Advertisement

219 ಕೋಟಿಗೆ ವಜ್ರ ಹರಾಜು

11:55 AM Nov 16, 2017 | Team Udayavani |

ಜಿನೇವಾ: ಜಗತ್ತಿನ ಅತಿ ವಿಶಿಷ್ಟವಾದ ವಜ್ರವೆಂದೇ ಖ್ಯಾತಿ ಪಡೆದಿದ್ದ 163 ಕ್ಯಾರಟ್‌ನ ವಜ್ರವೊಂದು ಜಿನೇವಾದಲ್ಲಿ 33.7 ಮಿಲಿಯನ್‌ ಡಾಲರ್‌ (ಸುಮಾರು 219 ಕೋಟಿ ರೂ.) ಬೆಲೆಯ ನೆಕ್ಲೆಸ್‌ ಜತೆಗೆ ಮಾರಾಟವಾಗಿದೆ.

Advertisement

ಈ ವಜ್ರದಿಂದಾಗಿಯೇ ನೆಕ್ಲೆಸ್‌ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದು 30 ಮಿಲಿಯನ್‌ ಡಾಲರ್‌ ನಿರೀಕ್ಷೆಯಲ್ಲಿದ್ದ ನೆಕ್ಲೆಸ್‌ ತಯಾರಕ ಸಂಸ್ಥೆ ಸ್ವಿಜರ್ಲೆಂಡ್‌ನ‌ ಗ್ರಿಸೊಗೊನೊಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ.

ಈ ವಜ್ರವನ್ನು ಕಳೆದ ವರ್ಷ ಆಫ್ರಿಕಾದ ಅಂಗೋಲಾದಲ್ಲಿನ ಗಣಿಯೊಂದರಲ್ಲಿ ಉತVನನ ಮಾಡಲಾಗಿತ್ತು. ಭೂಮಿಯ ಒಡಲಿನಿಂದ ಹೊರತೆಗೆದಾಗ ಇದು 404 ಕ್ಯಾರಟ್‌ ಇದ್ದು, 7ಸೆಂ.ಮೀ. ಉದ್ದವಿತ್ತು. ಇದು ಅಂಗೋಲಾದಲ್ಲಿ ಈವರೆಗೆ ತೆಗೆಯಲಾದ ವಜ್ರಗಳಲ್ಲೇ ಅತಿ ದೊಡ್ಡ ಹಾಗೂ ಇತಿಹಾಸದಲ್ಲೇ 27ನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗಿದೆ.

ಭಾರತದ ವಜ್ರಕ್ಕೂ

ಶುಕ್ರದೆಸೆ

Advertisement

ಭಾರತದಲ್ಲಿ ಉತVನನಗೊಂಡು ಆನಂತರ ಫ್ರಾನ್ಸ್‌ನ ದೊರೆಗಳಿಗೆ ಹಸ್ತಾಂತರವಾಗಿ ಅಲ್ಲಿಂದ ಸುಮಾರು 200 ವರ್ಷಗಳವರೆಗೆ ಫ್ರಾನ್ಸ್‌ ರಾಜನ ಕಿರೀಟದಲ್ಲಿ ವಿರಾಜಮಾನ ವಾಗಿದ್ದ 10.07 ಕ್ಯಾರಟ್‌ ತೂಕದ “ಗ್ರಾಂಡ್‌ ಮಝಾರಿನ್‌’ ಎಂಬ ವಜ್ರ ಕೂಡ 94 ಕೋಟಿ ರೂ.ಗೆ ಹರಾಜಾಗಿದೆ. ವಿಶ್ವ ಪ್ರಸಿದ್ಧಿ ಕೊಹಿ ನೂರ್‌ ವಜ್ರಗಳು ಸಿಗುವ ಗೋಲ್ಕೊಂ ಡಾ  (ಪ್ರಸ್ತುತ ತೆಲಂಗಾಣ ದ ಲ್ಲಿದೆ) ಗಣಿಗ ಳಲ್ಲೇ ಈ ವಜ್ರದ ಉತVನನ ವಾಗಿತ್ತು. ಜಗತ್ತಿನ 18 ಅತಿ ದೊಡ್ಡ ವಜ್ರ ಗ ಳ ಲ್ಲೊಂದು ಎಂಬ ಹಿರಿಮೆ ಇದರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next