ಇಷ್ಟೊಂದು ಅತ್ಯಾಚಾರ, ಕೊಲೆ, ದರೋಡೆ, ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಿತ್ತೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹಿಂದೂ
ಕಾರ್ಯಕರ್ತರ ಹತ್ಯೆ ಕುರಿತಂತೆ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಮಂಗಳವಾರ ಈ ಪ್ರಶ್ನೆಯನ್ನು ಬಿಜೆಪಿ ಸದಸ್ಯ ಸಿ.ಟಿ.ರವಿ ಹಾಕಿದರು. ಈ ಕೌರವರ ದರ್ಬಾರ್‌ಗೆ, ದುರ್ಯೋದ, ದುಶ್ಯಾಸನರ ಆಡಳಿತಕ್ಕೆ ಈ ಸರ್ಕಾರದಲ್ಲಿ ನ್ಯಾಯ ಕೇಳಿದರೆ ಸಿಗುವುದಿಲ್ಲ. ಆದ್ದರಿಂದ ಜನರಲ್ಲೇ ನ್ಯಾಯ
ಕೇಳುತ್ತೇವೆ. ಕೌರವರಾರು, ಪಾಂಡವರಾರು ಎಂಬುದು ಗೊತ್ತಾಗುತ್ತದೆ ಎಂದರು.
Advertisement
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ಮಾನಸಿಕತೆಯೇ ಕಾರಣ. 2013 ದನಗಳ್ಳ ಕಬೀರ್ ಎಂಬಾತ ಪೊಲೀಸ್ ಎನ್ಕೌಂಟರ್ನಲ್ಲಿ ಸತ್ತಾಗ ಆ ಕುರಿತು ತನಿಖೆ ನಡೆಯುವ ಮುನ್ನವೇ ಪೊಲೀಸ್ ಕಾನ್‌ಸ್ಟೆàಬಲ್ ನವೀನ್ ಅಮಾನತಾಗುತ್ತಾರೆ. ನಾಲ್ವರು ಸಚಿವರು, ಶಾಸಕರು ಕಬೀರ್ ಮನೆಗೆ ಹೋಗಿ ಕ್ರಿಮಿನಲ್‌ಗಳ ಮೇಲೆ ಕೈಎತ್ತಿದರೆ ಜೈಲಿಗೆ ಕಳುಹಿಸುವುದು ಖಂಡಿತ ಎಂಬ ಸಂದೇಶ ನೀಡುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.