ಪುರ್ಬಸ್ತಾಲಿ: ಪಶ್ಚಿಮ ಬಂಗಾಳದಲ್ಲಿ ಐದು ಹಂತಗಳಲ್ಲಿ ಚುನಾವಣೆತಯಾದ 180 ಸ್ಥಾನಗಳಲ್ಲಿ 122 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ(ಏ. 18) ಪ್ರತಿಪಾದಿಸಿದ್ದಾರೆ.
ಪುರ್ಬಾ ಬರ್ಧಮನ್ ಜಿಲ್ಲೆಯ ಪುರ್ಬಸ್ತಾಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ್ ಸ್ಥಾನವನ್ನು ಬಿಜೆಪಿಗೆ ಕೊಟ್ಟ ನಂತರ ನಿರ್ಗಮಿಸಬೇಕಾಗುತ್ತದೆ ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ : ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್
‘122 ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಲಿರುವ ಬಿಜೆಪಿ ತನಗಿಂತ ಹೆಚ್ಚು ಮುಂದೆ ಬರಲಿದೆ ಎಂಬ ಕಾರಣಕ್ಕೆ, ದೀದಿ ಐದು ಹಂತದ ಚುನಾವಣೆಗಳ ನಂತರ ನಿರಾಶೆಗೊಂಡಂತೆ ಕಾಣುತ್ತದೆ’ ಎಂದು ಅವರು ಹೇಳಿದ್ದಾರೆ.
“ದೀದಿ…ತಗೊಳ್ಳಿ ಸುವೇಂದು ಅಧಿಕಾರಿ (ಬಿಜೆಪಿ ಅಭ್ಯರ್ಥಿ) ನಂದಿಗ್ರಾಮ್ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಹೀನಾಯ ಸೋಲಿನೊಂದಿಗೆ ನೀವು ವಿದಾಯ ಹೇಳಬೇಕು ಎಂದು ಗೃಹ ಸಚಿವ ಶಾ ಹೇಳಿದ್ದಾರೆ.
ಇದನ್ನೂ ಓದಿ : ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ