Advertisement

M.S. Dhoni: ಧೋನಿಯ ಬೃಹತ್‌ ಗಾಜಿನ ಗ್ಯಾರೇಜ್‌ ವಿಡಿಯೋ ವೈರಲ್‌

08:47 PM Jan 28, 2024 | Team Udayavani |

ರಾಂಚಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬೈಕ್‌ಗಳು ಮತ್ತು ಕಾರುಗಳ ಮೇಲಿನ ಅಪಾರವಾದ ಪ್ರೀತಿ ಕುರಿತು ಎಲ್ಲಿರಿಗೂ ತಿಳಿದೇ ಇದೆ. ಕ್ರಿಕೆಟ್‌ ಅಭ್ಯಾಸ ಮಾಡದ ಸಂದರ್ಭಗಳಲ್ಲಿ ಅವರು ವಿನೂತನ ಮೋಟಾರ್‌ ಸೈಕಲ್‌ಗ‌ಳು ಅಥವಾ ವಿಂಟೇಜ್‌ ಕಾರುಗಳನ್ನು ಚಲಾಯಿಸುವುದನ್ನು ಅನೇಕರು ಕಂಡಿದ್ದಾರೆ.

Advertisement

ಇತ್ತೀಚಿಗೆ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿರುವ ಅವರ ಬೃಹತ್‌ ಗ್ಲಾಸ್‌ ಗ್ಯಾರೇಜ್‌ನ ವಿಡಿಯೋ ವೈರಲ್‌ ಆಗಿದೆ. ಯೂಟ್ಯೂಬರ್‌ ಒಬ್ಬರು ಅದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಗ್ಯಾರೇಜ್‌ನಲ್ಲಿರುವ ವಿವಿಧ ಬಗೆಯ ಮೋಟಾರ್‌ ಸೈಕಲ್‌ಗ‌ಳು, ತರಹೇವಾರಿ ವಿಂಟೇಜ್‌ ಕಾರುಗಳು ಎಲ್ಲರ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next