Advertisement

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

03:45 AM Jun 16, 2021 | Team Udayavani |

ಧ್ಯಾನ ಮಾಡುವ ಮುಖ್ಯ ಉದ್ದೇಶವೇ ಮನಸ್ಸಿಗೆ ಆಳವಾದ ವಿಶ್ರಾಂತಿಯನ್ನು ನೀಡುವುದು. ಸದಾ ಚಂಚಲವಾಗಿರುವ ಮನಸ್ಸನ್ನು ಏಕಾಏಕಿ ಕಟ್ಟಿ ಹಾಕಲು ಸಾಧ್ಯವಿಲ್ಲ. ಇದಕ್ಕಾಗಿ ನಿಯಮಿತ ಅಭ್ಯಾಸದ ಅಗತ್ಯವಿರುತ್ತದೆ. ಇದಕ್ಕಾಗಿ ನಾವು ವರ್ಷಾನುಗಟ್ಟಲೆ ಅಭ್ಯಾಸ ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರಿಂದಲೂ ಇದು ಸಾಧ್ಯವಿಲ್ಲ. ಆರಂಭದಲ್ಲಿ ಸಣ್ಣಪುಟ್ಟ ಅಭ್ಯಾಸಗಳನ್ನು ನಡೆಸಿ ಬಳಿಕ ನಿಧಾನವಾಗಿ ಹಠಯೋಗದಲ್ಲಿ ಬರುವ ಧ್ಯಾನಗಳನ್ನೂ ಮಾಡಬಹುದು. ಆದರೆ ಎಲ್ಲರಿಗೂ ಇದು ಕಷ್ಟ. ಇದಕ್ಕಾಗಿ ಸರಳ ಧ್ಯಾನ ಮತ್ತು ಟಿಬೇಟಿಯನ್‌ ಧ್ಯಾನವನ್ನು ಪರಿಚಯಿಸುತ್ತೇವೆ. ಇದನ್ನು ಎಲ್ಲರೂ ಎಲ್ಲಿ ಬೇಕಾದರೂ ಕುಳಿತು ಮಾಡಬಹುದು.

Advertisement

ಸಮಚಿತ್ತವಾಗಿರುವುದು ಮತ್ತು ಔಷಧಗಳ ಬಳಕೆ ಕಡಿಮೆ ಮಾಡುವುದು ಇಂದು ಎಲ್ಲರ ಉದ್ದೇಶವಾಗಿದೆ. ಇದಕ್ಕೆ ಯೋಗ ಥೆರಪಿಯೇ ಅತ್ಯುತ್ತಮ. ಆದರೆ ಯೋಗ ಮಾಡುವಾಗ ಯಮ ನಿಯಮಗಳನ್ನು ಪಾಲಿಸಬೇಕು, ಆಸನ, ಪ್ರಾಣಾ ಯಾಮ, ಪಥ್ಯಾಹಾರ, ಧಾರಣೆ, ಧ್ಯಾನವನ್ನು ಮಾಡಲೇಬೇಕು. ಮನಸ್ಸಿಗೆ ಒಳ್ಳೆಯ ಆಹಾರವನ್ನು ಕೊಡುವುದು ಮುಖ್ಯವಾಗುತ್ತದೆ.
ಇದಕ್ಕಾಗಿ ನಿತ್ಯವೂ ಸರಳ ಧ್ಯಾನವನ್ನು ಅಭ್ಯಾಸ ಮಾಡಬೇಕು. ಧ್ಯಾನ ಮಾಡಲು ದೇಹಕ್ಕೆ ಸಾಮರ್ಥ್ಯವಿರಬೇಕು. ಇದಕ್ಕಾಗಿ ಧ್ಯಾನದೊಂದಿಗೆ ಯೋಗಾಭ್ಯಾಸ ಮಾಡುವುದು ಕೂಡ ಅತ್ಯಗತ್ಯ. ಯೋಗದ ಮೂಲಕ ದೇಹವನ್ನು ಮೊದಲು ಹಿಡಿತಕ್ಕೆ ತಂದು ಪ್ರಾಣಾಯಾಮ (ಉಸಿರಿನ ಪೂರಕ, ರೇಚಕ ವೇಗವನ್ನು ಕಡಿಮೆ ಮಾಡು ವುದು)ದ ಮೂಲಕ ಪ್ರಾಣಶಕ್ತಿಯನ್ನು ಸೇರಿಸಿ ಧ್ಯಾನ ಮಾಡಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಬೇಕಾದರೆ ಮನಸ್ಸನ್ನು ಸ್ವತ್ಛವಾಗಿರಿ ಸಿಕೊಳ್ಳುವುದು ಅತ್ಯಗತ್ಯ. 15ರಿಂದ 40 ವರ್ಷ ದವರೆಗೆ ನಮಗೆ ಮರೆವು ಎನ್ನುವುದೇ ಇರಬಾರದು. ಒಂದು ವೇಳೆ ಇದ್ದರೆ ಅದು ನಮ್ಮ ಮನಸ್ಸಿನ ಸಮಸ್ಯೆಯಾಗಿರುತ್ತದೆ. ಧ್ಯಾನದಿಂದ ಇದನ್ನು ಸರಿಪಡಿಸಿಕೊಳ್ಳ ಬಹುದು.

ಸೂಕ್ತ ಸಮಯ: ಧ್ಯಾನ ಮಾಡಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ, ಸಂಜೆಯ ವೇಳೆ ಯಾದರೆ ಆಹಾರ ಸೇವನೆಯ ಮೂರು ಗಂಟೆಯ ಬಳಿಕ ಅಭ್ಯಾಸ ಮಾಡುವುದು ಉತ್ತಮ.

ಮಾಡುವ ವಿಧಾನ: ಧ್ಯಾನದಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಎಲ್ಲರಿಗೂ ಮಾಡಲು ಸುಲಭ ವಾಗುವ ಧ್ಯಾನವೆಂದರೆ ಸರಳ ಧ್ಯಾನ. ಇದರಲ್ಲಿ ಉಸಿರಿನ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸ ಲಾಗುತ್ತದೆ. ಒಂದು ರೀತಿಯಲ್ಲಿ ಇದು ಕ್ರೀಡೆಯಂತೆ ಭಾಸವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಲಯ ಬದ್ಧ ವಾದ ಉಸಿರಾಟವನ್ನು ಲೆಕ್ಕ ಹಾಕುವುದೇ ಸರಳ ಧ್ಯಾನದ ವಿಧಾನ. ಆರಂಭದಲ್ಲಿ 1- 50 ಬಳಿಕ ನಿಧಾನವಾಗಿ ಹೆಚ್ಚಿಸುತ್ತ ಹೋಗಬಹುದು.

ಟಿಬೇಟಿಯನ್‌ ಧ್ಯಾನ
ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಚಿನ್‌ಮುದ್ರೆ ಮಾಡಿ ಸುತ್ತಮುತ್ತಲಿನ ಪರಿಸರವನ್ನು ನೋಡುವುದು. ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು. ಜಾಗೃತ ಮನಸ್ಸಿನಿಂದ ಸುಪ್ತ ಮನಸ್ಸಿಗೆ ಹೋಗಬೇಕಾದರೆ ಇದನ್ನು ಸುಮಾರು 6- 7 ನಿಮಿಷಗಳ ಕಾಲ ಮಾಡಬೇಕು. ಇಲ್ಲಿ ನಮ್ಮ ಸುತ್ತಮುತ್ತ ನಡೆಯುವ ವಿವಿಧ ಶಬ್ಧಗಳ ಮೇಲೆ ಗಮನವಿರಿಸಲಾಗುತ್ತದೆ. ಬಳಿಕ ಸರಳ ಧ್ಯಾನ ಕ್ರಮವನ್ನು ಅನುಸರಿಸಬಹುದು.

Advertisement

ಮುದ್ರೆಯ ಅಗತ್ಯ: ನಮ್ಮ ಬೆರಳುಗಳಲ್ಲಿ ಅಪಾರ ಶಕ್ತಿ ಇದೆ. ಇದು ಪಂಚತಣ್ತೀಗಳನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ದ್ವಾದಶ ರಾಶಿ, ನವಗ್ರಹಗಳ ಶಕ್ತಿ ಇದೆ. ಹೀಗಾಗಿ ನಾವು ಧ್ಯಾನದಲ್ಲಿ ಕುಳಿತಾಗ ಮುದ್ರೆಗಳನ್ನು ಹಾಕಿ ಕುಳಿತುಕೊಳ್ಳುವುದು ಉತ್ತಮ. ಅದರಲ್ಲೂ ಚಿನ್‌ಮುದ್ರೆ (ಹೆಬ್ಬೆರಳು ಮತ್ತು ತೋರು ಬೆರಳಿನ ತುದಿ ಸ್ಪರ್ಶ) ಹಾಕಿ ಮಾಡುವುದು ಒಳ್ಳೆಯದು. ಇದರೊಂದಿಗೆ ಮಂತ್ರ ಮುದ್ರೆಯೂ ಒಳ್ಳೆಯದು. ಚಿನ್‌ಮುದ್ರೆಯು ನಮಗೆ ಫಿಸಿಯೋಥೆರಪಿ ಯಾಗಿದ್ದು, ಮಂತ್ರವು ಶಬ್ಧ ಥೆರಪಿಯಾಗಿದೆ. ಇದರಿಂದ ದೈಹಿಕ ಆರೋಗ್ಯ, ಚಿತ್ತ ಶಾಂತಿ, ಆಧ್ಯಾತ್ಮಿಕ ಸಾಧನೆ ಸಾಧ್ಯವಾಗುವುದು. ಮಂತ್ರಮುದ್ರೆಯಲ್ಲಿ ಸುಲಭ ಮಂತ್ರಗಳನ್ನು ಹೇಳಿದರೆ ಸಾಕು. ಯಾವುದೇ ಕಾರಣಕ್ಕೂ ತಪ್ಪಾಗಬಾರದು.

ಯಾವುದನ್ನೂ ಏಕಾಏಕಿ ಕಲಿಯಲಾಗದು. ಇದಕ್ಕೆ ತಾಳ್ಮೆಯ ಅಗತ್ಯವಿರುತ್ತದೆ. ಮುದ್ರೆಯನ್ನು ನಾವು ಯಾವಾಗ ಬೇಕಿದ್ದರೂ ಹಾಕಿಕೊಂಡು ಕುಳಿತುಕೊಳ್ಳಬಹುದು. ಆದರೆ ಧ್ಯಾನ, ಯೋಗವನ್ನು ಮಾತ್ರ ಖಾಲಿ ಹೊಟ್ಟೆಯಲ್ಲೇ ಮಾಡಬೇಕು. ಯೋಗದ ಮುಖ್ಯ ಉದ್ದೇಶವೇ ಆತ್ಮಶುದ್ಧಿ. ಇಲ್ಲಿ ಯಾವುದೇ ಧರ್ಮವನ್ನು ಪ್ರತಿನಿಧಿಸಲಾಗುವುದಿಲ್ಲ. ಇದಕ್ಕಾಗಿ ಯೋಗ ಮಾಡುವಾಗ ಇಷ್ಟ ದೇವರ ಪ್ರಾರ್ಥನೆಗೆ ಆದ್ಯತೆ ಕೊಡಲಾಗುತ್ತದೆ. ಧ್ಯಾನವನ್ನು ಆರಂಭದಲ್ಲಿ 10, 20, 30 ನಿಮಿಷಗಳಲ್ಲಿ ಮುಗಿಸಿದರೂ ಸಾಕು. ಇದು ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಿ ಮನಸ್ಸನ್ನು ಶಾಂತಗೊಳಿಸುತ್ತದೆ.

ಆತಂಕ ನಿವಾರಣೆ ಸಾಧ್ಯ
ಭಯ, ಆತಂಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮುದ್ರೆಯನ್ನು ಹಾಕಿ ಸರಳ ಧ್ಯಾನ ಮಾಡುವುದರಿಂದ ಇದರ ನಿವಾರಣೆ ಸಾಧ್ಯವಿದೆ. ಕೊರೊನಾ ಕಾಯಿಲೆಯ ಭಯವನ್ನು ಇದು ಹೋಗಲಾಡಿ ಸಿದೆ ಎನ್ನುವುದಕ್ಕೆ ಹಲವು ನಿದರ್ಶನಗಳೂ ಇವೆ.

ವಜ್ರಾಸನ, ಪದ್ಮಾಸನ, ಸುಖಾಸನ, ಸ್ವಸ್ತಿಕಾಸನ ಹೀಗೆ ಯಾವು ದಾದರೊಂದು ಆಸನದಲ್ಲಿ ಕುಳಿತು ಬೆನ್ನು ಮತ್ತು ಕುತ್ತಿಗೆಯನ್ನು ನೇರವಾಗಿಟ್ಟುಕೊಂಡು ಚಿನ್‌ಮುದ್ರೆಯಲ್ಲಿ ಮೂರು ಬಾರಿ ದೀರ್ಘ‌ ಉಸಿರನ್ನು ಒಳಗೆ ಎಳೆದು, ಹೊರಗೆ ಬಿಟ್ಟ ಬಳಿಕ ಪ್ರಾರಂಭಿಸಬೇಕು. ನೆಲದ ಮೇಲೆ ಕುಳಿತು ಮಾಡುವುದು ಕಷ್ಟವಾದರೆ ಕುರ್ಚಿಯಲ್ಲಿ ಕುಳಿತೂ ಮಾಡಬಹುದು.

ಯಾರಿಗೆ ಸೂಕ್ತ: ಧ್ಯಾನ ಮಾಡುವ ಅಭ್ಯಾಸವನ್ನು ಪ್ರಾರಂಭಿಸುವವರಿಗೆ, ಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ, ಕಚೇರಿ, ಮನೆ ಕೆಲಸಗಳ ಒತ್ತಡದಲ್ಲಿರು ವವರಿಗೆ, ಅವಸರದ ಜೀವನ ನಡೆಸುತ್ತಿರುವವರಿಗೆ ಇದು ಸೂಕ್ತವಾಗಿದೆ.
ಪ್ರಯೋಜನಗಳು: ಸರಳ ಧ್ಯಾನದಿಂದ ಮನಸ್ಸು ನಿರ್ಮಲ, ಶಾಂತವಾಗುವುದು, ಚಂಚಲತೆ ನಿವಾರಣೆಯಾ ಗುವುದು. ಯೋಗವನ್ನು ಇಷ್ಟಪಟ್ಟು ಮಾಡಬೇಕು ಹೊರತು ಕಷ್ಟಪಟ್ಟಲ್ಲ. ಯಾರಿಗೆ ಯಾವುದು ಸಾಧ್ಯವೋ ಅದ ನ್ನಷ್ಟೇ ಮಾಡಿದರೆ ಸಾಕು.

– ಗೋಪಾಲಕೃಷ್ಣ ದೇಲಂಪಾಡಿ, ಯೋಗ ತಜ್ಞರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next