ಚೆನ್ನೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹಾಡೊಂದಕ್ಕೆ ದೊಡ್ಡಮಟ್ಟದ ಮೊತ್ತವನ್ನು ಅವರು ಕೇಳಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ.
ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಕೃಷ್ಣ ಅವರ 108ನೇ ಸಿನಿಮಾದ ಸ್ಪಷೆಲ್ ನಂಬರ್ ಹಾಡೊಂದರಲ್ಲಿ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಲಿದ್ದಾರೆ ಇದಕ್ಕಾಗಿ ನಟಿ 5 ಕೋಟಿ ರೂ. ಸಂಭಾವನೆ ಕೇಳಿದ್ದಾರೆ. ಈ ವಿಚಾರ ನಿರ್ದೇಶಕರಿಗೆ ತುಂಬಾ ನಿರಾಶೆ ತಂದಿದೆ ಎಂದು ಕೆಲ ವೆಬ್ ಸೈಟ್ ಗಳು ವರದಿ ಮಾಡಿತ್ತು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ನಟಿ ತಮನ್ನಾ ಭಾಟಿಯಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ಅನಿಲ್ ರವಿಪುಡಿ ಸರ್ ಅವರೊಂದಿಗೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನಂದಮೂರಿ ಬಾಲಕೃಷ್ಣ ಸರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಸಿನಿಮಾದ ಹಾಡಿನ ಬಗ್ಗೆ ಬರುತ್ತಿರುವ ಈ ಆಧಾರರಹಿತ ಸುದ್ದಿ ಲೇಖನಗಳನ್ನು ಓದುವಾಗ ನನಗೆ ತುಂಬಾ ಬೇಸರವಾಗಿದೆ. ದಯವಿಟ್ಟು ಆರೋಪಗಳನ್ನು ಮಾಡುವ ಮೊದಲು ಸಂಶೋಧನೆಯನ್ನು ಮಾಡಿ” ಎಂದು ಬರೆದುಕೊಂಡಿದ್ದಾರೆ.
ಅನಿಲ್ ರವಿಪುಡಿ ಅವರ “ಫನ್ ಅಂಡ್ ಫ್ರಸ್ಟ್ರೇಶನ್ -1,2 ಸಿನಿಮಾದಲ್ಲಿ ತಮನ್ನಾ ನಟಿಸಿದ್ದಾರೆ.
Related Articles
ಸದ್ಯ ತಮನ್ನಾ ಮೆಹರ್ ರಮೇಶ್ ನಿರ್ದೇಶನದ ʼಭೋಲಾ ಶಂಕರ್ʼ ಶೂಟಿಂಗ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೀರ್ತಿ ಸುರೇಶ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಇದೇ ವರ್ಷದ ಆಗಸ್ಟ್ 11 ರಂದು ರಿಲೀಸ್ ಆಗಲಿದೆ.