Advertisement

War Begins Soon.. ಪ್ರೇಮ್‌ ಸಿನಿಮಾಕ್ಕಾಗಿ ಹೊಸ ಸಾಹಸಕ್ಕೆ ಮುಂದಾದ ಆ್ಯಕ್ಷನ್ ಪ್ರಿನ್ಸ್

03:30 PM Sep 24, 2022 | Team Udayavani |

ಬೆಂಗಳೂರು: ಜೋಗಿ ಪ್ರೇಮ್‌ ʼಏಕ್‌ ಲವ್‌ ಯಾʼ ಚಿತ್ರದ ಬಳಿಕ ಪ್ಯಾನ್‌ ಇಂಡಿಯಾ ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರೊಂದಿಗೆ ಅವರು ಸಿನಮಾ ಮಾಡುತ್ತಿದ್ದಾರೆ.

Advertisement

ಈ ಇಬ್ಬರ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. 70ರ ದಶಕದ ಮಾಸ್‌ ಕಥೆಯನ್ನಿಟ್ಟುಕೊಂಡು ಪ್ರೇಮ್‌ ಧ್ರುವ ಅವರಿಗಾಗಿ ಕಥೆ ಬರೆದಿದ್ದು, ಸಿನಿಮಾದ ಟೈಟಲ್‌ ಇನ್ನು ಫೈನಲ್‌ ಆಗಿಲ್ಲ.

ಇತ್ತೀಚಿಗೆ ನಿರ್ದೇಶಕ ಪ್ರೇಮ್‌ ಚಿತ್ರದ ಬಗ್ಗೆ ಹೊಸ ಅಪ್ಡೇಟ್‌ ವೊಂದನ್ನು ಕೊಟ್ಟಿದ್ದರು. ಪ್ರೇಮ್‌ ಅವರು, ಅವರ ಸಿನಿಮಾಗಳಲ್ಲಿ ಹಾಡಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಮ್ಯೂಸಿಕ್‌ ನೀಡಲಿದ್ದು, ಇದರೊಂದಿಗೆ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರೂ ಇರಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ಅವರನ್ನು ಭೇಟಿಯಾದ ಫೋಟೋವೊಂದನ್ನು ಹಂಚಿಕೊಂಡು ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದರು.

ಈಗ ಪ್ರೇಮ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ಹೊಸ ಅಪ್ಡೇಟ್‌ ವೊಂದನ್ನು  ಕೊಟ್ಟಿದ್ದಾರೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಧ್ರುವ ಸರ್ಜಾ ಅವರಿಗೆ ʼಪೊಗರುʼ ಸಿನಿಮಾದ ಬಳಿಕ ಬೇರೆ ಭಾಷೆಯಲ್ಲೂ ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ʼಪೊಗರುʼ ಸಿನಿಮಾದ ಧ್ರುವ ಸರ್ಜಾ ಅವರ ಡಬ್‌ ಅನ್ನು ಬೇರೆ ಭಾಷೆಯಲ್ಲಿ ಬೇರೆ ಕಲಾವಿದರು ಮಾಡಿದ್ದರು. ಆದರೆ ಪ್ರೇಮ್‌ ಅವರ ಮುಂದಿನ ಚಿತ್ರದಲ್ಲಿ ಸ್ವತಃ ಧ್ರುವ ಸರ್ಜಾ ಅವರೇ ಎಲ್ಲಾ ಭಾಷೆಗಳಿಗೂ ಮೊದಲ ಬಾರಿ ಡಬ್‌ ಮಾಡಲಿದ್ದಾರೆ.

ಈ ವಿಷಯವನ್ನು ನಿರ್ದೇಶಕ ಪ್ರೇಮ್‌ ಅವರು ಫೋಟೋವೊಂದನ್ನು ಹಂಚಿಕೊಂಡು ʼ War Begins Soon’ ಟೈಟಲ್‌, ಟೀಸರ್‌ ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದ್ದಾರೆ.

Advertisement

ಚಿತ್ರದ ಇತರ ಕಲಾವಿದರು ಹಾಗೂ ಪಾತ್ರವರ್ಗದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯನ್ನು ಚಿತ್ರ ತಂಡ ರಿವೀಲ್‌ ಮಾಡಿಲ್ಲ. ಸದ್ಯ ಧ್ರುವ ಸರ್ಜಾ ಎ.ಪಿ ಅರ್ಜುನ್‌ ಅವರ ʼಮಾರ್ಟಿನ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next