Advertisement
ನಾನು ತಪ್ಪು ತಿಳಿದಿದ್ದೆ: ನೀವು ದೀದಿ ಮೇಲೆ ವಿಶ್ವಾಸ ಇಟ್ಟಿದ್ದಿರಿ. ಆದರೆ ಅವರು ನಿಮಗೆ ಮೋಸ ಮಾಡಿ ದ್ದಾರೆ. ಇದು ನಿಮ್ಮ ತಪ್ಪು ಮಾತ್ರವಲ್ಲ. ಪ್ರಧಾನಿಯಾಗುವುದಕ್ಕೂ ಮೊದಲು ನಾನೂ ಕೂಡ ಆಕೆ ಸರಳ ವ್ಯಕ್ತಿತ್ವದವರು ಎಂದು ಭಾವಿಸಿದ್ದೆ. ಆದರೆ ಪ್ರಧಾನಿ ಯಾದ ಅನಂತರ ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿಯಿತು. ಈಗ ನನಗೆ ಬಂಗಾಲದಲ್ಲಿನ ಜನ ವಿರೋಧಿ ನೀತಿ ಗಳನ್ನು ಕೇಳಿ ನಾಚಿಕೆಯಾಗುತ್ತಿದೆ. ನಾನು ತಪ್ಪು ಮಾಡಿ ಬಿಟ್ಟೆ ಎಂದು ಮೋದಿ ಹೇಳಿದ್ದಾರೆ.
Related Articles
Advertisement
ಗೊಂದಲ ಸೃಷ್ಟಿಸಿದ ರಾಹುಲ್ ನಾಮಪತ್ರಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಗೊಂದಲಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಯನ್ನು ಅಮೇಠಿ ರಿಟರ್ನಿಂಗ್ ಅಧಿಕಾರಿ ರಾಮ್ ಮನೋಹರ ಮಿಶ್ರಾ ಸೋಮವಾರಕ್ಕೆ ಮುಂದೂಡಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ಹೊಂದಿದ್ದಾರೆ ಹಾಗೂ ಶೈಕ್ಷಣಿಕ ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಆರೋಪಿಸಿ ಸ್ವತಂತ್ರ ಅಭ್ಯರ್ಥಿ ಧ್ರುವ್‌ಲಾಲ್ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಧ್ರುವ್ ಲಾಲ್ ವಕೀಲ ರವಿ ಪ್ರಕಾಶ್ ಮಾತನಾಡಿ, ರಾಹುಲ್ ನಾಮಪತ್ರ ವಿಚಾರದಲ್ಲಿ 3 ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇವೆ. ಇಂಗ್ಲೆಂಡ್‌ನಲ್ಲಿ ನೋಂದಾಯಿತ ಕಂಪೆನಿಯಲ್ಲಿ ರಾಹುಲ್ ತನ್ನನ್ನು ಇಂಗ್ಲೆಂಡ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ. ಭಾರತದ ಜನಪ್ರತಿನಿಧಿ ಕಾಯ್ದೆ ಪ್ರಕಾರ, ವಿದೇಶಿ ಪ್ರಜೆ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇನ್ನು ಅವರ ಶೈಕ್ಷಣಿಕ ದಾಖಲೆಗಳಲ್ಲಿ ರೌಲ್ ವಿಂಚಿ ಎಂಬ ಹೆಸರು ಇದೆ. ರಾಹುಲ್ ಗಾಂಧಿ ಹೆಸರಿನ ಸರ್ಟಿಫಿಕೇಟ್‌ಗಳು ಲಭ್ಯವಿಲ್ಲ. ಇಬ್ಬರೂ ಒಂದೇ ವ್ಯಕ್ತಿಯಾಗಿದ್ದಲ್ಲಿ ಅದಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ನಾವು ಆಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಈ ಆರೋಪಿಗಳಿಗೆ ರಾಹುಲ್ ಗಾಂಧಿ ಅಥವಾ ಅವರ ವಕೀಲರು ಸ್ಪಷ್ಟನೆ ನೀಡದಿದ್ದಲ್ಲಿ ಅಮೇಠಿ ರಿಟರ್ನಿಂಗ್ ಅಧಿಕಾರಿ ನಾಮಪತ್ರ ತಿರಸ್ಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೋಮವಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸ್ಪಷ್ಟನೆ ಕೇಳಿದ ಬಿಜೆಪಿ: ಈ ಮಧ್ಯೆ ಪೌರತ್ವ ಹಾಗೂ ಶೈಕ್ಷಣಿಕ ವಿವಾದಕ್ಕೆ ಸಂಬಂಧಿಸಿ ರಾಹುಲ್ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇವು ಗಂಭೀರ ಆರೋಪಗಳಾಗಿದ್ದು, ತಾನು ಭಾರತೀಯ ನಾಗರಿಕನೇ ಅಥವಾ ಅಲ್ಲವೇ ಎಂಬು ದನ್ನು ರಾಹುಲ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್ ನರಸಿಂಹರಾವ್ ಹೇಳಿದ್ದಾರೆ. ಅಲ್ಲದೆ, ಈ ವಿವಾದಕ್ಕೆ ಪ್ರತಿಕ್ರಿಯಿ ಸಲು ರಾಹುಲ್ ಪರ ವಕೀಲರು ಸಮಯ ಕೇಳಿರುವುದು ಇನ್ನಷ್ಟು ಅನುಮಾನ ಮೂಡಿಸಿದೆ ಎಂದೂ ಹೇಳಿದ್ದಾರೆ. ಪೆಟ್ರೋಲ್ ರೀತಿ ಕೆಲಸ ಮಾಡುವ “ನ್ಯಾಯ್’
ಕಾಂಗ್ರೆಸ್ ಪ್ರಸ್ತಾಪಿಸಿರುವ ಕನಿಷ್ಠ ಆದಾಯ ಯೋಜನೆ “ನ್ಯಾಯ್’ ಪೆಟ್ರೋಲ್ ರೀತಿ ಕೆಲಸ ಮಾಡಿ, ಆರ್ಥಿಕತೆಯ ಇಂಜಿನ್ ಅನ್ನು ಚಲಿಸು ವಂತೆ ಮಾಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಛತ್ತೀಸ್‌ಗಢದ ಬಿಲಾಸ್‌ಪುರ ದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ. ಈ ಯೋಜನೆಯಿಂದಾಗಿ ಜನರು ತಮಗೆ ಅಗತ್ಯ ವಿರುವ ಸಾಮಗ್ರಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಉತ್ಪಾದಕತೆಯೂ ಹೆಚ್ಚು ತ್ತದೆ. 2014ರಲ್ಲಿ ದೊಡ್ಡ ದೊಡ್ಡ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು. ಆದರೆ ಯಾವುದೂ ಈಡೇರಿಕೆಯಾಗಲಿಲ್ಲ. ಬದಲಿಗೆ ಬಡವರಿಂದ ಹಣವನ್ನು ಪಡೆದು ಕೆಲವೇ ಉದ್ಯಮಿಗಳಿಗೆ ಕೊಟ್ಟರು ಎಂದು ರಾಹುಲ್ ಆರೋಪಿಸಿದ್ದಾರೆ. ಇನ್ನು ಬಿಹಾರದ ಸುಪೌಲ್‌ನಲ್ಲಿ ಮಾತನಾಡಿದ ರಾಹುಲ್, ಚೌಕಿದಾರನನ್ನು ಕೆಲಸದಿಂದ ತೆಗೆದು ಹಾಕಲು ಜನರು ನಿರ್ಧರಿಸಿದ್ದಾರೆ ಎಂದಿದ್ದಾರೆ.