Advertisement
ಮರಣದ ಮನೆಯ ಸಾಧಕಬಾಧಕಗಳೇನು? ಮರಣದ ಮನೆಯು ಒಬ್ಬ ವ್ಯಕ್ತಿಯ ಜಾತಕದ ಅಷ್ಟಮ ಸ್ಥಾನವಾಗಿರುತ್ತದೆ. ಮದದಿಂದ ಕೊಬ್ಬಿದ್ದ ಕಂಸನನ್ನು ಅಶರೀರವಾಣಿಯೊಂದು ಎಚ್ಚರಿಸುವಾಗ, ನಿನ್ನ ತಂಗಿಯ ಅಷ್ಟಮ ಗರ್ಬ ನಿನ್ನ ಸಾವಿಗೆ ದಾರಿ ತೆರೆಯುತ್ತದೆ ಎಂದು ಹೇಳಿದ ವಿಚಾರ ನೆನಪಿಸಿಕೊಳ್ಳಿ. ದೇವಾನಂದ್ ಅವರ ಜಾತಕದಲ್ಲಿನ ಅಷ್ಠಮಸ್ಥಾನ, ನಮ್ಮ ದೇಶದ ಮಹಾನ್ ನ್ಯಾಯವಾದಿ ರಾಮ್ ಜೇಠ್ಮಲಾನಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಪ್ರಧಾನಿ ದಿ. ಮುರಾರ್ಜಿ ದೇಸಾಯಿ ತೊಂಬತ್ತರ ನಂತರವೂ ಹಾಯಾಗಿಯೇ ಇದ್ದು ಬದುಕನ್ನು ಆನಂದಿಸಿದ್ದ ಖುಷವಂತ್ ಸಿಂಗ್ ಇವರೆಲ್ಲಾ ವೃದ್ಧಾಪ್ಯದಲ್ಲೂ ತಮ್ಮ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಪ್ರದರ್ಶಿಸಲು ಹೇಗೆ ಸಾಧ್ಯವಾಗುತ್ತಿದೆ? ಭಾರತದ ಮಾಜಿ ಉಪಪ್ರಧಾನಿ ಲಾಲಕೃಷ್ಣ ಆಡ್ವಾಣಿ ಈಗಲೂ ಪ್ರಧಾನಿ ಪಟ್ಟ ನಿರ್ವಹಿಸುವ ಕ್ರಿಯಾಶೀಲತೆ ಹೊಂದಿದ್ದಾರೆ. ವರ್ಷ ವೀಗ ಬರೋಬ್ಬರಿ ತೊಂಬತ್ತು. ಸಾಯುವಾಗ ತೊಂಬತ್ತರ ಹತ್ತಿರ ಬಂದಿದ್ದ ದೇವಾನಂದರಿಗೆ ಆಗಲೂ ಹೊಸ ಚಿತ್ರದಲ್ಲಿ ನಟಿಸುವ ಉಮೇದಿ ಇದ್ದೇ ಇತ್ತು. ಖುಷವಂತ್ ಸಿಂಗ್ ಗೆ 90+ ಆದರೂ ವಿಸ್ಕಿಯ ಗುಟುಕುಗಳಲ್ಲಿ ದಣಿಯದೆ ತರುಣರಂತೆ ಇದ್ದರು. ದಿವಂಗತ ಪ್ರಧಾನಿ ಮೊರಾರ್ಜಿ 80+ ಆದಾಗಲೂ ಪ್ರಧಾನಿಗಳಾಗಿ ಕೆಲಸ ನಿರ್ವಹಿಸಿದರು. ದೇವೇಗೌಡರು ಈ ವಯಸ್ಸಿನಲ್ಲೂ ಮಾನಸಿಕ ದಾಡ್ಯìತೆ ಪಡೆದೇ ಇದ್ದಾರೆ. ನೆನಪಿಡಿ ಇವರೆಲ್ಲರಿಗೂ ಚಂದ್ರನ ಸಿದ್ಧಿ ಇದೆ. ಚಂದ್ರ ಮಾತೃಕಾರಕ. ಈ ಕಾರಣದಿಂದಾಗಿ ಮಾತೆ ನೀಡುವ ಆರೈಕೆ ಆಯಸ್ಸಿನ ಸಂಜೀವಿನಿ ದಕ್ಕಲು ಅನುಕೂಲ ಒದಗುತ್ತದೆ. ಆದರೆ ಮರಣ ಸ್ಥಾನಕ್ಕೂ, ಚಂದ್ರನಿಗೂ ಉಪಯುಕ್ತ ಸಂಬಂಧಗಳು ಬೇಕು. ಕೇತು ಶುಕ್ರ ಕುಜ ಅಥವಾ ರಾಹುಗಳು ಅಧಿಕವಾಗಿ ಅಲ್ಪಾಯುಷ್ಯಕ್ಕೆ ಅಥವಾ ಮರಣಶಾಸನಕ್ಕೆ ಕಾರಣರಾಗುತ್ತಾರೆ. ಜನರಲ್ ಮುಶ್ರಫ್ ಆಡಳಿತಾವಧಿಯಲ್ಲಿ ಇಂದಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಜನರಲ್ ಜಿಯಾ ಉಲ್ ಹಕ್ ಆಡಳಿತದ ಸಂದರ್ಭದಲ್ಲಿ ಭುಟ್ಟೋ ಎದುರಿಸಿದ ರಾಜದ್ರೋಹದ ಆಪಾದನೆಗಳು ಒಂದೇ ರೀತಿಯದ್ದಾದರೂ ಭೂಟ್ಟೋ ಅವರ ರಾಹು ದೋಷ ಚಂದ್ರನ ಶಕ್ತಿಯನ್ನು ಕ್ಷೀಣಿಸಿದ್ದರಿಂದ ಗಲ್ಲಿಗೇರಲೇ ಬೇಕಾಗಿ ಬಂತು. ಕೆಲವು ನಿಗೂಢ ಕಾರಣಗಳು ಕುಜ ಹಾಗೂ ಶುಕ್ರರ ಕಾರಣದಿಂದಾಗಿ ಅಸಹಜ ಮರಣಕ್ಕೆ ಕಾರಣವಾಗಿಯೇತೀರಿತ್ತು. ಲಾಭದಾಯಕ ಚಂದ್ರ ಮರಣದ ನೆರಳಲ್ಲಿ ಇದ್ದರೂ ತನ್ನ ಬಲಾಡ್ಯತೆಯ ನೆರವಿನಿಂದ ಮರಣ ತಪ್ಪಿಸಿದ್ದ.
ಹಲವು ವ್ಯಕ್ತಿಗಳು ಅನೇಕ ರೀತಿಯ ಅಲೌಕಿಕ ಸಾಧನೆಗಳನ್ನು ಸಾಧಿಸಿ ಕೆಲವು ಶಕ್ತಿಗಳನ್ನು ಪಡೆದಿರುತ್ತಾರೆ. ಆರನೇ ಜಾಗೃತ ಇಂದ್ರಿಯ ತಂತಾನೆ ಹೊಸದೊದು ಅಲೌಕಿಕ ಶಕ್ತಿಯ ಮೂಲಕ ಗೋಚರಕ್ಕೆ ಬರುವುದು ಇವರಿಗೆ ಒಲಿದಿರುತ್ತದೆ. ಇವರು ಕುಜನ ದುಷ್ಟ ಪ್ರಭಾವ, ರಾಹುವಿನ ಘಾತಕ ಶಕ್ತಿ ಫಲವಾಗಿ ಅಲೌಕಿಕ ದಿವ್ಯಶಕ್ತಿಯನ್ನು ರಾಕ್ಷಸ ಶಕ್ತಿಯ ಸ್ವರೂಪದೊಂದಿಗೆ ಕೃತ ವ್ಯಕ್ತಿಗಳಾಗುವ ಸಾಧ್ಯತೆಯೂ ಇರುತ್ತದೆ. ಮರಣದ ಮನೆ, ನಿಗೂಢಗಳ ಕಗ್ಗಂಟಾದ ಛಿದ್ರಸ್ಥಾನ ಒಂದು ಹಂತದಲ್ಲಿ ಇವರಿಗೆ ಒದಗಿದಲ್ಲಿ ಪವಾಡ ಪುರುಷರಾಗುವ ಶಕ್ತಿ ಒದಗುತ್ತದೆ. ಎಲ್ಲಾ ತಿಳುವಳಿಕೆಯ ಶಕ್ತಿ ಸಂಪನ್ಮೂಲಗಳನ್ನು ಪಡೆದೂ, ಶುಕ್ರನ ವಿಕೃತಿಯಿಂದ ಹಲವಾರು ರೀತಿ ಭ್ರಷ್ಟ ಜೀವನಕ್ಕೆ ಸಿಕ್ಕಿ ಬೀಳುತ್ತಾರೆ. ಕಾಮ, ಕ್ರೋಧ, ಲೋಭ, ಮೋಹಾದಿ ಅರಿಷಡ್ವರ್ಗಗಳಿಂದ ಕಳಂಕಿತರಾಗುತ್ತಾರೆ. ಅತ್ಯಾಚಾರ ಮಹಿಳೆಯರು ಕುತ್ಸಿತ ಕೆಲಸಗಳಿಗೆ ತೊಡಗುವುದೂ ಸೇರಿ, ಡ್ರಗ್ಸ್ ಪರಪೀಡೆ ಅನ್ಯರ ಚಾರಿತ್ರ್ಯವಧೆ ಕೊಲೆ ಸುಲಿಗೆ ವಶೀಕರಣದಂಥ ಝಾಲದಲ್ಲಿ ಸ್ಥಾನಮಾನದ ಪವಿತ್ರಸ್ಥಳದಲ್ಲಿದ್ದು ದಾರಿ ತಪ್ಪುವುದು ನಡೆಸುತ್ತಾರೆ. ಈ ದೇಶದ ಪ್ರಧಾನಿಗಳನ್ನು ದಾರಿ ತಪ್ಪಿಸಿದ ನಿಗೂಢ ಶಕ್ತಿ ಜಾಗ್ರತವಾಗಿದ್ದೂ ತಪ್ಪು ಹೆಜ್ಜೆಗಳಲ್ಲಿ ಕಾಲಿರಿಸಿದ ವ್ಯಕ್ತಿಗಳ ಉದಾಹರಣೆ ಕೊಡಬಹುದು. ಇವರೆಲ್ಲ ಯಾರು ಎಂಬುದು ಸಧ್ಯಕ್ಕೆ ಬೇಡ. ತಮ್ಮ ದಿವ್ಯಸಾಧನೆಯನ್ನು ಕಿರಾತಕ ಶಕ್ತಿಯನ್ನಾಗಿ ರೂಪಿಸಿಕೊಂಡು ದುರ್ಮರಣ ಪಡೆದವರಿದ್ದಾರೆ. ವಶೀಕರಣ ಗುಪ್ತನಿಧಿ, ಶೋಧನೆ ದುಷ್ಟಶಕ್ತಿಗಳ ಕ್ರೋಢೀಕರಣ
ಮರಣದ ಮನೆಯ ಶಕ್ತಿಯು ಪ್ರವಹಿಸುವ ಸಕಾರಾತ್ಮಕ ದಿಕ್ಕು ಅಥವಾ ನಕಾರಾತ್ಮಕ ದಿಕ್ಕು ಹಲವು ರೀತಿಯ ಶಿಷ್ಟ ಶಕ್ತಿಗಳನ್ನು ಒದಗಿಸಿದ ಹಾಗೆಯೇ ಹಲವು ವೈಪರಿತ್ಯಗಳನ್ನು ನಂಟುಹಾಕುತ್ತದೆ. ಆಯಾ ವ್ಯಕ್ತಿ ಈ ನಿಗೂಢ ಶಕ್ತಿಗಳನ್ನು ಒಳಿತಿಗೆ ಉಪಯೋಗಿಸಿಕೊಳ್ಳುತ್ತಾನೋ, ಕೆಟ್ಟದ್ದಕ್ಕೆ ಉಪಯೋಗಿಸಿಕೊಳ್ಳುತಾನೋ ಅವನ ವ್ಯಕ್ತಿತ್ವವು ಹರಳುಗಟ್ಟಿದ ರೀತಿಯ ಮೇಲಿಂದ ನಿರ್ಧಾರವಾಗುತ್ತದೆ. ಹಲವು ರೀತಿಯ ಮಾನಸಿಕ ವ್ಯಾಧಿಗಳನ್ನು ರೋಗ ರುಜಿನಗಳನ್ನು ಪರಿಹಾರವಾಗದ, ವ್ಯಾಕುಲತೆಗಳನ್ನು ಶಿಷ್ಟ ವ್ಯಕ್ತಿಗಳು ಅತ್ಯದ್ಭುತವಾಗಿ ನಿವಾರಿಸಿಕೊಡಬಲ್ಲರು. ಯಾರು ಶಿಷ್ಟರು ಎಂಬುದನ್ನು ಸರಿಯಾಗಿ ಹುಡುಕಬೇಕು. ಜಾತಕ ಕುಂಡಲಿಯಲ್ಲಿ ಒಬ್ಬ ವ್ಯಕ್ತಿ ಉತ್ತಮನೋ, ಕುತಂತ್ರಿಯೋ ಎಂಬುದನ್ನು ತಿಳಿಯಬಹುದು. ಉತ್ತಮನ ಬಲಿಗೆ ದುಷ್ಟರೂ, ದುಷ್ಟರ ಬಲಿಗೆ ಶಿಷ್ಟರೂ ಸಂಧಿಸುವ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ಆದರೆ ಒಳ್ಳೆಯವರು ದುಷ್ಟ ಶಕ್ತಿ ಸಂಪಾದಿಸಿಕೊಂಡು ಇರುವವರು ಇದ್ದೇ ಇರುತ್ತಾರೆ.
Related Articles
Advertisement