Advertisement
ಅನಂತರ ಮಾತನಾಡಿದ ಮಮತಾ ಬ್ಯಾನರ್ಜಿ “ಸೋನಿಯಾ ಜಿ ಚಹಾ ಸೇವಿಸಲು ಆಹ್ವಾನಿಸಿದ್ದರು. ಅದಕ್ಕನುಸಾರವಾಗಿ ಭೇಟಿ ನೀಡಿದ್ದೆ’ ಎಂದರು. ವಿಪಕ್ಷಗಳೆಲ್ಲವೂ ಒಟ್ಟಾಗಬೇಕಾದ ಬಗ್ಗೆ ನಾವಿಬ್ಬರು ಚರ್ಚೆ ನಡೆಸಿದೆವು. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಬೇಕು ಮತ್ತು ಕೆಲಸ ಮಾಡಬೇಕು ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು ಎಂದು ಹೇಳಿದ್ದಾರೆ. ಒಟ್ಟು 45 ನಿಮಿಷಗಳ ಕಾಲ ನಡೆದಿದ್ದ ಸಭೆಯು ಫಲಪ್ರದ ಎಂದು ಬಣ್ಣಿಸಿದರು ದೀದಿ. ಮುಂದಿನ ದಿನಗಳಲ್ಲಿ ಇದರ ಫಲಿತಾಂಶ ಧನಾತ್ಮಕವಾಗಿಯೇ ಇರಲಿದೆ ಎಂದು ಟಿಎಂಸಿ ಅಧಿನಾಯಕಿ ಹೇಳಿಕೊಂಡರು. ಮಮತಾ ಬ್ಯಾನರ್ಜಿ ಒಟ್ಟು ಐದು ದಿನಗಳ ಕಾಲ ರಾಷ್ಟ್ರ ರಾಜಧಾನಿಯ ಪ್ರವಾಸದಲ್ಲಿದ್ದಾರೆ. ಸೋನಿಯಾ ಭೇಟಿ ಬಳಿಕ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜತೆಗೂ ಮಾತುಕತೆ ನಡೆಸಿದ್ದಾರೆ.
Related Articles
Advertisement
ವಿಪಕ್ಷಗಳ ಒಕ್ಕೂಟವನ್ನು ಯಾರು ಮುನ್ನಡೆಸಿದರೂ ಸ್ವಾಗತವೇ ಎಂದು ಹೇಳಿಕೊಂಡರು ಪಶ್ಚಿಮ ಬಂಗಾಲ ಮುಖ್ಯಮಂತ್ರಿ. ವಿಪಕ್ಷಗಳ ಮುಖಂಡರೆಲ್ಲ ಒಟ್ಟಾಗಿ ಕುಳಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಸಮರ್ಥ ನಾಯಕ ಎಂದು ನಿರ್ಧರಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಚುನಾವಣೆ ಯಲ್ಲಿ ಸ್ಪರ್ಧಿಸಲಿದ್ದರೆ, ಅದು ದೇಶದೊಂದಿಗಿನ ಸ್ಪರ್ಧೆಯೇ ಆಗಿರಲಿದೆ ಎಂದು ಹೇಳಿದ್ದಾರೆ. ಪೆಗಾಸಸ್ ವಿವಾದದ ಬಗ್ಗೆ ಮಾತನಾಡಿದ ದೀದಿ, ದೇಶದಲ್ಲಿ ಈಗ ತುರ್ತುಪರಿಸ್ಥಿತಿ ಅವಧಿಯಲ್ಲಿ ಇದ್ದ ದಿನಗಳಿಗಿಂತ ಗಂಭೀರವಾಗಿಯೇ ಇದೆ ಎಂದರು. ಜತೆಗೆ ನನ್ನ ಫೋನ್ ಕೂಡ ನಿಗಾಕ್ಕೆ ಒಳಗಾಗಿದೆ ಎಂದು ಹೇಳಿಕೊಂಡರು.
ನಿಗದಿತ ಉದ್ದೇಶದಿಂದ ವಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸುವ ಬದಲು ಪೆಗಾಸಸ್ ವಿಚಾರದ ಬಗ್ಗೆ ಚರ್ಚಿಸಲು ಒತ್ತಾಯ ಮಂಡಿಸಲಾಗುತ್ತಿದೆ. ಅವರ ಧೋರಣೆ ಸರಿಯಲ್ಲ.-ಸಂಭಿತ್ ಪಾತ್ರಾ, ಬಿಜೆಪಿ ವಕ್ತಾರ
ದಾಖಲೆ ಹರಿದೆಸೆದರು :
ಲೋಕಸಭೆಯಲ್ಲಿ ಪೆಗಾಸಸ್ ವಿವಾದ ಮತ್ತು ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೋಲಾಹಲವೇ ಉಂಟಾಗಿತ್ತು. ಬೆಳಗ್ಗೆ 11ರಿಂದ 12ಗಂಟೆಯ ವರೆಗೆ ಪ್ರತಿಭಟನೆಯ ಘೋಷಣೆಗಳ ನಡುವೆ, ಕಲಾಪ ಮುಂದೂಡದೆ ಪ್ರಶ್ನೋತ್ತರ ವೇಳೆಯ ಕಲಾಪಗಳು ನಡೆದದ್ದೇ ಒಂದು ಪ್ರಧಾನ ಅಂಶ. ಅನಂತರ ಸಂಸದ ರಾಜೇಂದ್ರ ಅಗರ್ವಾಲ್ ಸ್ಪೀಕರ್ ಸ್ಥಾನದಲ್ಲಿ ಕುಳಿತು ಕಲಾಪ ನಿರ್ವಹಿಸಲು ಬಂದರು. ಈ ಸಂದರ್ಭದಲ್ಲಿ ಸದನದ ಕಲಾಪದ ವಿವರಗಳ ದಾಖಲೆಗಳನ್ನು ಮತ್ತು ಪ್ರತಿಭಟನೆಗಾಗಿ ಫಲಕಗಳನ್ನು ಹರಿದು ಸ್ಪೀಕರ್ ಮತ್ತು ಆಡಳಿತ ಪಕ್ಷದ ಸದಸ್ಯರತ್ತ ಕಾಂಗ್ರೆಸ್ ಸಂಸದರಾಗಿರುವ ಗುರ್ಜೀತ್ ಅಜುಜಾ, ಟಿ.ಎನ್.ಪ್ರತಾಪನ್, ಹಿಬಿ ಇಡೆನ್ ಮತ್ತು ಇತರರು ಎಸೆದಿದ್ದಾರೆ. ಅವರನ್ನು ಮುಂಗಾರು ಅಧಿವೇಶನದ ಉಳಿದ ಕಲಾಪದಿಂದ ಅಮಾ ನತು ಮಾಡಬೇಕು ಎಂದು ಕೇಂದ್ರ ಸರಕಾರ ಗೊತು ¤ವಳಿ ಮಂಡಿಸುವ ಸಾಧ್ಯತೆ ಇದೆ. ಈ ಗದ್ದಲದ ನಡುವೆಯೇ ದಿವಾಳಿ ತಿದ್ದುಪಡಿ ಮಸೂದೆಯನ್ನು ಚರ್ಚೆ ಇಲ್ಲದೆಯೇ ಲೋಕಸಭೆ ಯಲ್ಲಿ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ಕಲಾಪ ನಡೆಸಲು ವಿಪಕ್ಷಗಳು ಪದೇ ಪದೆ ಅಡ್ಡಿಪಡಿಸಿದವು. ಹೀಗಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.