Advertisement

Sanjay Gadhvi: ಹೃದಯಾಘಾತದಿಂದ ʼಧೂಮ್‌ʼ ನಿರ್ದೇಶಕ ಸಂಜಯ್‌ ಗಧ್ವಿ ನಿಧನ

12:58 PM Nov 19, 2023 | Team Udayavani |

ಮುಂಬಯಿ: ಬಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕ ಸಂಜಯ್ ಗಧ್ವಿ(57) ಭಾನುವಾರ(ನ.19 ರಂದು) ನಿಧನರಾಗಿದ್ದಾರೆ.

Advertisement

ಭಾನುವಾರ ಮುಂಜಾನೆ ಲೋಖಂಡವಾಲಾದಲ್ಲಿ ಮಾರ್ನಿಂಗ್‌ ವಾಕ್‌ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅವರ ದೇಹ ಬೆವರಲು ಆರಂಭಿಸಿದ್ದು, ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷೀಸಿದ ಬಳಿಕ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

2000 ರ ವರ್ಷದಲ್ಲಿ ‘ತೇರೆ ಲಿಯೆ’ ಸಿನಿಮಾದ ಮೂಲದ ನಿರ್ದೇಶಕ್ಕಿಳಿದ ಅವರು, 2004 ರಲ್ಲಿ ಬಂದ ʼಧೂಮ್‌ʼ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರ ಗಮನಕ್ಕೆ ಬಂದರು. ಹೃತಿಕ್‌ ರೋಷನ್‌ , ಅಭಿಷೇಕ್‌ ಬಚ್ಚನ್‌  ಅವರ ಈ ಸಿನಿಮಾದ ಸೀಕ್ವೆಲ್‌ 2006 ರಲ್ಲಿ ಬಂತು.  ʼಧೂಮ್‌ -2ʼ ಕೂಡ ಸಂಜಯ್ ಗಧ್ವಿ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು.

ಇದನ್ನೂ ಓದಿ: ರೇಪ್‌ ಸೀನ್‌ಗಳು ನನಗೆ ಹೊಸತಲ್ಲ, ತ್ರಿಶಾಳೊಂದಿಗೆ ಬೆಡ್‌ ರೂಮ್..‌ ಟೀಕೆಗೆ ಒಳಗಾದ ಮನ್ಸೂರ್‌

ಇದಾದ ಬಳಿಕ ಬಾಲಿವುಡ್‌ ನಲ್ಲಿ ಹಿಟ್‌ ನಿರ್ದೇಶಕರಾಗಿ ಗುರುತಿಸಿಕೊಂಡ ಸಂಜಯ್‌, ಸಾಲು ಸಾಲಾಗಿ, ‘ಮೇರೆ ಯಾರ್ ಕಿ ಶಾದಿ ಹೈ’ ,ಇಮ್ರಾನ್ ಖಾನ್ ಅಭಿನಯದ ‘ಕಿಡ್ನಾಪ್’. 2012 ರಲ್ಲಿ ಬಂದ ‘ಅಜಬ್ ಗಜಾಬ್ ಲವ್’ ಮತ್ತು 2020 ರಲ್ಲಿ ‘ಆಪರೇಷನ್ ಪರಿಂದೇ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

Advertisement

‘ಆಪರೇಷನ್ ಪರಿಂದೇ’ ಓಟಿಟಿಯಲ್ಲಿ ತೆರೆಕಂಡಿತ್ತು.

ನಿರ್ದೇಶಕ ಸಂಜಯ್‌ ಅವರ ನಿಧನಕ್ಕೆ ಯಶ್‌ ರಾಜ್‌ ಫಿಲ್ಮ್ಸ್‌ ಸೇರಿದಂತೆ ಅನೇಕ ಕಲಾವಿದರು, ನಿರ್ದೇಶಕರು, ಸಿನಿಮಂದಿ ಕಂಬನಿ ಮಿಡಿದಿದ್ದಾರೆ.

ಭಾನುವಾರ ಸಂಜೆ(ನ.19 ರಂದು) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next