ಉಡುಪಿ: ಪಡುಬಿದ್ರಿ ಸಹಕಾರಿ ವ್ಯಾವಸಾಯಿಕ ಸೊಸೈಟಿಯ ವಜ್ರಮಹೋತ್ಸವ ಹಾಗೂ ಆಡಳಿತ ಮಂಡಳಿ ಮತ್ತು ಸಿಬಂದಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮಣಿಪಾಲದ ಕಂಟ್ರಿ ಇನ್ ಹೊಟೇಲಿನಲ್ಲಿ ರವಿವಾರ ಜರಗಿತು.
ಬಡಗಬೆಟ್ಟು ಕೋ-ಆಪ್. ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಒಬ್ಬ ದಕ್ಷ ಅಧ್ಯಕ್ಷನಾಗಿ ತನ್ನ ಸೃಜನಾತ್ಮಕ ಚಿಂತನೆಯಿಂದ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಬಹುದು. ಅದಕ್ಕೆ ಪಡುಬಿದ್ರಿ ಸ.ವ್ಯ. ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಉದಾಹರಣೆ. ಕೇವಲ ತನ್ನ ಸಂಸ್ಥೆಯ ಚಿಂತನೆಯಲ್ಲದೆ ಸಹಕಾರಿ ಕ್ಷೇತ್ರಕ್ಕೆ ಸರಕಾರದ ಕಾನೂನು ಸಮಸ್ಯೆಯನ್ನು ಸರಕಾರಿ ಕ್ಷೇತ್ರದ ಹಿರಿಯರ ಮುಂದಿಟ್ಟು ಅದರ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಎಲ್ಲರನ್ನೂ ಎಚ್ಚರಿಸಿದ್ದಾರೆ. ಅಲ್ಲದೆ ಇಂದಿಲ್ಲಿ ಆಡಳಿತ ಮಂಡಳಿ ಮತ್ತು ಸಿಬಂದಿ ಸಮ್ಮಿಲನ ಏರ್ಪಡಿಸಿರುವುದು ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಪ್ರಥಮ ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಕೇವಲ ಕರ್ತವ್ಯಕ್ಕೆ ಮಾತ್ರ ಸಿಬಂದಿಯನ್ನು ಸೀಮಿತಗೊಳಿಸದೆ, ಆಡಳಿತ ಮಂಡಳಿ-ಸಿಬಂದಿ ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮದ ಮೂಲಕ ಅವರನ್ನು ತೊಡಗಿಸಿಕೊಳ್ಳು ವಂತೆ ಮಾಡುವುದರಿಂದ ಸಂಸ್ಥೆಯ ಕಾರ್ಯ ಪ್ರವೃತ್ತತೆ ಉತ್ತಮಗೊಳ್ಳಲಿದೆ ಎಂದರು.
ಬಡಗಬಟ್ಟು ಸೊಸೈಟಿಯಿಂದ ಜಿಲ್ಲಾ ಸಹಕಾರ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಸಿಬಂದಿಗೆ ಏರ್ಪಡಿಸಿದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪಡುಬಿದ್ರಿ ಸೊಸೈಟಿ, ಭಾಗವಹಿಸಿದ ಎಲ್ಲರನ್ನೂ ಶಾಸಕರು ಸಮ್ಮಾನಿಸಿದರು.ಬೆಳಪು ಸ.ವ್ಯ.ಸೊಸೈಟಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೆಮ್ಮಣ್ಣು ಗಣಪತಿ ಸ.ವ್ಯ. ಸೊಸೈಟಿ ಅಧ್ಯಕ್ಷ ಸತೀಶ್ ಟಿ. ಶೆಟ್ಟಿ, ಕೊಡವೂರು ಸ.ವ್ಯ. ಸೊಸೈಟಿ ಅಧ್ಯಕ್ಷ ನಾರಾಯಣ ಬಲ್ಲಾಳ್, ಪಡುಬಿದ್ರಿ ಸೊಸೈಟಿ ಉಪಾಧ್ಯಕ್ಷ ಗುರುರಾಜ್ ಉಪಸ್ಥಿತರಿದ್ದರು.
ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ರವೀಂದ್ರ ರಾವ್ ನಿರೂಪಿಸಿ, ಸಿಇಒ ನಿಶ್ಮಿತಾ ಎಚ್. ವಂದಿಸಿದರು.