Advertisement

ಭಾರತ –ಪಾಕ್‌ ಉದ್ವಿಗ್ನತೆ ಶಮನಕ್ಕೆ ಮಾತುಕತೆ: ಫಾರೂಕ್‌ ಸಲಹೆ

11:58 AM Feb 25, 2019 | udayavani editorial |

ಶ್ರೀನಗರ : ‘ಭಾರತ – ಪಾಕ್‌ ಉದ್ವಿಗ್ನತೆಯನ್ನು ಶಮನಗೊಳಿಸಲು ಮಾತುಕತೆಯೊಂದೇ ಮಾರ್ಗ; ಹಾಗೆಯೇ ಇಸ್ಲಾಮಾಬಾದ್‌ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರನ್ನು ಮಟ್ಟ ಹಾಕಲು ಬಲವಾದ ಪ್ರಯತ್ನ ಮಾಡಬೇಕಾಗಿದೆ’ ಎಂದು ನ್ಯಾಶನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ ಹೇಳಿದ್ದಾರೆ.

Advertisement

“ಯುದ್ಧದ ಉನ್ಮಾದವನ್ನು ಸೃಷ್ಟಿಸುವ ಯತ್ನಗಳು ನಡೆಯುತ್ತಿವೆ. ಆದುದರಿಂದ ನೀವು ದೇವರಲ್ಲಿ, ಯುದ್ಧದಿಂದ ನಮ್ಮನ್ನು ಪಾರು ಮಾಡು ಎಂದು ಪ್ರಾರ್ಥಿಸಬೇಕಿದೆ; ಈ ವರೆಗೆ ನಾವು ನಾಲ್ಕು ಯುದ್ಧಗಳನ್ನು ಮಾಡಿದ್ದೇವೆ; ಆದರೆ ಅದರಿಂದ ಜೀವ ಹಾನಿ ಬಿಟ್ಟರೆ ಬೇರೇನೂ ಸಾಧಿತವಾಗಿಲ್ಲ” ಎಂದು ಅಬ್ದುಲ್ಲ ಅವರು ಇಲ್ಲಿನ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳನ್ನು ಉದ್ದೇಶಿಸಿ ಹೇಳಿದರು. 

”ಪಾಕಿಸ್ಥಾನ ತನ್ನ ನೆಲದಲ್ಲಿ ಸಕ್ರಿಯವಾಗಿರುವ ಉಗ್ರರ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳದಿದ್ದರೆ ಆ ದೇಶಕ್ಕೆ ಭಯೋತ್ಪಾದಕ ದೇಶವೆಂಬ ಹಣೆ ಪಟ್ಟಿ ಸಿಗುತ್ತದೆ; ಅದರಿಂದ ಇಡಿಯ ದೇಶದ ಜನರು ತೊಂದರೆಗೆ ಗುರಿಯಾಗುತ್ತಾರೆ” ಎಂದು ಅಬ್ದುಲ್ಲ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next