ವದಂತಿಗಳು ಹೇಗೆ ಹಬ್ಬುತ್ತವೆ ಗೊತ್ತಾ? ಸಣ್ಣ ವಿಷಯಗಳನ್ನು ಸರಿಯಾಗಿ ಗ್ರಹಿಸದೇ ದೊಡ್ಡದು ಮಾಡಿದಾಗ ಹೀಗಾಗುತ್ತದೆ. ಮೆಕ್ಸಿಕೊವನ್ನು ಶನಿವಾರ ತಡರಾತ್ರಿಯ ಪಂದ್ಯದಲ್ಲಿ ಅರ್ಜೆಂಟೀನ ಸೋಲಿಸಿತ್ತು.
ಆ ವೇಳೆ ದಂತಕಥೆ ಲಯೋನೆಲ್ ಮೆಸ್ಸಿ ಸಂಭ್ರಮಿಸುತ್ತಿದ್ದರು. ಈ ಹೊತ್ತಿನ ವಿಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಮೆಸ್ಸಿ ತಮ್ಮ ಬಲಗಾಲಿನ ಬೂಟು ತೆಗೆಯಲು ಹೊರಟಾಗ, ಅದರ ಮೇಲಿದ್ದ ಜೆರ್ಸಿಯನ್ನು ಕೊಡವಿದ್ದಾರೆ. ಅದು ಮೆಕ್ಸಿಕೊದ ಜೆರ್ಸಿ.
ಅದನ್ನು ಮೆಕ್ಸಿಕೊದ ವಿಶ್ವ ನಂ.1 ಬಾಕ್ಸರ್ ಕೆನಾಲೊ ಅಲ್ವಾರೆಝ್ ಗಮನಿಸಿ, ಮೆಕ್ಸಿಕೊದ ಜೆರ್ಸಿಯಿಂದ ಮೆಸ್ಸಿ ನೆಲ ಒರೆಸಿದ್ದಾರೆ, ತುಳಿದಿದ್ದಾರೆ ಎಂದು ಕೂಗಾಡಿದ್ದಾರೆ. ವಾಸ್ತವವಾಗಿ ವಿಡಿಯೊವನ್ನು ಗಮನಿಸಿದರೆ ಮೆಸ್ಸಿ ಹಾಗೆ ಮಾಡಿದ್ದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಅನಗತ್ಯವಾಗಿ ಕೆನಾಲೊ ಹೇಳಿಕೆ ಒಂದಷ್ಟು ಬೆಂಕಿ ಹತ್ತಿಸಿದೆ.