯಾಪ್ತಿಯಲ್ಲಿ ಅಂದಾಜು 30 ಮೈಲು ಸೇತುವೆ ಇದೆ. ಆ ರಾಷ್ಟ್ರದ ಸಮುದ್ರ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲು ಅಲ್ಲಿನ ಸರ್ಕಾರದ ಅನುಮತಿ ಬೇಕು. ಹೀಗಾಗಿ ಆ ರಾಷ್ಟ್ರದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಅಸ್ಸಾಂ ವಿವಿಯ ಮ್ಯೂಸಿಯಾಲಜಿ ಮತ್ತು ಪುರಾತತ್ವಶಾಸ್ತ್ರ ವಿಭಾಗದ ನಿರ್ದೇಶಕ ಪ್ರೊ.ಅಲೋಕ್‌ ತ್ರಿಪಾಠಿ ಹೇಳಿದ್ದಾರೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಅಧ್ಯಯನ ಮತ್ತು ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಎರಡು ದೇಶಗಳ ಸರ್ಕಾರಗಳಿಂದ ಅನುಮತಿ ಪಡೆಯಬೇಕು ಎಂದಿದ್ದಾರೆ ತ್ರಿಪಾಠಿ. 

ಇದೇ ಮೊದಲು: ರಾಮ ಸೇತು ಇದೆಯೋ ಇಲ್ಲವೋ ಎಂಬ ಬಗ್ಗೆ ಇದು ವರೆಗೆ ನೀರಿನಾಳದಲ್ಲಿ ಯಾವುದೇ 
ರೀತಿಯಲ್ಲಿ ಅಧ್ಯಯನ ನಡೆದಿಲ್ಲ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧ್ಯಯನಕ್ಕೆ ಮುಂದಾದಲ್ಲಿ ಅದೊಂದು ದಾಖಲೆಯೇ ಆದೀತು ಎಂದು ಹೇಳಲಾಗುತ್ತಿದೆ. ರಾಮಸೇತುವನ್ನು ಒಡೆಯುವ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ ಅದಕ್ಕೆ ಸಂಬಂಧಿಸಿದ
ಸಂಶೋಧನೆ ಮುಂದುವರಿಸಲು ಅನುಮೋದನೆ ನೀಡಿತ್ತು. ಹಾಲಿ ಸರ್ಕಾರ ಕೂಡ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೇತು ಒಡೆಯು ವುದಿಲ್ಲವೆಂದು ವಾಗ್ಧಾನ ಮಾಡಿತ್ತು.

50ಕಿ.ಮೀ. ರಾಮಸೇತು ಒಟ್ಟಾರೆ ದೂರ
600ಕ್ಕೂ ಹೆಚ್ಚು ವರ್ಷ ಸೇತುವೆ ಇತಿಹಾಸ

Advertisement
Advertisement

Udayavani is now on Telegram. Click here to join our channel and stay updated with the latest news.

Next