Advertisement

ಸಿಎಂಗೆ ಧೈರ್ಯ ಇದ್ದರೆ ಚಾಮರಾಜನಗರದಲ್ಲಿ ಪ್ರಗತಿ ಪರಿಶೀಲನಾಸಭೆ ನಡೆಸಲಿ :ಧ್ರುವನಾರಾಯಣ ಸವಾಲು

06:44 PM Jan 12, 2021 | Team Udayavani |

ಹನೂರು (ಚಾಮರಾಜನಗರ): ಬಿಜೆಪಿಯವರಿಗೆ ಧೈರ್ಯ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಚಾಮರಾಜನಗರಕ್ಕೆ ಕರೆತಂದು ಪ್ರಗತಿ ಪರಿಶೀಲನೆ ಸಭೆ ನಡೆಸಿ ಎಂದು ಎಂದು ಮಾಜಿ ಸಂಸದ ಧ್ರುವನಾರಾಯಣ್ ಸವಾಲು ಎಸೆದಿದ್ದಾರೆ .

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 12ಕ್ಕೂ ಹೆಚ್ಚು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನಿಡಿ ಭರಪೂರ ಕೊಡುಗೆಗಳನ್ನು ನೀಡಿದ್ದರು. ಆದರೆ ಮೂಢನಂಬಿಕೆ ಮತ್ತು ಮೌಢ್ಯತೆಗೆ ಜೋತು ಬಿದ್ದು ಯಡಿಯೂರಪ್ಪ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಡುತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿಯವರಿಗೆ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿರುವುದು ಬೇಜವಾಬ್ದಾರಿತನ ಮತ್ತು ಹಾಸ್ಯಾಸ್ಪದ ಎಂದು ಗುಡುಗಿದ್ದಾರೆ.

ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಅದರಲ್ಲೂ ನಳೀನ್ ಕುಮಾರ್ ಕಟೀಲ್ ಮತ್ತು ಅನಂತ್ ಕುಮಾರ್ ಹೆಗಡೆ ಅವರಿಗೆ ನೈತಿಕತೆಯಿಲ್ಲ. ಮಹಾತ್ಮಗಾಂಧಿ ಅವರನ್ನು ಕೊಂದಂತಹ ನಾಥುರಾಂ ಗೋಡ್ಸೆಯನ್ನು ಪ್ರಶಂಸೆ ಮಾಡಿ ಪೂಜನೀಯ ಭಾವನೆಯಲ್ಲಿ ನೋಡುವವರು ಬಿಜೆಪಿಯವರು ಮತ್ತು ಆರ್‍ಎಸ್‍ಎಸ್‍ನವರು . ಇಂದಿಗೂ ಕೂಡ ಯಾವ ಆರ್‍ಎಸ್‍ಎಸ್ ಕಚೇರಿಯಲ್ಲಿಯೂ ಮಹಾತ್ಮಗಾಂಧಿಜಿ ಅವರ ಭಾವಚಿತ್ರವಿಲ್ಲ. ಬಿಜೆಪಿಯವರು ತೋರ್ಪಡಿಕೆಗೆ ಮಾತ್ರ ಮಹಾತ್ಮಗಾಂಧಿ ಮತ್ತು ರಾಮರಾಜ್ಯವನ್ನು ಪ್ರಸ್ತಾಪಿಸುತ್ತಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಏಳು ಶಾಸಕರಿಗೆ ಮಂತ್ರಿಪಟ್ಟ…ಯಾರ ಪಾಲಿಗೆ ಅದೃಷ್ಟ?

Advertisement

ಅಂಬೇಡ್ಕರ್ ಅವರಿಗೆ ಬಿಜೆಪಿಯವರು ಭಾರತ ರತ್ನ ನೀಡಿಲ್ಲ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನವನ್ನು ಸ್ವೀಕರಿಸಲು ಕೋಮುವಾದಿಗಳು ತಯಾರಿಲ್ಲ. ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನವನ್ನು ಸ್ವೀಕರಿಸಿ ಅದರ ಆಶಯಗಳನ್ನು ಈಡೇರಿಸಿ ಭಾರತ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವಲ್ಲಿ ಕಾಂಗ್ರೆಸ್ ಪಕ್ಷ ಬಹುಮುಖ್ಯ ಪಾತ್ರವಹಿಸಿದೆ, ಆ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ನೀಡಿದ್ದು ಬಿಜೆಪಿ ಪಕ್ಷವಲ್ಲ, ವಿ.ಪಿ.ಸಿಂಗ್ ಸರ್ಕಾರ ಭಾರತ ರತ್ನನೀಡಿದ್ದಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಬೆಂಬಲವನ್ನೇ ವಾಪಸ್ಸು ಪಡೆಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next