Advertisement
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಸಚಿವಾಲಯ ಪತ್ರಾಂಕಿತ ಅಧಿಕಾರಿಗಳ ಸಂಘದ ವಜ್ರ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಅಧಿಕಾರಿ-ನೌಕರರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಡ್ಯುಟಿ ವೇಳೆ ಮೊಬೈಲ್ ಫೋನ್‌ಗಳನ್ನು ಪಕ್ಕಕ್ಕಿಡಬೇಕು’ ಎಂದು ಖಡಕ್ ಆಗಿ ಹೇಳಿದರು.
ಬೇಕಾದ ಎಷ್ಟೋ ಕಡತಗಳು ನನ್ನ ಬಳಿ ಬರುತ್ತವೆ. ಈ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ನೀವು ಹಿಂದೆಬಿದ್ದಿದ್ದೀರಿ. ಕೊಕ್ಕೆ ಹಾಕುವ ಪ್ರವೃತ್ತಿ ಬಿಡಬೇಕು’ ಎಂದು ತಾಕೀತು ಮಾಡಿದರು.
Related Articles
Advertisement
“ನಾನು ನಿಮಗೆ ಕ್ಲಾಸ್ ತೆಗೆದುಕೊಳ್ಳಲು ಬಂದಿಲ್ಲ. ಆದರೆ, ಇದೊಂದು ಅವಕಾಶ ಸಿಕ್ಕಿದ್ದರಿಂದ ನಿಮಗೆ ಹೇಳುತ್ತಿದ್ದೇನೆ’ ಎಂದೂ ಸ್ಪಷ್ಟಪಡಿಸಿದ ಕೆ. ರತ್ನಪ್ರಭಾ,ಮೊಬೈಲ್ ಫೋನ್ ದೊಡ್ಡ ಅಡ್ಡಿಯಾಗಿದೆ. ಕೆಲಸ ಮುಗಿಯುವವರೆಗೂ ಮೊಬೈಲ್ ಪಕ್ಕಕ್ಕಿಡಿ, ಕೆಲಸದ ಸಮಯ ಮುಗಿದ ನಂತರ ನಿಮಗೆ ಮುಕ್ತ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಕಚೇರಿ ಎರಡನೇ ಮನೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ನೌಕರರು ದಿನದ ಬಹುತೇಕ ಸಮಯವನ್ನು ಕಚೇರಿಗಳಲ್ಲಿ ಕಳೆಯುತ್ತಾರೆ. ಹಾಗಾಗಿ, ಕಚೇರಿ ಎರಡನೇ ಮನೆ ಇದ್ದಂತೆ.ನಿಮ್ಮ ಕುಟುಂಬದ ಸದಸ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವಂತೆ ಜನರ ಸಮಸ್ಯೆಗಳಿಗೂ ಸ್ಪಂದಿಸುವುದುನೌಕರರ ಜವಾಬ್ದಾರಿ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು, ಕರ್ನಾಟಕ ಸರ್ಕಾರ ಸಚಿವಾಲಯ ಪತ್ರಾಂಕಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಎನ್. ಕೃಷ್ಣಕುಮಾರ್, ಪದಾಧಿಕಾರಿಗಳಾದ ಡಾ.ಎಲ್. ಗೀತಾ, ಬಿ.ಎಸ್.ನಾಗರಾಜ್, ಎ. ದಿನೇಶ್ ಸಂಪತ್‌ರಾಜ್, ಟಿ.ವಿ.ಜಾನ್ಸನ್ ಆಂಥೋಣಿ, ಆರ್. ಚಂದ್ರಶೇಖರ್ ಉಪಸ್ಥಿತರಿದ್ದರು. ಇದೇ ವೇಳೆ, ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸಬೇಕು. ಕೇಂದ್ರ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ನಿಗದಿಪಡಿಸಿದ ವೇತನ ಶ್ರೇಣಿಯನ್ನು ರಾಜ್ಯದ ಸಚಿವಾಲಯಕ್ಕೂ ಅನ್ವಯ ಆಗಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಮುಂದು ವರಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘವು ಮನವಿ ಸಲ್ಲಿಸಿತು. ಜನರಿಗೆ ವಿನಾಕಾರಣ ಸರ್ಕಾರಿ ನೌಕರರು ತೊಂದರೆ ಕೊಟ್ಟರೆ,ಶಾಪ ತಟ್ಟುತ್ತದೆ. ಜನರ ಸೇವೆ ಮಾಡಲು
ದೇವರು ನಿಮ್ಮನ್ನು (ನೌಕರರನ್ನು)ನೇಮಿಸಿದ್ದಾನೆ. ಆದರೆ, ವಿನಾಕಾರಣ ಕೊಕ್ಕೆ ಹಾಕಿ ಅಲೆದಾಡಿಸಿದರೆ, ಶಾಪ
ತಟ್ಟುತ್ತದೆ ಹುಷಾರು.
– ರತ್ನಪ್ರಭಾ, ಸರ್ಕಾರದ ಮುಖ್ಯ ಕಾರ್ಯದರ್ಶಿ