Advertisement

ಭರ್ಜರಿ ಶತದಿನ ಸಂಭ್ರಮ

11:35 AM Dec 24, 2017 | Team Udayavani |

ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವ ಚಿತ್ರವೂ ಈ ಮಟ್ಟಕ್ಕೆ ಸಂಭ್ರಮಿಸಿದ್ದಂತಿಲ್ಲ. ಆ ಮಟ್ಟಿಗೆ “ಭರ್ಜರಿ’ ಚಿತ್ರ ಸಂಭ್ರಮಿಸುತ್ತಿದೆ. “ಭರ್ಜರಿ’ ಚಿತ್ರವನ್ನು ಜನ ಇಷ್ಟಪಟ್ಟು, ಇದು 100 ದಿನ ಓಡುತ್ತದೆ ಎಂಬ ಮುನ್ಸೂಚನೆ ಸಿಕ್ಕ ದಿನದಿಂದಲೇ “ಭರ್ಜರಿ’ ತಂಡ ಹಾಗೂ ಧ್ರುವ ಸರ್ಜಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 25 ದಿನ, 50 ದಿನ, 75 ದಿನಗಳನ್ನು ಚಿತ್ರಮಂದಿರದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ತಂಡ ಈಗ ಶತದಿನ ಸಂಭ್ರಮದತ್ತ ಬಂದು ನಿಂತಿದೆ. ಹೌದು, ಧ್ರುವ ಸರ್ಜಾ ಅಭಿನಯದ “ಭರ್ಜರಿ’ ಚಿತ್ರ ಶತದಿನ ಪೂರೈಸಿದೆ. ಆ ಖುಷಿಯನ್ನು ಧ್ರುವ ಅಭಿಮಾನಿಗಳು ಇಂದು ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ.ಬೆಳಗ್ಗೆ 11 ಗಂಟೆಗೆ “ಭರ್ಜರಿ’ ಶತದಿನ ಸಂಭ್ರಮಾಚರಣೆ ನಡೆಯಲಿದ್ದು, ಮೈಸೂರು ಬ್ಯಾಂಕ್‌ ಸರ್ಕಲ್‌ನಿಂದ ನರ್ತಕಿ ಚಿತ್ರಮಂದಿರದವರೆಗೆ ನಟ ಧ್ರುವ ಅವರನ್ನು ಮೆರವಣಿಗೆ ಮೂಲಕ ಅಭಿಮಾನಿಗಳು ಕರೆತರಲಿದ್ದಾರೆ.

Advertisement

ಕಾರ್ಯಕ್ರಮವನ್ನು ಕಲರ್‌ಫ‌ುಲ್‌ ಗೊಳಿಸಬೇಕೆಂಬ ಉದ್ದೇಶದಿಂದ ಡೊಳ್ಳು ಕುಣಿತ. ವೀರಗಾಸೆ, ಮೈಸೂರು ನಗಾರಿ, ಪೂಜಾ ಕುಣಿತ, ಕೇರಳ ಚೆಂಡೆ, ಕೀಲುಗೊಂವೆ, ತಮಟೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ಮಾಡಲಿದ್ದಾರೆ. ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ. ಎಂದಿನಂತೆ ಹೂವಿನ ರಾಶಿ, ಪಟಾಕಿ ಸದ್ದು ಜೋರಾಗಿರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‌ಗೆ ಹೂವಿನ ಹಾರ, ಅಭಿಷೇಕ ಮೂಲಕ ಅಭಿಮಾನಿಗಳು ಖುಷಿಪಡಲಿದ್ದಾರೆ. ಚಿತ್ರ ಶತದಿನ ಆಚರಿಸಿದ ಸಂಭ್ರಮವನ್ನು ಚಿತ್ರತಂಡ 101 ಕೆಜಿಯ ಕೇಕ್‌ ಕತ್ತರಿಸುವ ಮೂಲಕ ಆಚರಿಸಲಿದೆ.

ಧ್ರುವ ಸರ್ಜಾ ನಾಯಕರಾಗಿರುವ “ಭರ್ಜರಿ’ ಚಿತ್ರದಲ್ಲಿ ರಚಿತಾ ರಾಮ್‌, ಹರಿಪ್ರಿಯಾ ನಾಯಕಿಯರು

Advertisement

Udayavani is now on Telegram. Click here to join our channel and stay updated with the latest news.

Next