Advertisement

ಹೊಸ ಗೆಟಪ್‌ನಲ್ಲಿ ಧ್ರುವ

11:33 AM Sep 29, 2018 | |

ಧ್ರುವ ಸರ್ಜಾ ಅಭಿನಯದ ಚಿತ್ರಗಳೇಕೆ ತಡವಾಗುತ್ತಿವೆ? ಈ ಪ್ರಶ್ನೆಗೆ ಅವರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಆದರೆ, ತಡವಾದರೂ ವಿಶೇಷವಾಗಿಯೇ ತೆರೆಗೆ ಬರುವ ನಿರೀಕ್ಷೆ ಮಾತ್ರ ಇದ್ದೇ ಇದೆ. ಹೌದು, ಧ್ರವ ಸರ್ಜಾ ಅಭಿನಯದ “ಪೊಗರು’ ಸಿನಿಮಾ ಯಾವ ಹಂತದಲ್ಲಿದೆ. ಏನೆಲ್ಲಾ ಆಗುತ್ತಿದೆ ಎಂಬೆಲ್ಲಾ ಒಂದಷ್ಟು ಪ್ರಶ್ನೆಗಳು ಓಡಾಡುತ್ತಿದ್ದವು.

Advertisement

ಧ್ರುವ ಸರ್ಜಾ “ಪೊಗರು’ ಚಿತ್ರಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದು ಗೊತ್ತೇ ಇದೆ. ಚಿತ್ರದಲ್ಲಿ ಎರಡು ಶೇಡ್‌ ಇರುವುದರಿಂದ ಅದಕ್ಕಾಗಿ ತಮ್ಮ ಲುಕ್‌ ಚೇಂಜ್‌ ಮಾಡಿಕೊಂಡಿದ್ದೂ ಹೌದು. ಈಗ ಮತ್ತೂಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ, “ಪೊಗರು’ ಚಿತ್ರದ ಪಾತ್ರಕ್ಕಾಗಿ ಗಡ್ಡ, ಕೂದಲು ಬಿಟ್ಟಿದ್ದಾರೆ. ಈ ಗೆಟಪ್‌ನ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಖದ ಮೇಲೆ ಜೇಡವೊಂದು ಬಲೆ ಬಿಟ್ಟುಕೊಂಡಿದೆ. ಈ ಫೋಟೋ ನೋಡಿದರೆ, “ಭರ್ಜರಿ’ ಫೈಟ್‌ಗಾಗಿ ಮಾಡಿಕೊಂಡ ತಯಾರಿ ಎಂದೆನಿಸುವುದು ನಿಜ. ಅಂದಹಾಗೆ, ಧ್ರುವಸರ್ಜಾ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಸುಮಾರು 15ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next