Advertisement

Chitradurga: ಸೈನೇಡ್‌ ಸೇವಿಸಿ ನಾಲ್ಕು ವರ್ಷ ಹಿಂದೆ ಸಾವಿಗೆ ಶರಣಾಗಿತ್ತೇ ರೆಡ್ಡಿ ಕುಟುಂಬ?

10:37 PM Dec 29, 2023 | Team Udayavani |

ಚಿತ್ರದುರ್ಗ: ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದ ಕ್ಯಾಲೆಂಡರ್‌ 2019 ಜನವರಿಗೆ ನಿಂತು ಬಿಟ್ಟಿದೆ. ಬಹುಶಃ ಇದೇ ಹೊತ್ತಿಗೆ ಈ ಮನೆಯಲ್ಲಿದ್ದ ಐದು ಜೀವಗಳು ಉಸಿರು ನಿಲ್ಲಿಸಿರಬಹುದು!

Advertisement

ಹೌದು, ಒಂದೇ ಮನೆಯ ಐವರು ಮೃತಪಟ್ಟು ಬರೋಬ್ಬರಿ ನಾಲ್ಕು ವರ್ಷ ಕಳೆದಿರುವ ಬಲವಾದ ಅನುಮಾನ ವ್ಯಕ್ತವಾಗಿದೆ. ಈ ಶವಗಳು ಕೊಳೆತು, ಆಗಲೇ ಅಸ್ಥಿಪಂಜರದ ಸ್ಥಿತಿಗೆ ತಲುಪಿವೆ.
ಶವಗಳ ಸ್ಥಿತಿಯನ್ನು ಗಮನಿಸಿದಾಗ ಮೈಮೇಲೆ ಹಾಕಿಕೊಂಡಿರುವ ಬೆಡ್‌ಶೀಟ್‌ ಕೂಡ ಆಚೀಚೆ ಆಗಿರಲಿಲ್ಲ. ಇದನ್ನು ಗಮನಿಸಿದರೆ ಸೈನೇಡ್‌ ಸೇವಿಸಿ ಮೃತಪಟ್ಟಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರಲ್ಲಿ ಕೃಷ್ಣಾ ರೆಡ್ಡಿ ಆಗಾಗ ಕೆಲವು ಸ್ನೇಹಿತರ ಬಳಿ ನಾವು ಒಬ್ಬರು ಕಾಣಿಸದಿದ್ದರೂ ಇಡೀ ಕುಟುಂಬ ಇರುವುದಿಲ್ಲ. ಒಬ್ಬರು ಇಲ್ಲ ಅಂದ್ರೂ ನಾವು ಬದುಕಿರುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಈ ಕುಟುಂಬ ಇಂತಹ ನಿರ್ಧಾರ ಕೈಗೊಳ್ಳಲು ಬಲವಾದ ಕಾರಣವೇನು ಎಂಬುದು ತನಿಖೆ ಬಳಿಕವೇ ಗೊತ್ತಾಗಬೇಕಿದೆ.

ಸಂಬಂಧಿ ಹೇಳಿದ್ದೇನು?
ಈ ನಡುವೆ ಮೃತ ಪ್ರೇಮಾ ಅವರ ಸಹೋದರಿ ಲಲಿತಾ ಅವರು, ಜಗನ್ನಾಥ ರೆಡ್ಡಿ ದಂಪತಿಯ ಕೊರಗಿಗೆ ಕಾರಣವನ್ನು ಬಿಚ್ಚಿಟ್ಟರು. ಹಿರಿಯ ಮಗಳು ತ್ರಿವೇಣಿಗೆ ಆರೋಗ್ಯದ ಸಮಸ್ಯೆ ಕಾರಣಕ್ಕೆ ಮದುವೆ ಆಗಿರಲಿಲ್ಲ. ಜತೆಗೆ ಇಬ್ಬರು ಪುತ್ರರೂ ಮದುವೆಯಾಗದೆ ಉಳಿದಿದ್ದರು. ಈ ಬಗ್ಗೆ ಪ್ರೇಮಾ ಹಾಗೂ ಜಗನ್ನಾಥ ರೆಡ್ಡಿಗೆ ಬಹಳ ಬೇಸರವಿತ್ತು. ಸಾಕಷ್ಟು ಬಾರಿ ಈ ವಿಷಯ ಪ್ರಸ್ತಾವಿಸಿ ಅಳುತ್ತಿದ್ದರು. ಮಕ್ಕಳ ಮದುವೆ ವಿಚಾರವಾಗಿ ಕೊರಗುತ್ತಿದ್ದರು. ನೆಂಟರು-ಬಂಧುಗಳು ಈ ಬಗ್ಗೆ ಕೇಳಿದರೆ ಹೇಳುವುದೇನು ಎಂಬ ಕಾರಣಕ್ಕೆ ಅವರೊಂದಿಗೆ ದೂರವಿದ್ದರು. ಎಂಟು ವರ್ಷಗಳಿಂದ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಮನೆಯ ಬಳಿ ಬಂದಾಗ ಬೀಗ ಹಾಕಿದಂತೆ ಇದ್ದಿದ್ದನ್ನು ನೋಡಿ, ಎಲ್ಲರೂ ಎಲ್ಲೋ ಆಶ್ರಮಕ್ಕೆ ಸೇರಿರಬಹುದು ಎಂದು ಭಾವಿಸಿದ್ದೆವು ಎಂದು ತಿಳಿಸಿದ್ದಾರೆ.

ಜಗನ್ನಾಥ ರೆಡ್ಡಿ ಅವರ ಕುಟುಂಬ ಕಳೆದ ಒಂದು ದಶಕದಿಂದ ಸಾರ್ವಜನಿಕ ಸಂಪರ್ಕವನ್ನೇ ಕಳೆದುಕೊಂಡಿತ್ತು ಎನ್ನಲಾಗಿದೆ. ಅಕ್ಕಪಕ್ಕದ ಮನೆಯವರು ಹಾಗೂ ಸಂಬಂಧಿ ಕರು ಏಳೆಂಟು ವರ್ಷಗಳಿಂದ ಇವರನ್ನು ಎಲ್ಲಿಯೂ ನೋಡಿದ ನೆನಪಿಲ್ಲ. ಮನೆಗೆ ಬೇಕಾದ ಹಾಲು-ದಿನಸಿಯನ್ನು ಕೃಷ್ಣಾರೆಡ್ಡಿ ನಸುಕಿನಲ್ಲೇ ಹೋಗಿ ತರುತ್ತಿದ್ದರು. ಮತ್ತೆ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಕೃಷ್ಣಾ ರೆಡ್ಡಿಗೆ ಸಾಕಷ್ಟು ಜನರ ಪರಿಚಯವಿತ್ತು. ಜಮೀನಿನ ಕೆಲಸವನ್ನೂ ಮಾಡಿಸುತ್ತಿದ್ದರು. ಅನಂತರದ ವರ್ಷಗಳಲ್ಲಿ ಅದನ್ನೂ ನಿಲ್ಲಿಸಿ ಕಾಣದಂತಾಗಿದ್ದರು. ಬೆಳಗಾದರೆ ಮನೆಯ ಎದುರು ನೀರು ಹಾಕಿ, ರಂಗೋಲಿ ಹಾಕುವುದು ವಾಡಿಕೆ. ಆದರೆ ಈ ಮನೆಯ ಬಳಿ ಅಂತಹ ದೃಶ್ಯವನ್ನು ಐದಾರು ವರ್ಷಗಳಿಂದ ನೋಡಿಯೇ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದರು.

ತನಿಖೆ ಚುರುಕು: ಪರಮೇಶ್ವರ್‌
ತುಮಕೂರು: ಚಿತ್ರದುರ್ಗದಲ್ಲಿ ಐವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಚುರುಕುಗೊಂಡಿದೆ. ಎಫ್ಎಸ್‌ಎಲ್‌ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾ
ಗಿದೆ. ವರದಿ ಬಂದ ಬಳಿಕ ಇವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಸತ್ಯಾಂಶ ಹೊರ ಬೀಳಲಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು. ಪೊಲೀಸರು ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್ಎಸ್‌ಎಲ್‌ ವರದಿ ಬಂದ ಬಳಿಕ ಮೃತಪಟ್ಟಿರುವವರ ವಯಸ್ಸು, ಸತ್ತು ಎಷ್ಟು ದಿನವಾಗಿದೆ ಎಂಬ ಮಾಹಿತಿ ಸಿಗಲಿದೆ ಎಂದರು.

Advertisement

ಸಂಪರ್ಕವೇ ಇರಲಿಲ್ಲ
ಜಗನ್ನಾಥ ರೆಡ್ಡಿ ಅವರ ಸಂಬಂಧಿ  ದೊಡ್ಡಸಿದ್ದವ್ವನಹಳ್ಳಿಯ ಪವನ್‌ಕುಮಾರ್‌ ಚಿತ್ರದುರ್ಗ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲವಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಅವರ ಕುಟುಂಬ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ನಮ್ಮ ಮನೆಗೂ ಅವರು ಬರುತ್ತಿರಲಿಲ್ಲ. ನಾಲ್ಕೈದು ವರ್ಷಗಳಿಂದ ಈ ಕುಟುಂಬವನ್ನು ನೋಡಿಲ್ಲ. ಆದರೆ ಈಗ ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಕುಟುಂಬದ್ದೇ ಎನ್ನುವ ಅನುಮಾನವಿದೆ. ಮೃತರ ಸಾವಿನ ಬಗ್ಗೆ ಅನುಮಾನವಿದೆ ಎಂದು ಉಲ್ಲೇಖೀಸಿದ್ದಾರೆ. ಸ್ಥಳೀಯರು, ಸಂಬಂ ಧಿಕರ ಹೇಳಿಕೆಗಳ ಆಧಾರದಲ್ಲಿ ಐದು ಶವಗಳು ಜಗನ್ನಾಥ ರೆಡ್ಡಿ ಅವರ ಕುಟುಂಬದವರದ್ದೇ ಇರಬಹುದು ಎನ್ನುವ ಅನುಮಾನವಿದೆ. ಎಫ್‌ಎಸ್‌ಎಲ್‌ ವರದಿ ಬಂದ ಅನಂತರ ಅ ಧಿಕೃತವಾಗಿ ಹೇಳಬಹುದು. ಯಾವುದೇ ಡೆತ್‌ನೋಟ್‌ ಸಿಕ್ಕಿಲ್ಲ. ರೆಡ್ಡಿ ಅವರ ಪುತ್ರ ನರೇಂದ್ರ ರೆಡ್ಡಿ ವಿರುದ್ಧ ಬಿಡದಿ ಠಾಣೆಯಲ್ಲಿ 2013ರಲ್ಲಿ ದೂರು ದಾಖಲಾಗಿ ಬಂಧನವೂ ಆಗಿದ್ದ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next