ಮುಂಬಯಿ: ಚುನಾವಣ ಪ್ರಚಾರದ ಸಮಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶಿವಸೇನೆಯ ಹಾತ್‌ಕಣಂಗಲೆ ಕ್ಷೇತ್ರದ ಹೊಸದಾಗಿ ಚುನಾಯಿತ ಸಂಸದ ಧೈರ್ಯಶೀಲ್ ಮಾಣೆ ಅವರು ಬುಧವಾರ ತಮ್ಮ ಪ್ರತಿಸ್ಪರ್ಧಿ ಮತ್ತು ರೈತ ನಾಯಕ ರಾಜು ಶೆಟ್ಟಿ ಅವರನ್ನು ಕೊಲ್ಲಾಪುರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ತೀವ್ರ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಹಾತ್‌ಕಣಂಗಲೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಧೈರ್ಯಶೀಲ್ ಅವರು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಶೆಟ್ಟಿ ಅವರನ್ನು 96,039 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಲೋಕಸಭಾ ಕ್ಷೇತ್ರವು ಶಾಹುವಾಡಿ, ಹಾತ್‌ಕಣಂಗಲೆ, ಈಚಲ್‌ಕಾರಂಜಿ, ಶಿರೋಲ್, ಇಸ್ಲಾಂಪುರ ಮತ್ತು ಶಿರಾಲಾ ವಿಧಾಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಶೆಟ್ಟಿ ಅವರು ಧೈರ್ಯಶೀಲ್ ಅವರ ತಾಯಿ ನಿವೇದಿತಾ ಮಾಣೆ (ಎನ್‌ಸಿಪಿ) ಅವರನ್ನು ಸೋಲಿಸಿದ್ದರು.
ಆರಂಭದಲ್ಲಿ ರಾಜು ಶೆಟ್ಟಿ ಅವರ ನಿವಾಸದಲ್ಲಿ ಧೈರ್ಯಶೀಲ್ ಮಾಣೆ ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭ ಧೈರ್ಯಶೀಲ್ ಅವರು ಶೆಟ್ಟಿ ಅವರ ತಾಯಿಗೆ ನಾನು ನಿಮ್ಮ ಮೊಮ್ಮಗನಂತೆ, ನನಗೆ ನಿಮ್ಮ ಆಶೀರ್ವಾದದ ಅಗತ್ಯವಿದೆ ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ಶೆಟ್ಟಿ ಅವರ ತಾಯಿ ಧೈರ್ಯಶೀಲ್ ಅವರಿಗೆ ತನ್ನ ಮಗನಂತೆ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಕೇಳಿಕೊಂಡರು. ಶೆಟ್ಟಿ ಮತ್ತು ಧೈರ್ಯಶೀಲ್ ಇಬ್ಬರೂ ತಾವು ಕೊಲ್ಲಾಪುರ ಜಿÇÉೆಯ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
2014ರಲ್ಲಿ ಎನ್‌ಡಿಎಯ ಮಿತ್ರಪಕ್ಷವಾಗಿದ್ದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು 2017ರಲ್ಲಿ ಕೇಸರಿ ಒಕ್ಕೂಟದಿಂದ ಹೊರಬಂದು ಕಾಂಗ್ರೆಸ್ ಜತೆಗೆ ಮೈತ್ರಿಮಾಡಿಕೊಂಡಿದೆ.