Advertisement

Bheema; ‘ಭೀಮ’ ತೂಕದ ಮಾತು!: ಸಂಭಾಷಣೆಕಾರ ಮಾಸ್ತಿ ಮಿಂಚು

10:35 AM Aug 08, 2024 | Team Udayavani |

ಮಾಸ್‌-ಕ್ಲಾಸ್‌ ಎರಡೂ ಕೆಟಗರಿಯ ಸಿನಿಮಾಗಳಿಗೆ ಸಂಭಾಷಣೆಗೆ ಬರೆದು ಸೈ ಎನಿಸಿಕೊಂಡವರು ಮಾಸ್ತಿ. ಚಿತ್ರರಂಗಕ್ಕೆ ಸಂಭಾಷಣೆಕಾರರಾಗಿ ಎಂಟ್ರಿಕೊಟ್ಟ ದಿನದಿಂದಲೇ ತಮ್ಮ ಬರವಣಿಗೆಯ ಮೂಲಕ ಸ್ಯಾಂಡಲ್‌ವುಡ್‌ ಸಿನಿಮಂದಿಯ ಗಮನ ಸೆಳೆದು ಬಿಝಿ ಡೈಲಾಗ್‌ ರೈಟರ್‌ ಆಗಿರುವ ಮಾಸ್ತಿ ಈಗ ಮತ್ತಷ್ಟು ಸಿನಿಮಾಗಳಿಗೆ ಬರೆಯುತ್ತಿದ್ದಾರೆ. ಸದ್ಯ “ಭೀಮ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಟ್ರೇಲರ್‌ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಕುರಿತು ಮಾಸ್ತಿ ಮಾತನಾಡಿದ್ದಾರೆ..

Advertisement

ಭೀಮನ ಸದ್ದು ಎಲ್ಲೆಡೆ ಜೋರಾಗಿದೆ. ಒಬ್ಬ ಸಂಭಾಷಣೆಕಾರನಾಗಿ ಚಿತ್ರದ ಬಗ್ಗೆ ಏನು ಹೇಳುತ್ತೀರಿ?

ಭೀಮ ನನ್ನೊಬ್ಬನ ನಿರೀಕ್ಷೆ ಆಗಿಲ್ಲ, ಇಡೀ ಚಿತ್ರೋದ್ಯಮದ ಭರವಸೆ ಆಗಿದೆ. ಸಲಗ ಚಿತ್ರದ ನಂತರ ವಿಜಯ್‌ ಅವರ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರವಾಗಿರುವುದರಿಂದ ಇದರ ಮೇಲೆ ಹೆಚ್ಚೇ ನಿರೀಕ್ಷೆ ಇದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ.

ವಿಜಯ್‌ ಜೊತೆ ಮತ್ತೂಮ್ಮೆ ಕೆಲಸ ಮಾಡಿದ ಅನುಭವ?

ವಿಜಯ್‌ ನನಗೆ ದೊರೆತ ಅಮೂಲ್ಯ ಗೆಳೆಯ ಮತ್ತು ಅದ್ಭುತ ಗುರು. ಆತ ಚಿತ್ರದಿಂದ ಚಿತ್ರಕ್ಕೆ ಕಲಿಯುತ್ತ ಜೊತೆಯಲ್ಲಿ ಇರುವವರಿಗೆ ಕಲಿಸುತ್ತಾ ಹೋಗುತ್ತಾರೆ. ಅದು ಅವರ ವಿಶೇಷ ಗುಣ. ಚಿತ್ರದ ಸಂಭಾಷಣೆ ಆದಷ್ಟು ಸಹಜವಾಗಿ, ವಾಸ್ತವಕ್ಕೆ ಹತ್ತಿರವಾಗಿ ಇರಬೇಕು ಅನ್ನೋದು ವಿಜಿ ಅವರ ಅಭಿಲಾಷೆ. ಅದರ ಪ್ರಕಾರಾನೇ ಕೆಲಸ ಮಾಡಿದ್ದೀನಿ.

Advertisement

ಟಗರು, ಸಲಗ, ಕಾಟೇರದಂತಹ ಯಶಸ್ವಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೀರಿ. ಬೇಡಿಕೆ ಹೆಚ್ಚಾಗಿರಬೇಕಲ್ವಾ?

ಹೌದು, ಬೇಡಿಕೆ ಇದೆ ಮತ್ತೆ ಆ ಬೇಡಿಕೆ ನನ್ನಲ್ಲಿ ಭಯ ಹುಟ್ಟಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಸಂಭಾಷಣೆ ವಿಷಯದಲ್ಲಿ ನಿರ್ದೇಶಕರ, ಪ್ರೇಕ್ಷಕರ ಪ್ರೀತಿ ಪಡೆದ್ದೀನಿ. ಅದನ್ನ ಪ್ರತಿ ಚಿತ್ರದಲ್ಲಿಯೂ ಉಳಿಸಿಕೊಂಡು ಮುಂದುವರೆಸಿಕೊಂಡು ಹೋಗ್ಬೇಕು ಅನ್ನೋದೇ ನನ್ನ ಮುಂದಿರೋ ಸಿಹಿ ಸವಾಲು.

ಚಿತ್ರಕ್ಕೆ ಭೀಮ ಅನ್ನೋ ಶೀರ್ಷಿಕೆ ಯಾಕೆ? ಅಸಲಿಗೆ ಭೀಮ ಅಂದ್ರೆ ಏನು ? ಭೀಮ ಅಂದ್ರೆ ಹೇಗೆ?

ಭೀಮ ಅಂದ್ರೇನೆ ಬಲದ ಪರ್ಯಾಯ ಪದ. ಅದೊಂದು ಪ್ರಬಲ ವ್ಯಕ್ತಿತ್ವ . ಈ ಶಕ್ತಿಯುತ ಕಥೆಗೆ ಈ ತರಹದ್ದೇ ಶೀರ್ಷಿಕೆಯ ಅಗತ್ಯ ಬಹಳ ಇತ್ತು. ಮತ್ತೆ ಇದು ನಿರ್ಮಾಪಕ ದಿವಂಗತ ಕೋಟಿ ರಾಮು ಅವರು ಬಹಳ ವರುಷಗಳ ಕಾಲ ಕಾಪಿಟ್ಟುಕೊಂಡಿದ್ದ ಟೈಟಲ್. ಇದನ್ನು ಅವರ ಪತ್ನಿ ಮಾಲಾಶ್ರೀ ಅವರು ನಿರ್ಮಾಪಕ ಜಗದೀಶ್‌ ಅವರಿಗೆ ನೀಡಿದ್ದು .

ಸೈಕ್‌, ಜುಟ್ಟು, ಮೀಟರ್‌, ಫೀಲ್ಡು. ಭೀಮ ಡೈಲಾಗ್‌ ಗಳಲ್ಲಿ ಕೇಳಿಬರೋ ಈ ಪದಗಳನ್ನ ಎಲ್ಲಿ ಹುಡುಕಿದ್ರಿ?

ಈ ವಿಷಯದಲ್ಲಿ ದುನಿಯಾ ವಿಜಯ್‌ಗೆ ಥ್ಯಾಂಕ್ಸ್‌ ಹೇಳ್ಬೇಕು . ಸಂಭಾಷಣೆ ಸಹಜವಾಗಿರಬೇಕು ಅಂತ ಏರಿಯಾಗಳಲ್ಲಿ ಈಗಿನ ಹುಡುಗ ಹುಡುಗೀರು ಬಳಸೋ ಮಾತುಗಳನ್ನೇ ಯಥಾವತ್ತಾಗಿ ಡೈಲಾಗ್‌ಗಳಲ್ಲಿ ಉಪಯೋಗಿಸುವಂತೆ ಹೇಳಿ ಬರೆಸಿದರು.

ಭೀಮ ಚಿತ್ರದಲ್ಲಿ ಮಾಸ್‌ ಸಂಭಾಷಣೆ ಜೋರಾಗಿದೆಯಾ?

“ಮೀಟರು ಕಿಲೋಮೀಟರಗಟ್ಲೆ ಇದೆ’, “ನಾನು ತಂದೆಗುಟ್ಟಿದವನಲ್ಲ ದಂಧೆಗುಟ್ಟಿದವನು’… ಈತರದ ಮಾಸ್‌ ಡೈಲಾಗ್‌ಗಳ ಜೊತೆಗೆ, “ಹುಡುಗರು ಬೆಂಕಿಪಟ್ಟಣದಲ್ಲಿರೋ ಬೆಂಕಿಕಡ್ಡಿಗಳ ತರ ಒಂದು ಕಡ್ಡಿ ಅಂಟುಕೊಂಡ್ರು ಸಾಕು ಇಡೀ ಪಟ್ಟಣ ಭಗ್‌ ಅಂತ ಅಂಟುಕೊಂಡಿºಡುತ್ತೆ’, “ನೂರಾರು ಜನ ಕೌರವನ ಎದುರಿಸಿದವನು ಭೀಮ.. ಅಂತಾವ್ನು ಅವನ ಸೈನ್ಯ ಉಳಿಸ್ಕೊಳಲ್ವಾ’… ತರದ ಕ್ಲಾಸ್‌ ಡೈಲಾಗ್‌ಗಳೂ ಇರುತ್ತವೆ.

ಚಿತ್ರದ ಡೈಲಾಗ್‌ ರೈಟರ್‌ ಆಗಿ ಏನು ಹೇಳುತ್ತೀರಿ?

ಭೀಮ ಮಾಡಿ ನಿಮ್ಮ ಮುಂದೆ ಬರುತ್ತಿದ್ದೇವೆ. ಚಿತ್ರ ಪಕ್ಕಾ ಮಾಸ್‌ ಎಂಟರ್‌ಟೈನರ್‌ ಆಗಿ ಸಿದ್ಧವಾಗಿದೆ. ಈ ವಾರ ಭೀಮ ರಿಲೀಸ್‌ ಆಗುತ್ತಿದೆ. ಎಲ್ಲಾ ಚಿತ್ರ ಪ್ರೇಮಿಗಳೂ ನೋಡಿ ಹರಸಿ.

Advertisement

Udayavani is now on Telegram. Click here to join our channel and stay updated with the latest news.

Next