Advertisement
ಎಚ್-1ಬಿ ವೀಸಾ ವಿಚಾರ ಅಮೆರಿಕ ಅಧ್ಯ ಕ್ಷೀಯ ಚುನಾವಣೆಯಲ್ಲೂ ಪ್ರತಿಧ್ವನಿಸಿತ್ತು. ಟ್ರಂಪ್ ಅವರ ಈ ನಿರ್ಧಾರವನ್ನೇ ಬಳಸಿಕೊಂಡು ಜೋ ಬೈಡೆನ್ ಅವರು ಅನಿವಾಸಿ ಭಾರತೀಯರ ಬಳಿ ಹೋಗಿದ್ದರು. ಡೆಮಾಕ್ರಾಟ್ ಪಕ್ಷ ಅಧಿಕಾರಕ್ಕೆ ಬಂದರೆ ಈ ನಿಯಮ ತೆಗೆದು ಹಾಕಲಾಗುವುದು ಎಂದಿದ್ದರು. ಈ ಮೂಲಕ ಅನಿವಾಸಿ ಭಾರತೀಯರು ಬೈಡೆನ್ ಅವರನ್ನು ಬೆಂಬಲಿಸಿದರು. ಅಮೆರಿಕದ ನೂತನ ಅಧ್ಯಕ್ಷರಾಗಿ ಬೈಡೆನ್ ಚುನಾಯಿತರಾದರು. ಇದರಿಂದ ಭಾರತೀಯರ ಮೇಲೆ ಆಕ್ರೋಶಗೊಂಡ ಟ್ರಂಪ್ ಅವರು ಎಚ್-1ಬಿ ವೀಸಾದ ಮೇಲಣ ನಿರ್ಬಂಧವನ್ನು ಮಾ. 31ರ ತನಕ ವಿಸ್ತರಿಸುವ ಮೂಲಕ ಸೋಲಿನ ಮುಯ್ಯಿ ತೀರಿಸಿಕೊಂಡಿದ್ದಾರೆ.
ಎಚ್ -1 ಬಿ ವೀಸಾದ ಮೇಲಣ ನಿಷೇಧವನ್ನು ಮಾ. 31ರ ವರೆಗೆ ವಿಸ್ತರಿಸಲಾಗಿರುವುದರಿಂದ ಮುಂದಿನ ನಿರ್ಧಾರ ಕೈಗೊಳ್ಳುವ ಹೊಣೆ ಬೈಡೆನ್ ಅವರ ಹೆಗಲಿಗೇರಿದೆ. ಈ ನಿಷೇಧವನ್ನು ವಿಸ್ತರಿಸದೇ ಇರುತ್ತಿದ್ದರೆ ಅಲ್ಲಿನ ಜನರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿದ್ದವು. ನಾನು ಚುನಾವಣೆಯಲ್ಲಿ ಸೋತರೂ ಅಮೆರಿಕದ ಹಿತವನ್ನು ಕಾಪಾಡುತ್ತಿದ್ದೇನೆ ಎಂಬ ಸಂದೇಶವನ್ನು ಈ ಮೂಲಕ ಟ್ರಂಪ್ ರವಾನಿಸಿದ್ದಾರೆ.
Related Articles
Advertisement
ಭಾರತೀಯರೇ ಹೆಚ್ಚುಎಚ್ -1 ಬಿ ವೀಸಾಗಳ ಅತೀ ದೊಡ್ಡ ಫಲಾನುಭವಿಗಳಲ್ಲಿ ಭಾರತೀಯರು ಸೇರಿ¨ªಾರೆ. ಹೀಗಾಗಿ ಈ ನಿಷೇಧ ಪರಿಣಾಮ ಬೀರಲಿದೆ. ಅಮೆರಿಕದ ಸಂಶೋಧನ ಸಂಸ್ಥೆ ಬ್ರೂಕಿಂಗ್ಸ್‌ನ ಅಧ್ಯಯನದ ಪ್ರಕಾರ ಜೂ. 22ರ ಘೋಷಣೆಯಿಂದ ಫಾರ್ಚೂನ್ 500 ಕಂಪೆನಿಗಳಿಗೆ 100 ಬಿಲಿಯನ್ ಡಾಲರ್ ನಷ್ಟವಾಗಿದೆ. ಫಾರ್ಚೂನ್ 500 ಕಂಪೆನಿಗಳಲ್ಲಿ ಟೆಕ್ ಸಂಸ್ಥೆಗಳಾದ ಅಮೆಜಾನ್, ಆ್ಯಪಲ್, ಆಲ್ಫಾಬೆಟ್ (ಗೂಗಲ್‌ನ ಮೂಲ ಕಂಪೆನಿ), ಮೈಕ್ರೋಸಾಫ್ಟ್ ಮತ್ತು ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್‌ನಲ್ಲಿ ಹೆಚ್ಚು ಭಾರತೀಯರು ಉದ್ಯೋಗದಲ್ಲಿದ್ದಾರೆ.